News Karnataka Kannada
Thursday, May 02 2024
ಮೈಸೂರು

ಖೇಲೋ ಇಂಡಿಯಾ ಗೇಮ್ಸ್ ನಲ್ಲಿ ದಿಯಾಗೆ ಬೆಳ್ಳಿ ಪದಕ

Diya
Photo Credit : News Kannada

ಮೈಸೂರು : ಬೆಂಗಳೂರಿನ ಜೈನ್ ಗ್ಲೋಬಲ್ ಕ್ಯಾಂಪಸ್‌ ನಲ್ಲಿ ನಡೆದ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2022 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ್ದ ವಿದ್ಯಾಶ್ರಮ ಕಾಲೇಜು ವಿದ್ಯಾರ್ಥಿನಿ ದಿಯಾ ಅರಸ್ ಅವರು ಮಹಿಳೆಯರ ವೈಯುಕ್ತಿಕ ಕರಾಟೆ ಕಟಾ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.

ಕುರುಕ್ಷೇತ್ರ ವಿಶ್ವವಿದ್ಯಾನಿಲಯದಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಗೇಮ್ಸ್‌ನಲ್ಲಿ ಅಗ್ರ 8 ಕರಾಟೆ ಪಟುಗಳು ನೇರವಾಗಿ KIUG 2022ಗೆ ಅರ್ಹತೆ ಪಡೆದರು. ಅವರನ್ನು ತಲಾ 4 ಅಥ್ಲೀಟ್‌ ಗಳ ಎರಡು ಪೂಲ್‌ಗಳಾಗಿ ವಿಂಗಡಿಸಲಾಗಿತ್ತು. ಕರಾಟೆಪಟುಗಳು ತಮ್ಮ ತಮ್ಮ ಪೂಲ್‌ಗಳಲ್ಲಿ ಪ್ರದರ್ಶನ ನೀಡಬೇಕಾಗಿತ್ತು ಮತ್ತು ಪೂಲ್‌ನ ಟಾಪರ್ ನೇರವಾಗಿ ಅಂತಿಮ ಪಂದ್ಯಕ್ಕೆ ಅರ್ಹತೆ ಪಡೆದಿದ್ದರು. ತಾಂತ್ರಿಕ ಮತ್ತು ಅಥ್ಲೆಟಿಕ್ ಪ್ರದರ್ಶನಗಳನ್ನು ಪರಿಗಣಿಸಿ ಕರಾಟೆ ಪಟುಗಳಿಗೆ ಅಂಕಗಳನ್ನು ನೀಡಲಾಯಿತು.

ಮೊದಲ ಪೂಲ್‌ ನಲ್ಲಿ ದಿಯಾ ಅರಸ್ ಅವರು 22.54 ಪಾಯಿಂಟ್ ಪಡೆದು ಅಗ್ರಸ್ಥಾನ ಪಡೆದು ಫೈನಲ್‌ ಗೆ ಅರ್ಹತೆ ಪಡೆದರು. ತೀವ್ರವಾದ ಅಂತಿಮ ಹಣಾಹಣಿಯಲ್ಲಿ ಮೆಸನ್ ಸಿಂಘಿ 24.22 ಪಾಯಿಂಟ್ ನೊಂದಿಗೆ ಚಿನ್ನದ ಪದಕ ಗೆದ್ದಿದ್ದು, ದಿಯಾ ಅರಸ್ 23.82 ಪಾಯಿಂಟ್‌ಗಳೊಂದಿಗೆ ಬೆಳ್ಳಿ ಪದಕಕ್ಕೆ ತೃಪ್ತಿ ಪಡಬೇಕಾಯಿತು.

ಇದೇ ಶೈಕ್ಷಣಿಕ ವರ್ಷದಲ್ಲಿ ಆಲ್ ಇಂಡಿಯಾ ಇಂಟರ್ ಯೂನಿವರ್ಸಿಟಿ ಕರಾಟೆ ಗೇಮ್ಸ್ ಮತ್ತು ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಎರಡರಲ್ಲೂ ಪದಕಗಳನ್ನು ದಿಯಾ ಅರಸ್  ಪಡೆದುಕೊಂಡಿದ್ದರು. ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಪಿ.ಕೃಷ್ಣಯ್ಯ ಅವರ ಸಮರ್ಥ ಮಾರ್ಗದರ್ಶನದಲ್ಲಿ ಅಥ್ಲೆಟಿಕ್, ಹಾಕಿ, ವಾಲಿಬಾಲ್ ಮತ್ತು ಕರಾಟೆ ತಂಡದ ನೇತೃತ್ವ ವಹಿಸಿರುವ ವ್ಯವಸ್ಥಾಪಕ ಡಾ. ಎಚ್.ಎಸ್.ಕೃಷ್ಣಕುಮಾರ್, ಮಹಿಳಾ ಸಹಾಯಕ ಸಿಬ್ಬಂದಿ ಡಾ.ಸಂಧ್ಯಾರಾಣಿ, ತರಬೇತುದಾರ ಎಸ್. ಜಸ್ವಂತ್ ಅವರ ತರಬೇತಿಯಲ್ಲಿ ದಿಯಾ ಅರಸ್ ಈ ಸಾಧನೆಗೈದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು