Categories: ಮೈಸೂರು

ಚಿಕ್ಕದೇವಮ್ಮನ ಬೆಟ್ಟದಲ್ಲಿ ಭೀಮನ ಅಮಾವಾಸ್ಯೆ ಪೂಜೆ

ಸರಗೂರು: ತಾಲೂಕಿನ ಅಧಿದೇವತೆ ಚಿಕ್ಕದೇವಮ್ಮನ ಬೆಟ್ಟದಲ್ಲಿ ಸೋಮವಾರ ಭೀಮನ ಅಮಾವಾಸ್ಯೆಯ ವಿಶೇಷ ಪೂಜೆ ವಜೃಂಭಣೆಯಿಂದ  ನಡೆದಿದ್ದು, ಈ ವೇಳೆ ದೇಗುಲಕ್ಕೆ ಆಗಮಿಸಿದ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದು ಪುನೀತರಾದರು.

ಭೀಮನ ಅಮಾವಾಸ್ಯೆ ಹಿನ್ನಲೆಯಲ್ಲಿ ಬೆಟ್ಟದ ಚಿಕ್ಕದೇವಮ್ಮ ತಾಯಿಯನ್ನು ಮುತ್ತು ಮತ್ತು ನಿಂಬೆಹಣ್ಣು, ವಿವಿಧ ಹೂವುಗಳಿಂದ ಅಲಂಕಾರಗೊಳಿಸಲಾಗಿತ್ತು. ಬೆಳಗ್ಗೆ 6ಗಂಟೆಯಿಂದಲೇ ತಾಯಿಗೆ  ಪಂಚಾಮೃತಾಭಿಷೇಕ, ಹೋಮ-ಹವನ ಸೇರಿದಂತೆ ನಾನಾ ಬಗೆಯ ಪೂಜಾ ಕಾರ್ಯಕ್ರಮ ನೆರವೇರಿತು.

ಆಷಾಢದ ಕೊನೆಯ ಅಮಾವಾಸ್ಯೆಯಾದ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ಸರತಿ ಸಾಲಿನಲ್ಲಿ ನಿಂತು ತಾಯಿಯ ದರ್ಶನ ಪಡೆದು ಪುನೀತರಾದರು. ನವ ವಧು-ವರರು ಬೆಟ್ಟಕ್ಕೆ ಆಗಮಿಸಿ, ನಮ್ಮ ಮುಂದಿನ ಬದುಕು ಬಂಗಾರವಾಗಲಿ ಎಂದು ಹರಸಿ, ತಾಯಿಗೆ ವಿಶೇಷ ಪೂಜೆ ನೆರವೇರಿಸಿದರು.

ಬೆಳಗ್ಗೆಯಿಂದಲೆ ದೇವರ ಉತ್ಸವಮೂರ್ತಿಯನ್ನು ಪ್ರಕಾರೋತ್ಸವ ಮಾಡಲಾಯಿತು, ಕುಂಕುಮಾರ್ಚನೆ ನೆರವೇರಿಸಲಾಯಿತು. ನಂತರ ರಾಜೋಪಚಾರ ಪೂಜೆ ನಡೆಯಿತು. ಭಕ್ತರಿಗೆ ಸಿಹಿ ವಿತರಣೆ ಮಾಡಲಾಯಿತು.  ಇದಲ್ಲದೆ ತಾಯಿಯ ಎದುರುಗಡೆ ಇರುವ ಕಾಲಭೈರವೇಶ್ವರಸ್ವಾಮಿಗೆ ಹೂವಿನ ಅಲಂಕಾರಗೊಳಿಸಲಾಗಿತ್ತು. ಅದೇ ರೀತಿ ಭೀಮೇಶ್ವರ ಮೂರ್ತಿಗೂ ವಿಶೇಷವಾಗಿ ಶೃಂಗರಿಸಿ, ಪೂಜೆ ನೆರವೇರಿಸಲಾಯಿತು.

ಇಲ್ಲಿಗೆ ನಾನಾ  ಕಡೆಗಳಿಂದ  ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಭಕ್ತರ ದರ್ಶನಕ್ಕೆ ಅನುಕೂಲವಾಗಲೆಂದು ಸರಗೂರು ಪೊಲೀಸ್ ಠಾಣೆ ಉಪನಿರೀಕ್ಷಕ  ಸಿ ನಂದೀಶ್‌ಕುಮಾರ್ ನೇತೃತ್ವದಲ್ಲಿ ಬಾರಿ ಪೊಲೀಸ್ ಬಂದ್ ಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ದೇವಸ್ಥಾನದ ಇಒ ರಘು, ಪಾರುಪತ್ತೇದಾರರಾದ ಶಾಂತಿಪುರ ಮಹದೇವಸ್ವಾಮಿ, ಆರ್ಚಕರಾದ ಲಿಂಗಪ್ಪ, ಮಣಿ, ಮನು, ನಿಂಗರಾಜು, ಸಂತೋಷ್, ಮಹದೇವಸ್ವಾಮಿ, ಪ್ರಸನ್ನ, ದೇವಣ್ಣ, ಪ್ರಸನ್ನಕುಮಾರ್, ಶಿವಕುಮಾರ್, ಚಿಕ್ಕದೇವಣ್ಣ, ವೀರಣ್ಣ ಹಾಗೂ ಸಿಬಂದ್ದಿಗಳಾದ ಕೃಷ್ಣ ಇನ್ನಿತರರು ಹಾಜರಿದ್ದರು.

Gayathri SG

Recent Posts

ಬೆಂಗಳೂರಿನ ಖಾಸಗಿ ಶಾಲೆಗೆ ಮಧ್ಯರಾತ್ರಿ ಬಾಂಬ್‌ ಬೆದರಿಕೆ

ದೇಶದಾದ್ಯಂತ ಬಾಂಬ್‌ ಬೆದರಿಕೆ ಹಾಕುತ್ತಿರುವ ಹಿನ್ನಲೆಯಲ್ಲಿ ಇದೀಗ ನಗರದ ಖಾಸಗಿ ಶಾಲೆಯೋಂದಕ್ಕೆ ದುಷ್ಕರ್ಮಿಗಳು ಬಾಂಬ್‌ ಬೆದರಿಕೆ ಹಾಕಿದ್ದಾರೆ. ಅಮೃತಹಳ್ಳಿ ಠಾಣಾ…

12 mins ago

ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಗೆ ವೈದ್ಯಾಧಿಕಾರಿಯಿಂದ ಹಲ್ಲೆ; ಕುಸಿದು ಸಾವನ್ನಪ್ಪಿದ ಕಿಟ್ಟ

ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರಿಗೆ ಪಶು ವೈದ್ಯಾಧಿಕಾರಿಯೊಬ್ಬರು ಹಲ್ಲೆ ನಡೆಸಿದ ಕಾರಣ ವ್ಯಕ್ತಿ ಕುಸಿದು ಬಿದ್ದು ಸಾವನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ…

24 mins ago

ಸಲ್ಮಾನ್‌ ಖಾನ್‌ ಮನೆ ಮೇಲೆ ಗುಂಡಿನ ದಾಳಿ ಕೇಸ್‌: ಆರನೇ ಆರೋಪಿ ಬಂಧನ

ಕಳೆದ ಏಪ್ರೀಲ್‌ನಲ್ಲಿ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರ ಮನೆ ಬಳಿ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರನೇ…

34 mins ago

ಯೆನೆಪೋಯದಲ್ಲಿ ದಕ್ಷಿಣ ಭಾರತ ಅಂತರ್ ಕಾಲೇಜು ಅಲೈಡ್ ಸ್ಪೋರ್ಟ್ಸ್ ಫೆಸ್ಟ್

ಸೌತ್ ಇಂಡಿಯಾ ಇಂಟರ್‌ಕಾಲೇಜಿಯೇಟ್ ಅಲೈಡ್ ಸ್ಪೋರ್ಟ್ಸ್ ಫೆಸ್ಟ್, ಮೇ 13 ರಿಂದ ಮೇ 16, 2024 ರವರೆಗೆ ಯೆನೆಪೊಯ ಸ್ಕೂಲ್…

48 mins ago

ಮೇ.19 ರಂದು 6ನೇ ತರಗತಿ ಪ್ರವೇಶಾತಿ ಪರೀಕ್ಷೆ

ಅಲ್ಪಸಂಖ್ಯಾತರ ಮೊರಾರ್ಜಿ ದೇಸಯಿ ವಸತಿ ಶಾಲೆಗಳು, ಸರ್ಕಾರಿ ಮುಸ್ಲಿಂ ವಸತಿ ಶಾಲೆಗಳು ಹಾಗೂ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ವಸತಿ ಶಾಲೆಗಳಿಗೆ 2024-25ನೇ…

56 mins ago

ಪ್ರಜ್ವಲ್ ರೇವಣ್ಣ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೆಆರ್‌ಎಸ್ ಪಕ್ಷ ಹೋರಾಟ

ಹೆಣ್ಣು ಮಕ್ಕಳನ್ನು ತನ್ನ ಆಟದ ಸಾಮಾನೆಂದು ಬಳಸಿಕೊಂಡ ಪ್ರಜ್ವಲ್ ರೇವಣ್ಣ ಹಾಗೂ ಅವರ ಕುಟುಂಬಸ್ಥರ ಮೇಲೆ ಕಾನೂನಿನ ಕ್ರಮವನ್ನು ತೆಗೆದುಕೊಳ್ಳಬೇಕೆಂದುಕಳೆ…

1 hour ago