ಮೈಸೂರು

ಮೈಸೂರಿನಲ್ಲಿ ಭಾರೀ ಮಳೆಗೆ ಜನರ ಪರದಾಟ

ಮೈಸೂರು: ನಗರದಲ್ಲಿ ದಿಢೀರ್ ಆಗಿ ಸುರಿದ ಮಳೆಯಿಂದ ಜನ ಪರದಾಡುವಂತಾಯಿತು. ಬೆಳಗ್ಗಿನಿಂದ ಬಿಸಿಲಿನ  ವಾತಾವರಣವಿದ್ದರೂ ಮಧ್ಯಾಹ್ನ ಇದ್ದಕ್ಕಿದ್ದಂತೆ ಭಾರೀ ಮಳೆ ಸುರಿಯಿತು. ಇದರಿಂದ ಭಾನುವಾರದ ರಜೆ ಮೂಡಲ್ಲಿದ್ದವರು ಗೊಣಗುವಂತಾಯಿತು.

ವಾರಾಂತ್ಯವಾಗಿದ್ದರಿಂದ ಜನ ನಗರದಲ್ಲಿ ಶಾಪಿಂಗ್ ಇನ್ನಿತರ ಖರೀದಿಗಾಗಿ ಬಂದಿದ್ದರೆ, ದೂರದಿಂದ ಪ್ರವಾಸಿಗರು ನಗರದತ್ತ ಮುಖ ಮಾಡಿದ್ದರು. ಆದರೆ ಇದ್ದಕ್ಕಿದ್ದಂತೆಯೇ ಶುರುವಾದ ಮಳೆ ಮಳೆ ಬಿಡದೆ ಸುರಿದ ಕಾರಣ ಜನ ಹಿಡಿ ಶಾಪ ಹಾಕಿಕೊಂಡು  ಓಡಾಡುವಂತಾಯಿತು.

ಆಸನಿ ಚಂಡಮಾರುತದ ವೇಳೆ ಸುಮಾರು ಹತ್ತು ದಿನಗಳ ಕಾಲ ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಭಾರೀ ಮಳೆ  ಸುರಿದಿತ್ತಲ್ಲದೆ, ಇದರಿಂದ ಭಾರಿ ನಷ್ಟವುಂಟಾಗಿತ್ತು. ಆದರೆ ಕಳೆದ ಕೆಲ ದಿನಗಳಿಂದ ಮಳೆ ದೂರವಾಗಿ ಬಿಸಿಲು ಕಾಣಿಸಿತ್ತು. ಆದರೆ ಭಾನುವಾರ ಮತ್ತೆ ಭಾರೀ ಮಳೆ ಸುರಿದಿದ್ದು ಇದರಿಂದ ನೀರು ಚರಂಡಿ ಮತ್ತು ರಸ್ತೆಗಳಲ್ಲಿ ನೀರು ತುಂಬಿ ಹರಿದಿದ್ದು ಇದರಿಂದ ವಾಹನಗಳು ತೆರಳಲು ಮತ್ತು ಪಾದಾಚಾರಿಗಳು ಓಡಾಡಲು ಕಷ್ಟ ಪಡುವಂತಾಯಿತು.

ಈಗಾಗಲೇ ನಗರಗಳಲ್ಲಿನ ರಸ್ತೆಗಳು ಗುಂಡಿ ಬಿದ್ದಿದ್ದರೆ  ಮತ್ತೊಂದೆಡೆ ರಸ್ತೆಯನ್ನು ಅಗೆದು ಕೆಲಸವನ್ನು ಮಾಡುತ್ತಿರುವುದರಿಂದ  ರಸ್ತೆಯ  ಹಳ್ಳಕೊಳ್ಳಗಳಲ್ಲಿ ನೀರು ತುಂಬಿದ್ದು ವಾಹನ ಸಂಚರಿಸಲು ಭಯಪಡುವಂತಾಗಿದೆ. ಇನ್ನೊಂದೆಡೆ ಮಳೆ ನೀರಿನ ರಭಸಕ್ಕೆ ಮಣ್ಣು ಕೊಚ್ಚಿಕೊಂಡು ಬಂದು ರಸ್ತೆ ಮೇಲೆ ನಿಂತಿರುವುದರಿಂದ ಜನ ಹಿಂಸೆ ಅನುಭವಿಸುವಂತಾಗಿದೆ.

ಮಧ್ಯಾಹ್ನ ಮೂರು ಗಂಟೆಯಿಂದ ಶುರುವಾದ ಮಳೆ ಸುರಿಯುತ್ತಲೇ ಇರುವುದರಿಂದ ಸಂಜೆ ನಗರಕ್ಕೊಂದು ಸುತ್ತು ಹೊಡೆದು ಬರೋಣ ಎಂದು ತೀರ್ಮಾನ ಮಾಡಿಕೊಂಡಿದ್ದವರು ಮನೆಯೊಳಗೆ ಕೂರುವಂತಾಗಿದೆ. ಕೆಲವು ದಿನಗಳಿಂದ ಬಿಸಿಲು ಕಾಣಿಸಿಕೊಂಡಿದ್ದರಿಂದ ಸದ್ಯಕ್ಕೆ ಮಳೆ ಬರೋದಿಲ್ಲ ಎಂಬಂತಹ ವಾತಾವರಣ ನಿರ್ಮಾಣವಾಗಿತ್ತು. ಆದರೀಗ ಭಾರೀ ಮಳೆ ಸುರಿಯುತ್ತಿರುವುದು ಆತಂಕ ತಂದಿದೆ.

Sneha Gowda

Recent Posts

ಜೂ.14 ರಿಂದ ಎಸ್ಎಸ್ಎಲ್ ಸಿ ಪರೀಕ್ಷೆ-2 ಪ್ರಾರಂಭ

ಮೇ.15 ರಿಂದ ಆರಂಭವಾಗಿದ್ದ ಎಸ್​ಎಸ್​ಎಲ್​ಸಿ ವಿಶೇಷ ಪರಿಹಾರ ಬೋಧನೆ ತರಗತಿಗಳನ್ನು ಮುಂದೂಡಿ, ಮೇ 29 ರಿಂದ ಜೂ.13ರವರೆಗೆ ನಡೆಸಲು‌ ರಾಜ್ಯ…

41 mins ago

ಟ್ರ್ಯಾಕ್ಟರ್ ಗೆ ಖಾಸಗಿ ಬಸ್ ಡಿಕ್ಕಿ: ಮೂವರ ದುರ್ಮರಣ

ಹುಲಿಗೆಮ್ಮ ದೇವಿ ದರ್ಶನ ಮುಗಿಸಿ ಟ್ರ್ಯಾಕ್ಟರ್​ನಲ್ಲಿ ಮನೆಗೆ ಹೋಗುವಾಗ ​ಹಿಂದಿನಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಘಟನೆ ಈಗ…

59 mins ago

ಬೀದರ್: ನರೇಗಾ ಕಾಮಗಾರಿ ಪರಿಶೀಲಿಸಿದ ಉಪ ಕಾರ್ಯದರ್ಶಿ

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ.ಎಂ.ಸವಿತಾ ಅವರು ಬುಧವಾರ ತಾಲ್ಲೂಕಿನ ವಿವಿಧೆಡೆ ನಡೆಯುತ್ತಿರುವ ಮಹಾತ್ಮ ಗಾಂಧಿ ಉದ್ಯೋಗ ಖಾತರಿ (ನರೇಗಾ)…

1 hour ago

ಮನಿ ಲಾಂಡರಿಂಗ್ ಪ್ರಕರಣ: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಆಲಂಗೀರ್ ಆಲಂ

ಮನಿ ಲಾಂಡರಿಂಗ್ ಕೇಸಿನಲ್ಲಿ ಬಂಧನಕ್ಕೊಳಗಾಗಿರುವ ಜಾರ್ಖಂಡ್​ನ ಕಾಂಗ್ರೆಸ್ ನಾಯಕ ಮತ್ತು ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಆಲಂಗೀರ್ ಆಲಂ ಇಂದು ತಮ್ಮ…

2 hours ago

ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಕಾಲಕ್ಕೆ ಸಿಗದ ಔಷಧ: ಸಾರ್ವಜನಿಕರ ಆಕ್ರೋಶ

ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಬಡಜನರಿಗೆ ಸಕಾಲಕ್ಕೆ ಸಿಗಬೇಕಾದ ಸೇವೆಯು ಮರೀಚಿಕೆಯಾಗಿ ಹೋಗಿದೆ. ಚಿಕಿತ್ಸೆಗೆ ಆಸ್ಪತ್ರೆಗೆ ಬಂದ ರೋಗಿಗಳು ವೈದ್ಯರಿಗಾಗಿ…

2 hours ago

ಪದವೀಧರರ ಸಮಸ್ಯೆಗೆ ಸ್ಪಂದಿಸಿದ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ: ಡಾ. ಶಿಂಧೆ

ಪದವೀಧರರ ಸಮಸ್ಯೆಗೆ ಸ್ಪಂದಿಸುವ ಹಾಗೂ ಸದಾ ಸಂಪರ್ಕಕ್ಕೆ ಸಿಗುವಂಥ ಸೂಕ್ತ ಮತ್ತು ಸಮರ್ಥ ಕಾಂಗ್ರೆಸ್ ಅಭ್ಯರ್ಥಿಯಾದ ಡಾ. ಚಂದ್ರಶೇಖರ್ ಪಾಟೀಲ್…

2 hours ago