Categories: ಮೈಸೂರು

ಮೃಗಾಲಯದಲ್ಲಿ ಪ್ರಾಚಿ ಜೀಬ್ರಾಗೆ ಮರಿ ಜನನ

ಮೈಸೂರು : ಶ್ರೀ ಚಾಮರಾಜೇಂದ್ರ ಮೃಗಾಲಯದ ಪ್ರಾಚಿ ಎಂಬ ಜಿಬ್ರಾ ಒಂದು ಹೆಣ್ಣು ಮರಿಗೆ ಜನ್ಮ ನೀಡಿದೆ. ಡಿ.11ರಂದು ಪ್ರಾಚಿ ಜೀಬ್ರಾ ಮರಿಗೆ ಜನ್ಮ ನೀಡಿದ್ದು, ಮರಿ ಹಾಗೂ ತಾಯಿ ಜೀಬ್ರಾ ಆರೋಗ್ಯದಿಂದಿವೆ. ಪ್ರಾಚಿ ಮತ್ತು ರಿಷಿ ಜೀಬ್ರಾಗಳಿಗೆ ಈ ಮರಿಯು ಜನಿಸಿದ್ದು, ಮೈಸೂರು ಮೃಗಾಲಯದ ಇತಿಹಾಸದಲ್ಲಿ ಮೃಗಾಲಯದಲ್ಲಿಯೇ ಜನಿಸಿದ ಐದನೇ ಜೀಬ್ರಾ ಮರಿ ಇದಾಗಿದೆ. ಅಲ್ಲದೆ ಪ್ರಾಚಿಗೆ ಎರಡನೇ ಮರಿಯಾಗಿದೆ.

ಪ್ರಸ್ತುತ 3 ಗಂಡು ಮತ್ತು 5 ಹೆಣ್ಣು ಜೀಬ್ರಾಗಳು ಮೈಸೂರು ಮೃಗಾಲಯದಲ್ಲಿವೆ. ಹೊಸ ಮರಿಯ ಆಗಮನವು ಮೃಗಾಲಯದ ಸಿಬ್ಬಂದಿಗಳಲ್ಲಿ ಸಂತಸವನ್ನು ತಂದಿದೆ. ಮುಂದಿನ ದಿನಗಳಲ್ಲಿ ಈ ಮರಿಯ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡುವ ಸಾಧ್ಯತೆಯಿದೆ.

ಶಿವಮೊಗ್ಗಕ್ಕೆ ನೀರು ಕುದುರೆ:

ಇನ್ನೊಂದೆಡೆ ಶಿವಮೊಗ್ಗದ ತ್ಯಾಮರೆಕೊಪ್ಪ  ಹುಲಿ ಮತ್ತು ಸಿಂಹ ಧಾಮದಲ್ಲಿ ಪ್ರಾಣಿ ಸಂಗ್ರಹವನ್ನು ಸಮೃದ್ಧಿಗೊಳಿಸಲು ಮೈಸೂರು ಮೃಗಾಲಯದಿಂದ ಹಂಸ ಎಂಬ ಹೆಸರಿನ ಎಂಟು ವರ್ಷದ ಒಂದು ನೀರು ಕುದುರೆಯನ್ನು ಹಾಗೂ ಐದು ಹಂದಿ ಜಿಂಕೆಗಳನ್ನು ಕಳುಹಿಸಲಾಗಿದೆ. ಆ ಮೂಲಕ ಅಲ್ಲಿನವರಿಗೆ ಆಫ್ರಿಕನ್ ಪ್ರಾಣಿಯನ್ನು ನೋಡುವ ಅವಕಾಶ ದೊರೆತಂತಾಗಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಣಾಧಿಕಾರಿ ಅಜಿತ್ ಕುಲಕರ್ಣಿ ತಿಳಿಸಿದ್ದಾರೆ.

Sneha Gowda

Recent Posts

ಅಂಜಲಿ ಹಂತಕ ಗಿರೀಶನ ಮೇಲೆ ಮತ್ತೊಂದು ಪ್ರಕರಣ ದಾಖಲು

ಇಲ್ಲಿನ ವೀರಾಪುರ ಓಣಿಯಲ್ಲಿ ಅಂಜಲಿ ಅಂಬಿಗೇರ ಹಂತಕ ಗಿರೀಶ ಉರುಫ್‌ ವಿಶ್ವ ಸಾವಂತ ವಿರುದ್ಧ ಬೆಂಡಿಗೇರಿ ಠಾಣೆಯಲ್ಲಿ ಮತ್ತೊಂದು ಪ್ರಕರನ…

31 mins ago

ʼರಾಹುಲ್ ಮತ್ತು ನಾನು ಒಟ್ಟಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೆ ಬಿಜೆಪಿ ಲಾಭವಾಗುತ್ತಿತ್ತುʼ

ದೇಶದ್ಯಾಂತ ಕಾಂಗ್ರೆಸ್‌ ಪಕ್ಷದ ಪರವಾಗಿ ಪ್ರಚಾರ ನಡೆಸಬೇಕೆಂಬ ಉದ್ದೇಶದಿಂದ ನಾನು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ, ರಾಹುಲ್ ಗಾಂಧಿ…

33 mins ago

ಪೊಲೀಸ್‌ ಕಸ್ಟಡಿಯಲ್ಲಿಯೇ ದಂಪತಿ ಆತ್ಮಹತ್ಯೆ: ರೊಚ್ಚಿಗೆದ್ದು ಠಾಣೆಗೆ ಬೆಂಕಿ ಹಚ್ಚಿದ ಗ್ರಾಮಸ್ಥರು

ಪೊಲೀಸ್‌ ಕಸ್ಟಡಿಯಲ್ಲಿಯೇ ಗಂಡ ಹಾಗೂ ಹೆಂಡತಿ ಮೃತಪಟ್ಟಿರುವ ಘಟನೆ ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ನಡೆದಿದೆ.

56 mins ago

ಆತ್ಮಹತ್ಯೆಗೆ ಮುನ್ನ ನಟ ಚಂದು ಲಾಸ್ಟ್​ ಮೆಸೇಜ್​ ಇದು

ಇದು ತೆಲುಗು ಕಿರುತೆರೆ ನಟ ಚಂದು ಆತ್ಮಹತ್ಯೆಗೂ ಮುನ್ನ ಬರೆದ ಸಂದೇಶ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚಂದುವಿನ ಕೊನೆಯ ಮೆಸೇಜ್​…

1 hour ago

ಕರ್ನಾಟಕದ ಹಲವೆಡೆ ಮೇ 19ರಿಂದ 21 ರವರೆಗೆ ಭಾರೀ ಮಳೆ ಸಾಧ್ಯತೆ

ಕರ್ನಾಟಕದ ಹಲವೆಡೆ ಮೇ 19ರಿಂದ 21 ರವರೆಗೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

1 hour ago

ಜೀವ -ಜಲ ಉಳಿಸಲು ಸ್ವಯಂ ಪ್ರೇರಣೆಯ ಪಾಲ್ಗೊಳ್ಳುವಿಕೆ ಮುಖ್ಯ: ಪ್ರಭಾಕರ ಶರ್ಮಾ

ನೀರಿನ ಮಿತ ಬಳಕೆ, ಪರಿಸರ ಸಂರಕ್ಷಣೆಯಲ್ಲಿ ಸಾರ್ವಜನಿಕರು  ಸ್ವಯಂ ಪ್ರೇರಿತರಾಗಿ ತಮ್ಮ ಇತಿ ಮಿತಿಯಲ್ಲಿ ಸಣ್ಣ ಕೊಡುಗೆಗಳನ್ನು ನೀಡುವ ಮೂಲಕ…

1 hour ago