ಮೈಸೂರು: ಗ್ರಾಮ ಮೈಸೂರಿನ ಹೊರ ವಲಯದ ರಮ್ಮನಹಳ್ಳಿಯಲ್ಲಿ ರಾಜ್ಯದಲ್ಲಿಯೇ ಮೊದಲ ಸಂಪೂರ್ಣ ವೈಫೈ ಸಿದ್ಧಗೊಂಡಿದೆ. ಇಂಥ ಸಾಧನೆ ಮಾಡಿದ್ದು ಕೇಂದ್ರ ಸರಕಾರಿ ಸ್ವಾಮ್ಯದ ಬಿಎಸ್ಸೆಎನ್ನೆಲ್.
ಬಿಎಸ್ಸೆಎನ್ನೆಲ್ ಸಾರ್ವಜನಿಕ ವೈಫೈ ಯೋಜನೆಯಡಿಯಲ್ಲಿ ಮೊದಲ ಸಾರ್ವಜನಿಕ ದತ್ತಾಂಶ (ಡೇಟಾ) ಕಚೇರಿಯನ್ನು ರಮ್ಮನ ಹಳ್ಳಿಯಲ್ಲಿ ಮಂಗಳವಾರ ಆರಂಭಿಸಿದೆ.
ಆಪ್ಟಿಕಲ್ ಫೈಬರ್ ಸಂಪರ್ಕದ ಮೂಲಕ ರಮ್ಮನ ಹಳ್ಳಿಯ 8 ಕಡೆ ಸಾರ್ವಜನಿಕ ದತ್ತಾಂಶ ಕಚೇರಿಗಳನ್ನು 32 ಆಯಕ್ಸೆಸ್ ಪಾಯಿಂಟ್ ಇಂಟರ್ಫೇಸಸ್ಗಳೊಂದಿಗೆ ಇಡೀ ಗ್ರಾಮವನ್ನು ವೈಫೈ ಕೇಂದ್ರ ವನ್ನಾಗಿ ರೂಪಿಸಲಾಗಿದೆ. ಇದರಿಂದ ರಮ್ಮನಹಳ್ಳಿ ಗ್ರಾಮದ ಜನರು ತಡೆರಹಿತ ವೇಗದ ಇಂಟರ್ನೆಟ್ ಸೌಲಭ್ಯವನ್ನು ಪಡೆಯಬಹುದು.