ಸಂಸ್ಕೃತ ವಿವಿ ಸ್ಥಾಪಿಸುವ ವಿಚಾರದಲ್ಲಿ ಕೇವಲ ಸಂಕುಚಿತ ಭಾವನೆಯಿಂದ ಯೋಚಿಸಬಾರದು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಚಿಕ್ಕಮಗಳೂರು: ರಾಜ್ಯದಲ್ಲಿ ಮತ್ತೊಂದು ಸಂಸ್ಕೃತ ವಿವಿ ಸ್ಥಾಪಿಸುವ ವಿಚಾರದಲ್ಲಿ ಕೇವಲ ಸಂಕುಚಿತ ಭಾವನೆಯಿಂದ ಯೋಚಿಸಬಾರದು. ಸಂಸ್ಕೃತ ಎಲ್ಲಾ ಭಾಷೆಗಳಿಗೆ ಮೂಲ ಭಾಷೆ. ಅದನ್ನು ಕಲಿಯುವುದು ಸಹ ತುಂಬಾ ಅಗತ್ಯವಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಮತ್ತೊಂದು ಸಂಸ್ಕೃತ ವಿವಿ ಸ್ಥಾಪನೆ ಕುರಿತು ಅಪಸ್ವರ ಎದ್ದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಕರ್ನಾಟಕ ಎಲ್ಲಾ ಧರ್ಮ, ಎಲ್ಲಾ ಸಮುದಾಯ, ಎಲ್ಲಾ ಭಾಷೆಗಳ ರಾಜ್ಯ. ಎಲ್ಲರೂ ಒಟ್ಟಿಗೆ ಬದುಕುತ್ತಿದ್ದೇವೆ. ಕನ್ನಡ ಭಾಷೆ ಬೆಳೆಸಲು ಏನು ಮಾಡಬೇಕು ಅದನ್ನು ಮಾಡೋಣ ಮತ್ತೊಂದು ಭಾಷೆ ಬೇಡ ಎನ್ನುವುದು ಸರಿಯಲ್ಲ ಎಂದರು.

ನಾವು ಯಾವ ವರ್ಗವನ್ನೂ ಓಲೈಕೆ ಮಾಡುವುದಿಲ್ಲ. ಯಾವುದೇ ಭಾಷೆ ಒಂದು ಜಾತಿ, ಧರ್ಮದ ಭಾಷೆಯಲ್ಲ. ಯಾರು ಯಾವ ಭಾಷೆಯನ್ನಾದರೂ ಕಲಿಯಬಹುದು. ಸಂಸ್ಕೃತವನ್ನು ಕೇವಲ ಮೇಲ್ವರ್ಗದ ಜನರಷ್ಟೇ ಅಲ್ಲ, ಎಲ್ಲಾ ವರ್ಗದ ಜನ, ಎಲ್ಲಾ ಮಠಗಳಲ್ಲೂ ಇಂದು ಸಂಸ್ಕೃತ ಪಾಠಶಾಲೆ ಇದೆ. ಸಂಸ್ಕೃತ ಕಲಿತರೆ ವೇದ, ಆಯುರ್ವೇದ, ಯೋಗ, ತಂತ್ರಜ್ಞಾನ ಎಲ್ಲವನ್ನೂ ಕಲಿಯಬಹುದು. ಅದು ಯೋವುದೋ ಒಂದು ಜಾತಿ, ಧರ್ಮಕ್ಕೆ ಸೀಮಿತವಾದ ಭಾಷೆಯಲ್ಲ ಎಂದರು.

ಉತ್ತರ ಪ್ರದೇಶದ ಚುನಾವಣೆಯಲ್ಲಿ ಬಿಜೆಪಿ ಹಿಂದಿಗಿಂತಲೂ ಹೆಚ್ಚು ಸ್ಥಾನಗಳನ್ನು ಗಳಿಸಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಅಲ್ಲಿನ ಚುನಾವಣಾ ಉಸ್ತುವಾರಿಯೂ ಆಗಿರುವ ಶೋಭಾ ಕರಂದ್ಲಾಜೆ ಹೇಳಿದರು.

ಮುಖ್ಯಮಂತ್ರಿ ಯೋಗಿ, ಪ್ರಧಾನಿ ಮೋದಿ ಜೋಡಿ ಅಲ್ಲಿ ಕೆಲಸ ಮಾಡುತ್ತಿದೆ. ಯಾವುದೇ ಹಳ್ಳಿ, ನಗರ ಪ್ರದೇಶದಲ್ಲಿ ಯಾವುದೇ ಜಾತಿ, ವರ್ಗದ ಜನ ಯೋಗಿ ಮತ್ತು ಮೋದಿ ಬೇಕು ಎಂದು ಹೇಳುತ್ತಿದ್ದಾರೆ. ಗೂಂಡಾ ರಾಜ್ಯವಾಗಿದ್ದ ಉತ್ತರ ಪ್ರದೇಶವನ್ನ ಒಳ್ಳೆಯ ರಾಜ್ಯ ಮಾಡಬಹುದು ಎನ್ನುವುದನ್ನು ಯೋಗಿ ಆಡಳಿತ ತೊರಿಸಿಕೊಟ್ಟಿರುವುದು. ಭ್ರಷ್ಟಾಚಾರ ರಹಿತ ಆಡಳಿತ ನೀಡಿರುವುದರಿಂದ ಪಕ್ಷ ಮತ್ತೊಮ್ಮೆ ಬಿಜೆಪಿಯನ್ನು ಬಯಸುತ್ತಿದ್ದಾರೆ ಎಂದರು.

Sneha Gowda

Recent Posts

ಯುನಿಸೆಫ್ ಇಂಡಿಯಾ ರಾಯಭಾರಿಯಾಗಿ ಕರೀನಾ ಕಪೂರ್ ನೇಮಕ

ಬಾಲಿವುಡ್ ನಟಿ ಕರೀನಾ ಕಪೂರ್  ಯುನಿಸೆಫ್ ಇಂಡಿಯಾ  ರಾಯಭಾರಿಯಾಗಿ ನೇಮಕಗೊಂಡಿದ್ದು, ರಾಯಭಾರಿಯಾಗಿ ಆಯ್ಕೆಯಾಗಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

3 mins ago

ಬ್ರೆಜಿಲ್‌ನಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ, ಭೂ ಕುಸಿತ: 57 ಮಂದಿ ಮೃತ್ಯು

ಬ್ರೆಜಿಲ್‌ನಲ್ಲಿ ಭಾರಿ ಮಳೆಯ ಕಾರಣದಿಂದಾಗಿ ಪ್ರವಾಹ ಮತ್ತು ಮಣ್ಣು ಕುಸಿತದಿಂದ ಅವಘಡ ಸಂಭವಿಸಿ. 57 ಮಂದಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಮೂಲಗಳಿಂದ…

6 mins ago

ಸಾಗರ ಖಂಡ್ರೆ ಎಂಪಿ ಆಗುವುದು ಗ್ಯಾರಂಟಿ: ಡಾ. ಭೀಮಸೇನರಾವ ಶಿಂಧೆ

ಜಿಲ್ಲೆಯಲ್ಲಿ ಈ ಬಾರಿ ಬದಲಾವಣೆ ಗಾಳಿ ಜೋರಾಗಿ ಬೀಸುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಾಗರ ಖಂಡ್ರೆ ಸಂಸದ ಆಗುವದು…

19 mins ago

ದೇವಾಲಯಕ್ಕೆ ಹೋಗುತ್ತಿದ್ದ ಕಾರಿಗೆ ಅಪರಿಚಿತ ವಾಹನ ಡಿಕ್ಕಿ: 6 ಜನ ಮೃತ್ಯು

ದೇವಾಲಯಕ್ಕೆ ಹೋಗುತ್ತಿದ್ದ ಕಾರಿಗೆ ಅಪರಿಚಿತ ವಾಹನವೊಂದು ಭಯಾನಕವಾಗಿ ಡಿಕ್ಕಿಯಾದ ಪರಿಣಾಮ 6 ಜನ ಸ್ಥಳದಲ್ಲೇ ಮೃತಪಟ್ಟಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡ…

26 mins ago

ಮಲೆಯೂರು ಪಿಎಸಿಸಿ ಬ್ಯಾಂಕ್‌ನಲ್ಲಿ ಗಿರವಿ ಇಟ್ಟಿದ್ದ ಚಿನ್ನಾಭರಣ ವಾಪಸ್

ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘವು ರೈತರೊಂದಿಗೆ ನಡೆಸಿದ ನಿರಂತರ ಹೋರಾಟಕ್ಕೆ ಫಲ ದೊರೆತಿದ್ದು, ನ್ಯಾಯಾಲಯದ ಆದೇಶದ ಮೇರೆಗೆ ತಾಲೂಕಿನ…

33 mins ago

ಗಬ್ಬೆದ್ದು ನಾರುತ್ತಿರುವ ಚರಂಡಿ: ಅಂಬೇಡ್ಕರ್ ನಾಮಫಲಕದ ಬಳಿಯೇ ದುರ್ನಾತ

ಗಬ್ಬೆದ್ದು ನಾರುತ್ತಿರುವ ಚರಂಡಿಯ ಅವ್ಯವಸ್ಥೆಯಿಂದಾಗಿ ಗ್ರಾಮಸ್ಥರು ಮೂಗು, ಬಾಯಿ ಮುಚ್ಚಿಕೊಂಡೆ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಂಜನಗೂಡು ತಾಲ್ಲೂಕಿನ ದೇವರಸನಹಳ್ಳಿ ಗ್ರಾಮ…

50 mins ago