Categories: ಮೈಸೂರು

ರಕ್ತಹೀನತೆಯಿಂದ ಗರ್ಭಿಣಿಯರ ಸಾವು ಹೆಚ್ಚಳ

ರಾಮನಗರ: ರಕ್ತಹೀನತೆ ಸಮಸ್ಯೆಯಿಂದ ಮಹಿಳೆಯರು ಹಾಗೂ ಗರ್ಭಿಣಿಯರು ಬಳಲುತ್ತಿದ್ದು, ಮಕ್ಕಳು ಹದಿಹರೆಯ ವಯಸ್ಸಿಗೆ ಕಾಲಿಡುವ ಮೊದಲೇ ಸಾವನ್ನಪ್ಪುತ್ತಿರುವುದು ಆತಂಕದ ಬೆಳವಣಿಗೆ ಎಂದು ಐಎಚ್‌ಎಂಆರ್ ಸಂಸ್ಥೆಯ ಪ್ರಾಧ್ಯಾಪಕಿ ಡಾ.ದೀಪಶ್ರೀ ಹೇಳಿದರು.

ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಯುನಿಸೆಫ್ ಹಾಗೂ ಐಎಚ್‌ಎಂಆರ್ ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,  ಹಾಗೂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲೆಯ ಎಲ್ಲಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮೇಲ್ವಿಚಾರಕರು, ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಕೊರೋನ ಸೂಕ್ತ ಚಟುವಟಿಕೆಗಳು, ಅಪೌಷ್ಠಿಕತೆ ಹಾಗೂ ರಕ್ತಹೀನತೆ ಸಮಸ್ಯೆ ಕುರಿತಂತೆ ಹಮ್ಮಿಕೊಳ್ಳಲಾಗಿದ್ದ ಆನ್‌ಲೈನ್ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೇಶದ ಶೇ.59ರಷ್ಟು ಮಕ್ಕಳು, ಹೆಂಗಸರು ಹಾಗೂ ಗರ್ಭಿಣಿಯರು ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿದ್ದು ಇದರಿಂದ ವಿವಿಧ ರೀತಿಯ ಗಂಭೀರ ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಹಾಗೂ ಶೇ.38ರಷ್ಟು ಮಕ್ಕಳಲ್ಲಿ ವಯಸ್ಸಿಗೆ ತಕ್ಕ ತೂಕ ಹಾಗು ಎತ್ತರಕ್ಕೆ ತಕ್ಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದು ಮಕ್ಕಳು ಹದಿಹರೆಯ ವಯಸ್ಸಿಗೆ ಕಾಲಿಡದೆ ಸಾವನ್ನಪ್ಪುತ್ತಿದ್ದಾರೆ. ಇಂತಹ ಗಂಭೀರ ಸಮಸ್ಯೆ ಇರುವಂತಹರನ್ನು  ಹತ್ತಿರದ ಎನ್‌ಆರ್‌ಸಿ ಕೇಂದ್ರಗಳಿಗೆ ದಾಖಲಿಸಿ ಸೂಕ್ತ ಚಿಕಿತ್ಸೆ ದೊರಕಿಸಬೇಕು. ಈ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಜವಾಬ್ದಾರಿ ಹೆಚ್ಚಾಗಿರುತ್ತದೆ ಎಂದರು.

ರಕ್ತಹೀನತೆಯಿಂದ ಬಳಲುತ್ತಿರುವ ಮಕ್ಕಳು ಹಾಗೂ ಹದಿಹರೆಯ ಹೆಣ್ಣುಮಕ್ಕಳನ್ನು ಗುರುತಿಸಿ ಆರೋಗ್ಯ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಯವರಿಗೆ ಮಾಹಿತಿ ನೀಡಬೇಕು. ಹತ್ತಿರದ ಎನ್‌ಆರ್‌ಸಿ ಕೇಂದ್ರಗಳಿಗೆ ದಾಖಲಿಸಿ ಸೂಕ್ತ ರೀತಿಯ ಚಿಕಿತ್ಸೆ ಕೊಡಿಸಬೇಕು. ಗರ್ಭಿಣಿ, ಬಾಣಂತಿ, ಮತ್ತು ಮಕ್ಕಳು ಅಪೌಷ್ಟಿಕತೆಯಿಂದ ಬಳಲುವುದನ್ನು ತಪ್ಪಿಸಲು ಸ್ಥಳೀಯವಾಗಿ ದೊರೆಯುವ ಸೊಪ್ಪು ತರಕಾರಿ, ಸಿರಿಧಾನ್ಯಗಳನ್ನು ಹೆಚ್ಚಾಗಿ ಬಳಸುವಂತೆ ಸಮುದಾಯದಲ್ಲಿ ಅರಿವು ಮೂಡಿಸುವಂತೆ ಸಲಹೆ ನೀಡಿದರು.

Sneha Gowda

Recent Posts

ರಾಶಿ ಭವಿಷ್ಯ : ಯಾರಿಗೆ ಲಾಭ? ಯಾರಿಗೆ ನಷ್ಟ?

ರಾಶಿ ಭವಿಷ್ಯ ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ, ಮೇ 15…

15 seconds ago

ಕೊಟ್ಟ ಮಾತಿನಂತೆ ಚಿತ್ರ ಬಿಡಿಸಿದ ಯುವತಿಗೆ ಪತ್ರ ಬರೆದ ಪ್ರಧಾನಿ ಮೋದಿ

ಪ್ರಧಾನಿ ಮೋದಿ ತಮ್ಮ ಭಾಷಣದ ವೇಳೆ ಫೋಟೋ ಹಿಡಿದು ನಿಂತಿದ್ದ ಯುವತಿಯನ್ನು ಕಂಡು ತಮ್ಮ ಅಂಗರಕ್ಷಕ ಅಧಿಕಾರಿಗಳಿಂದ ಯುವತಿಯ ಫೋಟೊ…

8 hours ago

‘ಕಲ್ಕಿ-2898 AD’ ಚಿತ್ರಕ್ಕೆ ಕನ್ನಡದಲ್ಲಿ ಧ್ವನಿ ನೀಡಿದ ದೀಪಿಕಾ ಪಡುಕೋಣೆ

ನಟ ಪ್ರಭಾಸ್‌ ಅಭಿನಯದ ಬಹುನಿರೀಕ್ಷಿತ 'ಕಲ್ಕಿ-2898 AD' ಚಿತ್ರವು ಬಿಡುಗಡೆಗೆ ಸಿದ್ಧವಾಗಿದ್ದು, ನಟಿ ದೀಪಿಕಾ ಪಡುಕೋಣೆ ತಮ್ಮ ಪಾತ್ರದ ಡಬ್ಬಿಂಗ್‌…

8 hours ago

ಧನುಷ್- ಐಶ್ವರ್ಯ ಇಬ್ಬರೂ ಬೇರೆಯವರೊಟ್ಟಿಗೆ ಡೇಟಿಂಗ್; ಖ್ಯಾತ ಗಾಯಕಿ ಮಾಹಿತಿ

ಕಾಲಿವುಡ್‌ ನಟ ಧನುಷ್‌ ಮತ್ತು ಸೂಪರ್‌ ಸ್ಟಾರ್‌ ರಜನಿಕಾಂತ್‌ ಪುತ್ರಿ ಐಶ್ವರ್ಯಾ ರಜನಿಕಾಂತ್‌ ಅವರ ದಾಂಪತ್ಯ ಜೀವನ ಮುರಿದು ಬಿದ್ದಿದೆ.…

8 hours ago

ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ಎಚ್​.ಡಿ ರೇವಣ್ಣ ಏನಂದ್ರು ?

ಹಾಸನ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆ ಅನುಭವಿಸಿ ಜಾಮೀನಿನ ಮೇಲೆ ಪರಪ್ಪರ ಅಗ್ರಹಾರ ಜೈಲಿನಿಂದ ಬಿಡುಗಡೆ ಹೊಂದಿದ ಶಾಸಕ…

9 hours ago

ಅಂಕಿತಾ ಓದಿದ ಶಾಲೆಗೆ 1 ಕೋಟಿ ರೂ. ಘೋಷಿಸಿದ ಸಿಎಂ ಸಿದ್ದರಾಮಯ್ಯ

ಈ ವರ್ಷದ ಎಸ್‌ ಎಸ್‌ ಎಲ್‌ ಸಿ ಪರೀಕ್ಷೆಯಲ್ಲಿ ಬಾಗಲಕೋಟೆಯ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ರಾಜ್ಯಕ್ಕೆ ಫಸ್ಟ್…

9 hours ago