ಚಾಮರಾಜನಗರ: ಇದೇ ನನ್ನ ಕೊನೆಯ ಚುನಾವಣೆ – ವಾಟಾಳ್ ನಾಗರಾಜ್

ಚಾಮರಾಜನಗರ: ಈ ಬಾರಿಯ ಚುನಾವಣೆಯಲ್ಲಿ ಜನರು ನನ್ನನ್ನು ಆಯ್ಕೆ ಮಾಡಿದರೆ ಚಾಮರಾಜನಗರವನ್ನು ಐತಿಹಾಸಿಕ ನಗರವನ್ನಾಗಿ ಮಾಡುತ್ತೇನೆ ಹಾಗೂ ನಿರಂತರವಾಗಿ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುತ್ತೇನೆ. ಒಂದು ವೇಳೆ ಆಯ್ಕೆ ಮಾಡದಿದ್ದಲ್ಲಿ ಚಾಮರಾಜನಗರದಲ್ಲಿ ಇದೇ ಕೊನೆ ಚುನಾವಣೆ, ಚಾಮರಾಜನಗರದ ಸಂಬಂಧವು ಸಹ ಕೊನೆಯಾಗಲಿದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಭ್ಯರ್ಥಿ ವಾಟಾಳ್ ನಾಗರಾಜ್ ಹೇಳಿದರು.

ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಸೇರಿದಂತೆ ವಿವಿಧೆಡೆ ಪ್ರಚಾರ ಕೈಗೊಂಡು ಮತಯಾಚನೆ ಮಾಡಿ ಮಾತನಾಡಿ ಚಾಮರಾಜನಗರಕ್ಕೆ ಆರು ದಶಕಗಳ ಕಾಲ ಸೇವೆ ಸಲ್ಲಿಸಿರುತ್ತೇನೆ. ನನ್ನನ್ನು ಉಳಿಸಿಕೊಳ್ಳುವ ಶಕ್ತಿ ನಿಮಗೆ ಬಿಟ್ಟಿದ್ದು, ನೀವು ನನ್ನ ಉಳಿಸಿಕೊಳ್ಳುತ್ತೀರಿ ಎಂಬ ಭರವಸೆ ವ್ಯಕ್ತಪಡಿಸಿದರಲ್ಲದೆ, ಚಾಮರಾಜನಗರದ ಅಭಿವೃದ್ಧಿಗಾಗಿ ನನ್ನನ್ನು ಆಯ್ಕೆ ಮಾಡಿ ಎಂದು ಮನವಿ ಮಾಡಿದರು.

ಚಾಮರಾಜನಗರಕ್ಕೆ ಕಾವೇರಿ ನೀರನ್ನು ತಂದು ನಗರದ ಜನತೆಗೆ ಅನುಕೂಲ ಕಲ್ಪಿಸಿದ್ದೇನೆ. ಚಾಮರಾಜನಗರ ತಾಲ್ಲೂಕನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಿದ್ದೇನೆ. ರಾಜಕೀಯ ಭ್ರಷ್ಟಚಾರದಿಂದ ಕೂಡಿದೆ. ನಾನು ಒಬ್ಬ ಸೂಪರ್ ಮಾಡೆಲ್, ಇವತ್ತು ಯಾರಾದರೂ ಶಾಸನ ಸಭೆಗೆ ವಾಟಾಳ್‌ ನಾಗರಾಜ್‌ ಗಿಂತ ಮತ್ತೊಬ್ಬ ವ್ಯಕ್ತಿ ಶಾಸನಸಭೆಗೆ ಸರಿಯೆಂದು ಪ್ರಾಮಾಣಿಕವಾಗಿ ಹೇಳಿದರೆ ಸಂತೋಷಪಡುತ್ತೇನೆ ಎಂದರು.

ಚಾಮರಾಜನಗರದ ಅಭಿವೃದ್ಧಿಗೆ ಕಾವೇರಿ 2ನೇ ಹಂತ ತರಬೇಕು, ಚಂದಕವಾಡಿ, ಬದನಗುಪ್ಪೆ ಗ್ರಾಮಗಳನ್ನು ಉಪನಗರವನ್ನಾಗಿ ಮಾಡಬೇಕು. ಚಾಮರಾಜನಗರಕ್ಕೆ ಕಳೆದ 15 ವರ್ಷಗಳಿಂದ ಒಂದು ನಯಾಪೈಸೆ ನೀಡಿಲ್ಲ. ನಗರಕ್ಕೆ ಮುಖ್ಯಮಂತ್ರಿಗಳು ಆಗಮಿಸದೇ ಚಾಮರಾಜನಗರವನ್ನು ಕಡೆಗಣಿಸಿದ್ದಾರೆ. ಇದು ಚಾಮರಾಜನಗರಕ್ಕೆ ಮಾಡಿದ ಅಪಮಾನ. ನಗರದ ಅಭಿವೃದ್ಧಿಗೆ ಚಿಂತನೆ ಮಾಡಬೇಕು. ಇದಕ್ಕಾಗಿ ವಾಟಾಳ್ ಗೆಲ್ಲಬೇಕು. ನನ್ನ ಬಳಿ ಹಣ ಇಲ್ಲ, ನನಗೆ ಜಾತಿ ಇಲ್ಲ. ನನಗೆ ಜನರ ಪ್ರೀತಿ ಅಭಿಮಾನವಿದೆ. ಚಾಮರಾಜನಗರದ ಜನರನ್ನು, ಹಾಗೂ ಮತದಾರರನ್ನು ವ್ಯಾಪಾರ ಮಾಡಲು ಆಗುವುದಿಲ್ಲ. ಚುನಾವಣಾ ಆಯೋಗವು ಪ್ರತಿ ಹೋಬಳಿ ಕೇಂದ್ರಕ್ಕೂ ವೀಕ್ಷಕರನ್ನು ನೇಮಕಮಾಡಬೇಕು, ಹಣ ಹಂಚದಂತೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದರಲ್ಲದೆ, ಕಾಂಗ್ರೆಸ್, ಬಿಜೆಪಿಯವರ ಅಪಪ್ರಚಾರಕ್ಕೆ ಕಿವಿಗೊಡದೆ ನನಗೆ ಮತನೀಡಿ ನನ್ನನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಹುಂಡಿ ಬಸವಣ್ಣ, ಬಸಪ್ಪನಪಾಳ್ಯ ಕುಮಾರ, ಗೋಪಾಲನಾಯ್ಕ, ವರದನಾಯ್ಕ, ವಡ್ಡರಹಳ್ಳಿ, ಪಣ್ಯದಹುಂಡಿ ರಾಜು, ಚಾ.ರಂ. ಶ್ರೀನಿವಾಸಗೌಡ, ಸಂಜು, ರಾವತ್, ಶಿವಲಿಂಗಮೂರ್ತಿ ಸೇರಿದಂತೆ ಮತ್ತಿತರರು ಹಾಜರಿದ್ದರು.

Ashika S

Recent Posts

ಬಸ್ಸೊಂದು ನದಿ ಕಣಿವೆಗೆ ಉರುಳಿ 20 ಪ್ರಯಾಣಿಕರು ಮೃತ್ಯು

ಪ್ರಯಾಣಿಕರ ಬಸ್ಸೊಂದು ಬೆಟ್ಟ ಪ್ರದೇಶದಲ್ಲಿ ಚಲಿಸುವಾಗ ನದಿ ಕಣಿವೆಗೆ ಉರುಳಿ ಕನಿಷ್ಠ 20 ಜನ ಮೃತಪಟ್ಟಿರುವ ಘಟನೆ ವಾಯವ್ಯ ಪಾಕಿಸ್ತಾನದಲ್ಲಿ…

11 mins ago

ಶಿವಸೇನೆಯ ನಾಯಕರನ್ನು ಕರೆತರಲು ಹೊರಟಿದ್ದ ಹೆಲಿಕಾಪ್ಟರ್​ ಪತನ

ಮಹಾರಾಷ್ಟ್ರದ ರಾಯಗಢದಲ್ಲಿ ಶುಕ್ರವಾರ ಶಿವಸೇನೆಯ ನಾಯಕರನ್ನು ಕರೆತರಲು ಹೊರಟಿದ್ದ ಹೆಲಿಕಾಪ್ಟರ್​ ಪತನಗೊಂಡಿರುವ ಘಟನೆ  ನಡೆದಿದೆ.

24 mins ago

ಅಂಚೆಮತಪತ್ರ ವಿತರಣೆ: ಮೇ.1 ರಂದು1262 ಜನ ಸಿಬ್ಬಂದಿಯಿಂದ ಮತದಾನ

ಧಾರವಾಡ ಲೋಕಸಭೆ ಮತಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯ ನಿಯೋಜಿತರಾದ ಸಿಬ್ಬಂದಿ, ಅಧಿಕಾರಿಗಳು ಧಾರವಾಡ ಲೋಕಸಭಾ ಮತಕ್ಷೇತ್ರದ ಮತದಾರರಾಗಿದ್ದು ಮತ್ತು ಚುನಾವಣಾ ಆಯೋಗ…

42 mins ago

ಪುತ್ರನ ಕರ್ಮಕಾಂಡ; ಭವಾನಿ ರೇವಣ್ಣಗೂ ಎಸ್‌ಐಟಿ ನೋಟಿಸ್‌ !

ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಇದೀಗ ದೇಶ್ಯಾದ್ಯಂತ ಸದ್ದು ಮಾಡುತ್ತಿದ್ದು, ಈಗಾಗಲೇ ಈ ಸಂಬಂಧ ಸಂತ್ರಸ್ತೆಯರ ಆರೋಪದ ಮೇಲೆ…

53 mins ago

ಲೈಂಗಿಕ ದೌರ್ಜನ್ಯ ಕೇಸ್: ನಿರೀಕ್ಷಣಾ ಜಾಮೀನು ಅರ್ಜಿ ಹಿಂಪಡೆದ ರೇವಣ್ಣ

ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್​​ನಲ್ಲಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು…

1 hour ago

ಅಧಿಕ ಬಿಸಿಲಿನ ತಾಪಮಾನ, ಬಿಸಿಗಾಳಿಯಿಂದ ತತ್ತರಿಸಿದ ಧಾರವಾಡ

ಇದೀಗ ಅಧಿಕ ಬಿಸಿಲಿನ ತಾಪಮಾನ ಹಾಗೂ ಬಿಸಿಗಾಳಿಯಿಂದ ತತ್ತರಿಸುತ್ತಿದೆ. ಧಾರವಾಡ ಜಿಲ್ಲೆಯ ಜನರಂತೂ ಬಿಸಿಲಿನ ತಾಪಮಾನದಿಂದ ತತ್ತರಿಸಿ ಹೋಗಿದ್ದಾರೆ.

1 hour ago