Categories: ಮೈಸೂರು

ಮಹಿಳೆಗೆ ಪರ್ಯಾಯ ನಿವೇಶನ ನೀಡದ್ದನ್ನು ಖಂಡಿಸಿ ಪ್ರತಿಭಟನೆ

ಮೈಸೂರು : ಸಾರ್ವಜನಿಕ ರಸ್ತೆ ನಿರ್ಮಾಣಕ್ಕೆ ನಿವೇಶನ ಬಿಟ್ಟುಕೊಟ್ಟ ಮಹಿಳೆಗೆ ಆರೇಳು ವರ್ಷಗಳಾದರೂ ಪರ್ಯಾಯ ನಿವೇಶನ ನೀಡದ್ದನ್ನು ಖಂಡಿಸಿ ಪುರಸಭೆ ಮುಂಭಾಗ ಪ್ರತಿಭಟನೆ ನಡೆಸುತ್ತಿರುವ ಘಟನೆ ಜಿಲ್ಲೆಯ ತಿ.ನರಸೀಪುರ ಪಟ್ಟಣದಲ್ಲಿ ನಡೆದಿದೆ.

ತಿ.ನರಸೀಪುರದ ಸರ್ವಮಂಗಳಮ್ಮ ಎಂಬುವರು ರಸ್ತೆ ನಿರ್ಮಾಣಕ್ಕೆ ನಿವೇಶನವನ್ನು ಬಿಟ್ಟುಕೊಟ್ಟಿದ್ದು, ಆರೇಳು ವರ್ಷಗಳಾದರೂ ಅವರಿಗೆ ಪರ್ಯಾಯ ನಿವೇಶನ ನೀಡದ್ದನ್ನು ಖಂಡಿಸಿ ಮತ್ತು ಮಹಿಳೆಗೆ ಬೆಂಬಲ ವ್ಯಕ್ತಪಡಿಸಿ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಹಾಗೂ ಮುಖಂಡರು ಕಾರ್ಯಾಲಯದ ಮುಂಭಾಗ ಬುಧವಾರದಿಂದ ಅನಿರ್ಧಿಷ್ಠಾವಧಿ ಧರಣಿ ನಡೆಸುತ್ತಿದ್ದಾರೆ.

ಪ್ರತಿಭಟನೆಯ ಹಿನ್ನೆಲೆಯಲ್ಲಿ ಧರಣಿ ನಿರತರ ಅಹವಾಲು ಆಲಿಸಲು ಸ್ಥಳಕ್ಕಾಗಮಿಸಿದ ಪುರಸಭೆ ಅಧ್ಯಕ್ಷ ಎಸ್. ಮದನ್ ರಾಜು ಹಾಗೂ ಮುಖ್ಯಾಧಿಕಾರಿ ಬಸವರಾಜು ಅವರು ಪ್ರತಿಭಟನಾಕಾರರ ಮನವೊಲಿಕೆಗೆ ಒಪ್ಪದೆ ಸ್ಥಳಕ್ಕೆ ಜಿಲ್ಲಾಧಿಕಾರಿಗಳೇ ಖುದ್ದಾಗಿ ಬರುವವರೆಗೂ ಧರಣಿ ಹಿಂಪಡೆಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೋರಾಟದ ನೇತೃತ್ವ ವಹಿಸಿದ್ದ ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಡಾ.ಎಸ್.ಚಂದ್ರಶೇಖರ್ ಮಾತನಾಡಿ, ಪಿಎಲ್ ಡಿ ಬ್ಯಾಂಕ್ ರಸ್ತೆ ದಾಸ ನಾಯಕರ ಬೀದಿಯಲ್ಲಿದ್ದ 60×60 ಅಳತೆಯ ಖಾಲಿ ನಿವೇಶನದಲ್ಲಿ ಸರ್ವಮಂಗಳಮ್ಮ ಎಂಬುವರು ರಸ್ತೆ ನಿರ್ಮಾಣಕ್ಕಾಗಿ ಸಾರ್ವಜನಿಕ ಹಿತದೃಷ್ಟಿಯಿಂದ 28X60 ಅಳತೆ ನಿವೇಶನವನ್ನು ಬಿಟ್ಟುಕೊಟ್ಟಿದ್ದರೂ ಅವರಿಗಿನ್ನು ಪರಿಹಾರವಾಗಿ ಪರ್ಯಾಯ ನಿವೇಶನ ಕೊಟ್ಟಿಲ್ಲ. ಇಬ್ಬರಿಗೆ ಈಗಾಗಲೇ ಪರ್ಯಾಯ ನಿವೇಶನ ನೀಡಿರುವ ಪುರಸಭೆ ವೃದ್ಧ ಮಹಿಳೆ ಹಾಗೂ ಆಕೆಯ ಮೊಮ್ಮಗನ ಬೇಡಿಕೆಯನ್ನು ಈಡೇರಿಸಲು ಮೀನಾಮೇಶ ಎಣಿಸಲಾಗುತ್ತಿದೆ. ಸ್ಥಳಕ್ಕೆ ಉನ್ನತ ಮಟ್ಟದ ಅಧಿಕಾರಿಗಳು ಆಗಮಿಸಿ ಮಹಿಳೆಗೆ ನಿವೇಶನ ನೀಡುವವರೆಗೂ ಪ್ರತಿಭಟನೆ ಮುಂದುವರೆಯಲಿದೆ ಎಂದು ತಿಳಿಸಿದರು.

ಭಾರತೀಯ ಪರಿವರ್ತನಾ ಸಂಘದ ಜಿಲ್ಲಾಧ್ಯಕ್ಷ ಕೆ. ಎನ್. ಪ್ರಭುಸ್ವಾಮಿ, ದಸಂಸ ವಿಭಾಗೀಯ ಸಂಚಾಲಕ ಮರಿಸ್ವಾಮಿ ಕನ್ನಾ ಯಕನ ಹಳ್ಳಿ, ತಾಲ್ಲೂಕು ಸಂಚಾಲಕ ಮಾದಿಗ ಹಳ್ಳಿ ಮಹೇಶ್, ಸಂಘಟನಾ ಸಂಚಾಲಕ ಕುಮಾರ, ತೊಟ್ಟವಾಡಿ ರಾಜಪ್ಪ, ಖಜಾಂಚಿ ಕೊಳತೂರು ಪ್ರಭಾಕರ, ಟೌನ್ ಸಂಚಾಲಕ ಎಸ್. ಗಿರೀಶ್, ಮುಖಂಡರಾದ ಮನೋಜ್ ಕುಮಾರ್ ಇನ್ನಿತರರು ಭಾಗವಹಿಸಿದ್ದರು

Gayathri SG

Recent Posts

ಶ್ರೀಲಂಕಾದ ನಾಲ್ವರು ಐಸಿಸ್ ಭಯೋತ್ಪಾದಕರನ್ನು ಬಂಧಿಸಿದ ಎಟಿಎಸ್

ಶ್ರೀಲಂಕಾದ ನಾಲ್ವರು ಐಸಿಸ್ ಭಯೋತ್ಪಾದಕರನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ  ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ…

5 mins ago

ಮೇಲ್ಛಾವಣಿಗೆ ಬಿದ್ದು ಬದುಕುಳಿದ ಮಗು; ಆದರೆ ಟೀಕೆಯಿಂದ ಬೇಸತ್ತು ತಾಯಿ ಆತ್ಮಹತ್ಯೆ

ಕಳೆದ ಏಪ್ರಿಲ್​ ತಿಂಗಳಿನಲ್ಲಿ ಚೆನ್ನೆೈನ ಅಪಾರ್ಟ್ ಮೆಂಟ್​ವೊಂದರ ಮೇಲ್ಛಾವಣಿಯಲ್ಲಿ ಮಗು ಸಿಲುಕಿಕೊಂಡಿತ್ತು. ಆ ಮಗುವನ್ನು ಸ್ಥಳೀಯರ ನೆರವಿನಿಂದ ರಕ್ಷಿಸಲಾಗಿತ್ತು. ಮಗುವಿನ…

10 mins ago

ನಮ್ಮದು ಹೈಕಮಾಂಡ್ ಪಕ್ಷ, ಹೈಕಮಾಂಡ್ ಹೇಳಿದಂಗೆ ಮಾಡ್ತೀವಿ: ಸಿಎಂ

ನಮ್ಮದು ಹೈಕಮಾಂಡ್ ಪಕ್ಷ, ಹೈಕಮಾಂಡ್ ಹೇಳಿದಂಗೆ ಮಾಡ್ತೀವಿ,  ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

20 mins ago

ಪಡೀಲಿನಲ್ಲಿ ಕಾರು ಚಲಾಯಿಸುತ್ತಿದ್ದ ಮಹಿಳೆಯ ನಿರ್ಲಕ್ಷ್ಯಕ್ಕೆ ಅಮಾಯಕ ವ್ಯಕ್ತಿ ಬಲಿ !

ಕಾರು ಚಲಾಯಿಸುತ್ತಿದ್ದ ಮಹಿಳೆಯ ನಿರ್ಲಕ್ಷ್ಯ ಮತ್ತು ಅಜಾಗರೂಕತೆಯಿಂದಾಗಿ ರಸ್ತೆ ಬದಿ ಬೈಕ್ ನಿಲ್ಲಿಸಿ ಮೊಬೈಲಿನಲ್ಲಿ ಮಾತನಾಡುತ್ತಿದ್ದ ಅಮಾಯಕ ವ್ಯಕ್ತಿಯೊಬ್ಬರು ಪ್ರಾಣ…

26 mins ago

ಮಾಜಿ ಸಚಿವ ಹೆಚ್​.ಡಿ ರೇವಣ್ಣಗೆ ಬಿಗ್ ರಿಲೀಫ್

ಮಾಜಿ ಸಚಿವ ಹೆಚ್​.ಡಿ ರೇವಣ್ಣ ಅವರಿಗೆ 42ನೇ ಎಸಿಎಂಎಂ ಕೋರ್ಟ್​ ಜಾಮೀನು ಮಂಜೂರು ಮಾಡಿದೆ. ಮಧ್ಯಂತರ ಜಾಮೀನು ಪಡೆದು ಹೊರಗಿದ್ದ…

46 mins ago

ಎಟಿಎಂ ನಲ್ಲಿ ಹಣ ತೆಗೆದುಕೊಡಿ ಎಂದ ರೈತನಿಗೆ ವಂಚಿಸಿದ ಅಪರಿಚಿತ

ಜಿಲ್ಲೆಯ ಹನೂರು ಪಟ್ಟಣದ ಎಟಿಎಂ ನಲ್ಲಿ ಹಣ ತೆಗೆದುಕೊಡಿ ಎಂದು ಕೇಳಿದ ರೈತನಿಗೆ ಕೀಡಿಗೇಡಿಯೋರ್ವ ವಂಚಿಸಿ ಹಣ ಲಪಾಟಿಸಿರುವ ಘಟನೆ…

48 mins ago