Categories: ಮೈಸೂರು

ದರ್ಶನ್ ಧ್ರುವನಾರಾಯಣ್ ಅವರಿಗೆ 25ಕ್ಕೂ ಹೆಚ್ಚು ವಕೀಲರ ಬೆಂಬಲ: ಜಗದೀಶ್

ನಂಜನಗೂಡು: ದರ್ಶನ್ ಧ್ರುವನಾರಾಯಣ್ ಅವರಿಗೆ 25ಕ್ಕೂ ಹೆಚ್ಚು ವಕೀಲರು ಬೆಂಬಲ ನೀಡುತ್ತೇವೆ ಎಂದು ವಕೀಲ ಹಾಗೂ ಬಾರ್ ಕೌನ್ಸಿಲ್ ಸದಸ್ಯ ಸಿಎಂ ಜಗದೀಶ್ ಹೇಳಿದರು.

ನಂಜನಗೂಡು ನಗರದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ನಂಜನಗೂಡು ವಿಧಾನಸಭಾ ಕ್ಷೇತ್ರ ತನ್ನದೇ ಆದ ಇತಿಹಾಸವನ್ನು ಹೊಂದಿದೆ‌. ನಂಜನಗೂಡು ಕ್ಷೇತ್ರದಲ್ಲಿ ಜನರಕ ಬದಲಾವಣೆ ಬಯಸುತ್ತಿದ್ದಾರೆ. ಈ ಚುನಾವಣೆ ಗಂಭೀರವಾಗಿದೆ.

ದರ್ಶನ್ ಒಂದೇ ತಿಂಗಳಲ್ಲಿ ತಂದೆ ಮತ್ತು ತಾಯಿ ಇಬ್ಬರನ್ನು ಕಳೆದುಕೊಂಡಿದ್ದಾರೆ. ದರ್ಶನ್ ಅನಿವಾರ್ಯ ಅಭ್ಯರ್ಥಿಯಾಗಿ ನಮ್ಮ ಮುಂದೆ ಬಂದು ನಿಂತಿದ್ದಾರೆ. ಬಿಜೆಪಿ ಸರ್ಕಾರಗಳ ಆಡಳಿತವನ್ನು ಜನರು ಗಮನಿಸಿದ್ದಾರೆ. ಈಗಿನ ಬಿಜೆಪಿ ಸರ್ಕಾರದ ಆಡಳಿತ ಹೇಗಿದೆ ಎಂಬುದನ್ನು ಜನರು ತಿಳಿಯಬೇಕು‌. ಅಂಬೇಡ್ಕರ್ ಅವರ ಸಂವಿಧಾನದ ಅಡಿಯಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಎಲ್ಲಾ ಜಾತಿ ಜನಾಂಗದ ಸಮುದಾಯದವರೆಗೂ ನ್ಯಾಯವನ್ನು ಒದಗಿಸಿದ್ದಾರೆ.

ಧ್ರುವನಾರಾಯಣ್ ಅವರು ಕೂಡ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಅಭಿವೃದ್ಧಿಪಡಿಸಿದವರು. ತಂದೆಯಂತೆಯೇ ಪ್ರಾಮಾಣಿಕವಾಗಿರುವ ದರ್ಶನ್ ಅವರನ್ನು ಈ ಬಾರಿ ಜನರು ಬೆಂಬಲಿಸಬೇಕು. ದರ್ಶನ್ ರವರನ್ನು ಅತಿ ಹೆಚ್ಚು ಮತಗಳಿಂದ ಗೆಲ್ಲಿಸಬೇಕು. ಈ ನಿಟ್ಟಿನಲ್ಲಿ 25ಕ್ಕೂ ಹೆಚ್ಚು ವಕೀಲರು ಅವರಿಗೆ ಬೆಂಬಲವನ್ನು ಸೂಚಿಸಿದ್ದೇವೆ. ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ತಂಡಗಳನ್ನು ರಚನೆ ಮಾಡಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲವನ್ನು ಸೂಚಿಸಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಕೀಲರಾದ ಕಾಂತರಾಜ್, ಸುರೇಶ್ ಪಾಳ್ಯ, ಬಚ್ಚೇಗೌಡ, ಚರಣ್ ಸೇರಿದಂತೆ ವಕೀಲರು ಭಾಗವಹಿಸಿದ್ದರು.

Sneha Gowda

Recent Posts

ದೇಶದದ್ಯಾಂತ ಪ್ರಜ್ವಲಿಸಿದ ಪ್ರಜ್ವಲ್‌ ಪೆನ್‍ಡ್ರೈವ್; ಈತ ಅದೆಂಥಾ ವಿಕೃತಕಾಮಿಯಾಗಿರಬೇಡ

ಹಾಸನದ ಸಂಸದರೂ ಆಗಿರೋ  ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಹಾಗೂ ಭವಾನಿ ದಂಪತಿಯ ಹಿರಿಯ ಮಗ ಪ್ರಜ್ವಲ್. ಈತನ ಕಾಮಕಾಂಡದ…

26 mins ago

ಜಾತಿ ನಿಂದನೆ ಕೇಸ್ ಹೆದರಿದ ಯುವಕ ಆತ್ಮಹತ್ಯೆಗೆ ಶರಣು

ಜಾತಿ ನಿಂದನೆ ಕೇಸ್‌ ದಾಖಲಿಸಿದ್ದಕ್ಕೆ ಹೆದರಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಲಾಡಮುಗಳಿ ಗ್ರಾಮದಲ್ಲಿ…

56 mins ago

ಚಾರ್ಜ್​ಗೆ ಇಟ್ಟ ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟ: ಹತ್ತಿರದ ಶಾಮಿಯಾನ‌ ಅಂಗಡಿ ಸುಟ್ಟು ಭಸ್ಮ

ಚಾರ್ಜ್​ಗೆ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟಗೊಂಡ ಘಟನೆ ಮಂಡ್ಯದ ಮಳವಳ್ಳಿ ಪಟ್ಟಣದ NES ಬಡಾವಣೆಯಲ್ಲಿ ನಡೆದಿದೆ.

1 hour ago

ದನದ ಮಾಂಸ ರಫ್ತಿನಲ್ಲಿ ಬಿಜೆಪಿ 2ನೇ ಸ್ಥಾನ: ಸಂತೋಷ್‌ ಲಾಡ್‌

ಬಿಜೆಪಿ ಸರಕಾರದ ಸಾಧನೆ ಕೇವಲ ಎರಡೇ ಎರಡು. ಒಂದು ದನದ ಮಾಂಸ ರಫ್ತಿನಲ್ಲಿ 2ನೇ ಸ್ಥಾನ. ಎರಡು ಮೋದಿ ಸ್ವಜಾಹೀರಾತಿಗಾಗಿ…

1 hour ago

ಚಾಮರಾಜನಗರ: ಸಾರಿಗೆ ಬಸ್‌ ತಡೆದು ವಿದ್ಯಾರ್ಥಿಗಳಿಂದ ಪ್ರತಿಭಟನೆ

ಬೆಳಗ್ಗೆ ಕಾಲೇಜುಗಳಿಗೆ ತೆರಳಲು ಸಮರ್ಪಕ ಬಸ್ ಸೌಕರ್ಯವಿಲ್ಲ ಎಂದು ಆರೋಪಿಸಿ ಕಾಲೇಜು ವಿದ್ಯಾರ್ಥಿಗಳು ಕೆ.ಎಸ್. ಆರ್. ಟಿ ಸಿ ಬಸ್…

2 hours ago

ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಉದ್ಯಮಿ ಹೃದಯಾಘಾತದಿಂದ ಮೃತ್ಯು

ಪುಣೆಯಿಂದ ಕುಂದಾಪುರಕ್ಕೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಉದ್ಯಮಿಯೋರ್ವರು ಹೃದಯಾಘಾತದಿಂದ ಮೃತಪಟ್ಟ ಘಟನೆ ನಿನ್ನೆ ಹೊನ್ನಾವರದಲ್ಲಿ ನಡೆದಿದೆ.

2 hours ago