ಮೈಸೂರು: ಇತ್ತೀಚೆಗಿನ ದಿನಗಳಲ್ಲಿ ಕ್ಯಾನ್ಸರ್ ರೋಗಿಗಳಿಗೆ ಕೇಶದಾನ ಮಾಡುವುದು ಹೆಚ್ಚಾಗಿ ಕಂಡು ಬರುತ್ತಿದೆ. ಈಗಾಗಲೇ ಬಹುತೇಕ ಯುವತಿಯರು, ಮಹಿಳೆಯರು ಕೇಶದಾನ ಮಾಡುವ ಮೂಲಕ ಗಮನಸೆಳೆದಿದ್ದಾರೆ. ಇದೆಲ್ಲದರ ನಡುವೆ ಇನ್ನರ್ ವೀಲ್ ಕ್ಲಬ್ ಆಫ್ ಮೈಸೂರು ಗೋಲ್ಡ್ ಮತ್ತು ಮೈಸೂರು ಬ್ಯೂಟಿಷಿಯನ್ ವೆಲ್ ಫೇರ್ ಅಸೋಸಿಯೇಷನ್ ವತಿಯಿಂದ ಕ್ಯಾನ್ಸರ್ ರೋಗಿಗಳಿಗೆ ಕೇಶದಾನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಹೊಸದೊಂದು ಕಾರ್ಯಕ್ಕೆ ಮುನ್ನುಡಿ ಬರೆದಿದ್ದಾರೆ.
ಈ ಸಂಬಂಧ ನಗರದ ಖಾಸಗೀ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮಕ್ಕೆ ಎಸ್ ಐ ಮಹೇಶ್ ನಟಿ ತನ್ವೀರಾವ್, ಪಾಲಿಕೆ ಸದಸ್ಯೆ ಭಾಗ್ಯ ಮಾದೇಶ್, ಚಾಲನೆ ನೀಡಿದರು. ಇದೇ ವೇಳೆ 25 ಮಂದಿ ಕೇಶದಾನ ಮಾಡಿದ್ದು, ಈಗಾಗಲೇ ಸುಮಾರು 75 ಜನ ಒಟ್ಟು ನೂರು ಜನ ತಮ್ಮ ತಲೆ ಕೂದಲು ದಾನ ಮಾಡಿದ್ದಾರೆ. ಇಲ್ಲಿ ಶೇಖರಣೆಯಾದ ತಲೆ ಕೂದಲನ್ನು ವಿಗ್ ಮಾಡಿಸಿ ನಾವೇ ಸ್ವತಃ ಕ್ಯಾನ್ಸರ್ ರೋಗಿಗಳಿಗೆ ವಿಗ್ ದಾನ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಮೈಸೂರು ಬ್ಯೂಟಿಷಿಯನ್ ವೆಲ್ ಫೇರ್ ಅಸೋಸಿಯೇಷನ್ ಅಧ್ಯಕ್ಷೆ ವೇದಾರೈ, ಇನ್ನರ್ ವೀಲ್ ಕ್ಲಬ್ ಆಫ್ ಮೈಸೂರು ಗೋಲ್ಡ್ ಅಧ್ಯಕ್ಷೆ ಪ್ರತಿಭಾ, ಕಾರ್ಯದರ್ಶಿ ಪ್ರೇಮಾರವಿ ಸೇರಿದಂತೆ ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು.