News Karnataka Kannada
Monday, May 06 2024
ಮೈಸೂರು

ಮಣ್ಣನ್ನು ರಕ್ಷಿಸಿ ಅಭಿಯಾನಕ್ಕೆ ಸುತ್ತೂರು ಶ್ರೀ ಚಾಲನೆ

Sattur
Photo Credit :

ಮೈಸೂರು: ಕರ್ನಾಟಕ  ರಾಜ್ಯ ರೈತ ಕಲ್ಯಾಣ ಸಂಘದ ವತಿಯಿಂದ ಮಣ್ಣನ್ನು ರಕ್ಷಿಸಿ ಅಭಿಯಾನಕ್ಕೆ ಸುತ್ತೂರು ಶ್ರೀ ಶಿವರಾತ್ರಿಶ್ವರ ದೇಶಿಕೇಂದ್ರ ಮಹಾಸ್ವಾಮಿಗಳು ಭಿತ್ತಿ ಪತ್ರ ಬಿಡುಗಡೆ ಮಾಡುವ ಮೂಲಕ ಚಾಲನೆ ನೀಡಿದರು.

ಬಳಿಕ ನಂಜನಗೂಡು ಪಟ್ಟಣದ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಸಾಮೂಹಿಕವಾಗಿ ಗಿಡಗಳನ್ನು  ನೆಡಲಾಯಿತು.

ಈ ಸಂದರ್ಭ ಮಾತನಾಡಿದ ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಚಂದನ ಗೌಡ ಮಾತನಾಡಿ, ಇಂದಿನ ರೈತರು ತಮ್ಮ ಕೃಷಿಗಾಗಿ ರಾಸಾಯನಿಕ ಗೊಬ್ಬರಗಳನ್ನು ಅವಲಂಬಿಸಿದ್ದಾರೆ ಇದರಿಂದ ದಿನೇ ದಿನೇ ಮಣ್ಣು  ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ. ಮುಂದೊಂದು ದಿನ ಮನುಷ್ಯ ಸತ್ತರೆ ಮಣ್ಣಿಗೆ ಮಣ್ಣಿಗೆ ಮಣ್ಣು ಸತ್ತರೆ  ಎಲ್ಲಿಗೆ ಎಂಬ ಪ್ರಶ್ನೆ ಉದ್ಭವವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ರಾಸಾಯನಿಕ ಗೊಬ್ಬರದಿಂದ ಭೂಮಿ ತನ್ನ ಜೀವನವನ್ನು ಕಳೆದ್ದುಕೊಳುತ್ತಿದೆ. ಸತ್ವ ಕಳೆದುಕೊಂಡ ಭೂಮಿಯಲ್ಲಿ ಎಷ್ಟೇ  ಉತ್ತಮ ಬೆಳೆ ಬೆಳೆದರೂ ಪೋಷಕಾಂಶ ಇರುವುದಿಲ್ಲ. ಈ ಶತಮಾನದ ಗಂಭೀರತೆಯನ್ನು ಈಗಾಗಲೇ ನೋಡಿದ್ದೀರಿ  ಭಾರತದಲ್ಲಿ   65 ವರ್ಷ ತನ್ನ ಜೀವನವನ್ನು ಸಾಗಿಸುತ್ತಾನೆ ಅದರೆ  ಹೊರದೇಶಗಳಲ್ಲಿ ಸಾವಯವ ಬಳಸುವುದರಿಂದ ಸರಾಸರಿ 95 ವರ್ಷ ತನ್ನ ಜೀವನವನ್ನು ಸಾಗಿಸುತ್ತಾನೆ. ಭಾರತದಲ್ಲಿ ರಾಸಾಯನಿಕ ಗೊಬ್ಬರವನ್ನು ಬಳಸಿ ಮನುಷ್ಯನ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾನೆ. ಇದು ಮನುಷ್ಯನ ಆರೋಗ್ಯದ ಮೇಲೆ ಭಾರಿ ದುಷ್ಪರಿಣಾಮಗಳು ಬೀರುತ್ತಿದೆ. ಇದೇ ರೀತಿ ಮುಂದುವರೆದರೆ ಮುಂದಿನ ಮಾನವಕುಲ ಉತ್ತಮ ಮಣ್ಣಿಗಾಗಿ ಸ್ಪರ್ಧಿಸಬೇಕಾಗುತ್ತದೆ ಎಂದರು.

ರೈತ ಎಂದಿಗೂ ಸೋಲುವುದಿಲ್ಲ ಸೋತರೆ ಮಣ್ಣಿನಿಂದ ಸೋಲುತ್ತಾನೆ. ರೈತನಿಗೆ ಸಾವಯವ ಕೃಷಿ ಪದ್ಧತಿ ಅಳವಡಿಸಿ ಬೆಳೆದ  ಬೆಳೆಯಲ್ಲಿ ಚಿನ್ನವನ್ನು ಸಹ ತೆಗೆಯಬಹುದು. ರೈತ ಎಂದಿಗೂ ಸಾಲಗಾರ ಆಗಲಾರ ಮತ್ತು ಆತ್ಮಹತ್ಯೆ ಹಾದಿ ಕೂಡ ಹಿಡಿಯಲಾರ ಎಂದು ಹೇಳಿದರಲ್ಲದೆ, ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘವು ರೈತರಿಗೆ ಸಾವಯವ ಕೃಷಿಗೆ ಬೇಕಾಗುವ ಸಲಕರಣೆಗಳನ್ನು ಮತ್ತು ವಿವಿಧ ಉಪಕರಣಗಳನ್ನು ನೀಡುತ್ತದೆ ಬೀಜದಿಂದ ಹಿಡಿದು ಬೆಳೆ ತೆಗೆಯುವವರೆಗೂ ಬೆನ್ನೆಲುಬಾಗಿ ನಿಂತು ಅವರಿಗೆ ಬೇಕಾದ ಸಹಾಯ ಮಾಡುತ್ತದೆ ಹಾಗೂ ಅವರಿಗೆ ಎಲ್ಲಾ ರೀತಿಯಲ್ಲೂ ಅನುಕೂಲ ಮಾಡಿಕೊಡುತ್ತದೆ ನಮ್ಮ ಸಂಘದ ಉದ್ದೇಶ ಕೂಡ ಹೌದು ಎಂದರು.

ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ಮೈಸೂರು  ಯುವ ಘಟಕ ಅಭಿ, ಮೈಸೂರು ಜಿಲ್ಲಾ ಕಾರ್ಯದರ್ಶಿ ಗೋವರ್ಧನ್,  ತಾಲ್ಲೂಕು ಅಧ್ಯಕ್ಷ ವೇಣುಗೋಪಾಲ, ಹೇಮಂತ್,  ಹರೀಶ್ ಗೌಡ, ಮೂರ್ತಿ, ಸ್ವಾಮಿ ಗೌಡ, ಬ್ಯಾಳರ್ ಹೇಮಂತ್, ವಿದ್ಯಾಧರ್ ಹಿಮ್ಮಾವು, ವಸಂತ ಶಿವಣ್ಣ ಕುಮಾರ್ ಮಣಿ ಹಳೆಪುರ ಗಿರೀಶ್, ಶಿವು, ಪುನೀತ್ ದೇಪೂರ್ ಚಂದ್ರ, ಕಿರಣ್, ಸಂಜಯ್ ಶಿವಕುಮಾರ್, ಚಲುವರಾಜು, ನಾಗೇಂದ್ರ ಸೇರಿದಂತೆ ಹಲವರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು