Categories: ಮೈಸೂರು

ಸ್ವಾಮೀಜಿಗಳ ಬಗ್ಗೆ ನನಗೆ ಈಗಲೂ ಗೌರವ ಇದೆ, ಮುಂದೆಯೂ ಇರುತ್ತೆ; ಸಿದ್ದರಾಮಯ್ಯ

ಮೈಸೂರು : ಹಿಜಾಬ್​ ವಿಚಾರದಲ್ಲಿ ಸ್ವಾಮೀಜಿಗಳನ್ನು ಎಳೆದುತಂದ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಭುಗಿಲೇಳುತ್ತಿದ್ದಂತೆ ಡ್ಯಾಮೇಜ್ ಕಂಟ್ರೋಲ್​ ಸಿದ್ದು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ನೀವೆ ಪ್ರಶ್ನೆ ಕೇಳ್ತೀರಿ, ಕಾಂಟ್ರವರ್ಸಿನೂ ನೀವೇ ಮಾಡ್ತೀರಿ ಎಂದು ಸುದ್ದಿಗಾರರಿಗೆ ಹೇಳಿದ ಸಿದ್ದರಾಮಯ್ಯ, ನಮ್ಮ ಹೆಣ್ಣು ಮಕ್ಕಳು ಕೂಡ ದುಪ್ಪಟ್ಟಾ ಹಾಕ್ತಾರೆ ಎಂದಿದ್ದೆ.

ಹಿಜಾಬ್ ಬಗ್ಗೆ ನಾನು ಪ್ರಶ್ನೆಯನ್ನೇ ಮಾಡಿಲ್ಲ. ಹಿಜಾಬ್ ಬೇರೆ, ದುಪ್ಪಟ್ಟಾ ಬೇರೆ. ಬುರ್ಖಾ ಬೇರೆ. ಹಿಂದಿನಲ್ಲಿ ಉರ್ದುನಲ್ಲಿ ದುಪ್ಪಟ್ಟಾ ಅಂತ ಕರೀತಾರೆ ಅದನ್ನೇ ನಾನು ಹೇಳಿದೆ ಸಮರ್ಥಿಸಿಕೊಂಡರು.

ನಾನು ಸ್ಪಷ್ಟವಾಗಿ ಹೇಳುತ್ತೇನೆ. ಸ್ವಾಮೀಜಿಗಳ ಬಗ್ಗೆ ನನಗೆ ಅಪಾರ ಗೌರವವಿದೆ. ಈಗಲೂ ಇದೆ, ಮುಂದೆಯೂ ಇರತ್ತೆ. ಯಾವತ್ತೂ ಕೂಡ ಸ್ವಾಮೀಜಿಗಳಿಗೆ ಅಗೌರವವಾಗಿ ನಡೆದುಕೊಂಡಿರುವ ನಿದರ್ಶನ ಇಲ್ಲ. ಅವರ ಜತೆ ಸಂಬಂಧ ಮೊದಲಿನಿಂದಲೂ ಚೆನ್ನಾಗಿದೆ. ಸಮವಸ್ತ್ರದ ಜತೆ ಹೆಣ್ಣುಮಕ್ಕಳಿಗೆ ದುಪ್ಪಟ್ಟಾ ಹಾಕಲು ಅವಕಾಶ ಮಾಡಿ ಕೊಡಿ. ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು, ಪರೀಕ್ಷೆ ಬರೆಯಲು ಅವಕಾಶ ಮಾಡಿ ಕೊಡಿ ಎಂದು ಮನವಿ ಮಾಡಿದ್ದೇನೆ ಎನ್ನುತ್ತಾ ವಿವಾದಕ್ಕೆ ತೆರೆ ಎಳೆಯಲು ಯತ್ನಿಸಿದರು.

ನಾನು ಬಿಜೆಪಿಗೆ ಉತ್ತರ ಕೊಡಲ್ಲ. ಹಿಜಾಬ್​ಗೆ ಸ್ವಾಮೀಜಿಗಳ ಶಿರವಸ್ತ್ರವನ್ನ ಹೋಲಿಕೆ ಮಾಡಿಲ್ಲ. ಹಿಜಾಬ್ ಪ್ರಸ್ತಾಪವನ್ನೇ ಮಾಡಿಲ್ಲ. ಸದನದಲ್ಲೂ ದುಪ್ಪಟ್ಟಾ ಹಾಕೋದಕ್ಕೆ ಅವಕಾಶ ಮಾಡಿಕೊಡಿ ಅಂತ ಕೇಳಿದ್ದೇನೆ. ನ್ಯಾಯಾಲಯಕ್ಕೂ ಗೌರವ ಕೊಡಬೇಕು. ಸರ್ಕಾರ ಪರೀಕ್ಷೆ ಬರೆಯುವುದಕ್ಕೂ ಅವಕಾಶ ಮಾಡಿಕೊಡಬೇಕು. ಸಮವಸ್ತ್ರ ಹಾಕಿಕೊಳ್ಳಬೇಕು. ದುಪ್ಪಟ್ಟಾ ಹಾಕೋದಕ್ಕೂ ಅವಕಾಶ ಮಾಡಿಕೊಡಬೇಕು ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು.

Gayathri SG

Recent Posts

ಅಂಜಲಿ ಹತ್ಯೆ ಪ್ರಕರಣ: ನನ್ನ ಮಗನಿಗೆ ಕೋರ್ಟ್ ಯಾವ ಶಿಕ್ಷೆ ಬೇಕಾದರು ಕೊಡಲಿ ಎಂದ ಆರೋಪಿ ಗಿರೀಶ್ ತಾಯಿ

ನನ್ನ ಮಗ ಗಿರೀಶ್ ತಪ್ಪು ಮಾಡಿದ್ದಾನೆ. ಅವನಿಗೆ ಕೋರ್ಟ್ ಯಾವ ಶಿಕ್ಷೆ ಬೇಕಾದರು ಕೊಡಲಿ. ಅಂಜಲಿ ಮತ್ತು ಗಿರೀಶ್ ಪರಸ್ಪರ…

11 mins ago

ಸ್ವಾತಿ ಹಲ್ಲೆ ಪ್ರಕರಣ : ಹೊಸ CCTV ಫೂಟೇಜ್ ಬಿಡುಗಡೆ ಮಾಡಿದ ಎಎಪಿ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರು ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ನಡೆಸಿದ…

12 mins ago

ಮರಕ್ಕೆ ಕಾರು ಡಿಕ್ಕಿ: ನಾಲ್ವರು ಕಾನೂನು ವಿದ್ಯಾರ್ಥಿಗಳು ಮೃತ್ಯು

ಅತಿ ವೇಗವಾಗಿ ಬಂದ ಕಾರೊಂದು ಭಯಾನಕವಾಗಿ ಇನ್ನೊಂದು ಕಾರಿಗೆ ಡಿಕ್ಕಿಯಾಗಿ ಮತ್ತೆ ಮರಕ್ಕೆ ರಭಸದಿಂದ ಗುದ್ದಿದ್ದರಿಂದ ನಾಲ್ವರು ಕಾನೂನು ವಿದ್ಯಾರ್ಥಿಗಳು…

34 mins ago

ಸಮಸ್ಯೆಗಳ ಆಗರ: ಮೂಲಸೌಕರ್ಯಗಳ ಕೊರತೆಗೆ ಬೇಸತ್ತ ಸಾರ್ವಜನಿಕರು

ಪಟ್ಟಣದಲ್ಲಿ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಸ್ಥಳೀಯ ಆಡಳಿತದ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರು ಬೇಸರಗೊಂಡಿದ್ದಾರೆ. ಪಟ್ಟಣದಲ್ಲಿ ಒಟ್ಟು 27 ವಾರ್ಡ್‌ಗಳು…

44 mins ago

ನಾಳೆ ಶ್ರೀ ಅವಿಜ್ಞ ಸಾಯಿಬಾಬಾ ಪ್ರತಿಷ್ಠಾಪನೆ

ತಾಲ್ಲೂಕಿನ ಬಿಳಿಗೆರೆ ಹೋಬಳಿಯ ಸರಗೂರು ಗ್ರಾಮದಲ್ಲಿ ಮೇ.19 ರಂದು ಭಾನುವಾರ ಶ್ರೀ ಅವಿಜ್ಞ ಸಾಯಿ ಕ್ಷೇತ್ರದಲ್ಲಿ ಶ್ರೀ ಅವಿಜ್ಞ ಸಾಯಿಬಾಬಾ…

46 mins ago

ಚಾಮರಾಜನಗರದಲ್ಲಿ ಮುಂದುವರೆದ ಮಳೆ ಆರ್ಭಟ: ವಾಹನ ಸವಾರರ ಪರದಾಟ

ಗಡಿಜಿಲ್ಲೆ ವರುಣಾರ್ಭಟ ಮುಂದುವರೆದಿದ್ದು ಶನಿವಾರ ಮಧ್ಯಾಹ್ನದ ಜಿಲ್ಲಾಕೇಂದ್ರದಲ್ಲಿ ಒಂದೂವರೆ ತಾಸು ಜೋರು ಮಳೆಯಾಯಿತು.

57 mins ago