Categories: ಮೈಸೂರು

ಕುವೆಂಪುಗೆ ಅವಮಾನವಾಗಿದ್ದರೆ ಅದಕ್ಕೆ ಕಾಂಗ್ರೆಸ್ ಕಾರಣ: ಬಿ.ಸಿ.ನಾಗೇಶ್

ಮೈಸೂರು: ಕುವೆಂಪು ಅವರಿಗೆ ಅವಮಾನವಾಗಿದ್ದರೆ ಅದಕ್ಕೆ ಕಾಂಗ್ರೆಸ್ ಕಾರಣವಾಗಿದೆ ಎಂದಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಕಾಂಗ್ರೆಸ್‌ನವರು ಸುಳ್ಳನ್ನು ಹಬ್ಬಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಠ್ಯ ಪುಸ್ತಕದಲ್ಲಿ ಕುವೆಂಪು ಅವರಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪ ಕುರಿತು ಪ್ರತಿಕ್ರಿಯಿಸಿ ಕಾಂಗ್ರೆಸ್‌ನವರು ಟಿಪ್ಪು, ನಾರಾಯಣ್ ಗುರು, ಭಗತ್ ಸಿಂಗ್, ಬಸವಣ್ಣನ ಮೇಲೆ ಸುಳ್ಳು ಹಬ್ಬಿಸಿದರು.  ಆ ಸುಳ್ಳುಗಳು ಫೇಲ್ ಆದ ಕಾರಣ ಕುವೆಂಪು ಅವರನ್ನು ಹಿಡಿದುಕೊಂಡಿದ್ದಾರೆ. ಅದು ಸಹಾ ಮಿಸ್ ಫೈರ್ ಆಗಿದೆ. ಸಿದ್ದರಾಮಯ್ಯ ಕುವೆಂಪು ಅವರ ಕ್ಷಮೆಯಾಚಿಸಬೇಕು. ಕುವೆಂಪು ಅವರ ನಾಲ್ಕು ಪಾಠವನ್ನು ಸಿದ್ದು ಕೈ ಬಿಟ್ಟಿದ್ದರು. ನಾವು ಅದನ್ನು ಸೇರಿಸುವ ಪ್ರಯತ್ನ ಮಾಡಿದ್ದೇವೆ. ಈ ದೇಶದ ಸಂಸ್ಕೃತಿ ಬಗ್ಗೆ ಮಾತನಾಡಿದ್ದನ್ನು ಅವರು ತೆಗೆದು ಹಾಕಿದ್ದಾರೆ. ದಯಮಾಡಿ ಕಾಂಗ್ರೆಸ್ ಪುಸ್ತಕವನ್ನು ಓದಲಿ. ಕಂಟೆಂಟ್ ಇಟ್ಟುಕೊಂಡು ವಾದ ಮಾಡಿ. ಅದು ಬಿಟ್ಟು ವ್ಯಕ್ತಿಗತವಾಗಿ ವಾದ ಮಾಡಬೇಡಿ ಅದು ಸರಿಯಲ್ಲ ಎಂದರು.

ಪಠ್ಯದಲ್ಲಿ ಕೇಸರಿಕರಣ ಆರೋಪ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವರು, ಕಾಂಗ್ರೆಸ್ ಕನ್ನಡಕದಿಂದ ಆ ರೀತಿ ಕಾಣುತ್ತಿರಬಹುದು. ನನ್ನ ಕನ್ನಡಕದಲ್ಲಿ ಯಾವುದೇ ಬಣ್ಣ ಕಾಣುತ್ತಿಲ್ಲ. ನಮಗೆ ಕಮ್ಯುನಿಸ್ಟ್ ಅಥವಾ ಬೇರೆ ಬಣ್ಣ ಕಾಣಲ್ಲ. ಟಿಪ್ಪು ಸುಲ್ತಾನ್  ಪುಸ್ತಕ ತಂದರೂ ನಮಗೆ ಬಣ್ಣ ಕಾಣಲಿಲ್ಲ. ನಮಗೆ ಮಕ್ಕಳು ಮಾತ್ರ ಕಾಣಿಸುತ್ತಾರೆ. ಕಾಂಗ್ರೆಸ್ ಜೀವನದುದ್ದಕ್ಕೂ ಬಣ್ಣ ಕಂಡಿದೆ. ಮತ ಬಿಟ್ಟು ಬೇರೆ ಏನನ್ನು ಯೋಚನೆ ಮಾಡಿದವರಲ್ಲ. ಹಸಿರು ಬಣ್ಣದವರು ಮತ ಹಾಕಲ್ಲ ಅಂತಾ ಅವರಿಗೆ ಭಯ. ಯಾವ ಕಾಂಗ್ರೆಸ್ ಪಕ್ಷದವರು ಪಠ್ಯ ಪುಸ್ತಕವನ್ನೇ ಓದಿಲ್ಲ. ಇದಕ್ಕೆ ಸಾಕ್ಷಿ ಅವರು ಮಾಡಿರುವ ಟ್ವೀಟ್‌ಗಳು. ಕಾಂಗ್ರೆಸ್ ಶಿಕ್ಷಣ ಇಲಾಖೆಯನ್ನು ಮತ ಬ್ಯಾಂಕ್ ಮಾಡಿತ್ತು. ಅದಕ್ಕಾಗಿ ಪಠ್ಯದಲ್ಲಿ ತಪ್ಪುಗಳಾಗಿತ್ತು ಎಂದು ಕಿಡಿಕಾರಿದರಲ್ಲದೆ, ಮತ್ತೆ ಪಠ್ಯ ಪುಸ್ತಕ ಪರಿಷ್ಕರಣೆ ಪ್ರಶ್ನೆಯೇ ಇಲ್ಲ. ಪುಸ್ತಕ ಈಗಾಗಲೇ ಮುದ್ರಣವಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟನೆ ನೀಡಿದರು.

Sneha Gowda

Recent Posts

ರಿಚರ್ಡ್‌ ಹ್ಯಾನ್ಸೆನ್‌ಗೆ ಸೆಲ್ಕೋದ ಪ್ರತಿಷ್ಠಿತ ʼಸೂರ್ಯಮಿತ್ರʼ ಪ್ರಶಸ್ತಿ

ಅಭಿವೃದ್ಧಿಶೀಲ ರಾಷ್ಟ್ರಗಳ ಗ್ರಾಮೀಣ ಪ್ರದೇಶಗಳಲ್ಲಿ ಸೌರವಿದ್ಯುತ್ ಸೌಲಭ್ಯವನ್ನು ಹೆಚ್ಚಿಸಲು, ಆಧುನಿಕ ಫೋಟೋ ವೋಲ್ಟಾಯಿಕ್‌ (ಪಿವಿ) ತಂತ್ರಜ್ಞಾನವನ್ನು ಮೈಕ್ರೋ ಫೈನಾನ್ಸ್ ಸಂ‍ಸ್ಥೆಗಳ…

4 hours ago

ಜಿಯೋ ಬಂಪರ್‌ ಆಫರ್‌ : 15 ಒಟಿಟಿ ಆ್ಯಪ್ಲಿಕೇಷನ್‌ ಜೊತೆ ಅನ್‌ಲಿಮಿಟೆಡ್ ಡೇಟಾ ಪ್ಲಾನ್

ಜಿಯೋ ಇದೀಗ ಮತ್ತೊಂದು ಹೊಚ್ಚ ಹೊಸ ಪ್ಲಾನ್ ಘೋಷಿಸಿದೆ. ನೆಟ್‌ಫ್ಲಿಕ್ಸ್‌ನ ಬೇಸಿಕ್ ಪ್ಲಾನ್, ಅಮೆಜಾನ್ ಪ್ರೈಮ್ ಸೇರಿದಂತೆ 15 ಒಟಿಟಿ…

5 hours ago

ಕಾರಿನಲ್ಲಿ ಆಕಸ್ಮಿಕ ಬೆಂಕಿ : ವ್ಯಕ್ತಿ ಸಜೀವ ದಹನ

ಕಾರಿಗೆ ಆಕಸ್ಮಿಕ ಬೆಂಕಿ ತಗುಲಿ, ಕಾರಿನಲ್ಲಿದ್ದ ವ್ಯಕ್ತಿ ಸಜೀವ ದಹನವಾದ ಘಟನೆ ಬಾಗಲಕೋಟೆ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಡೆದಿದೆ.ಕಾರಿನಲ್ಲಿದ್ದ ಸಂಗನಗೌಡ…

5 hours ago

ವಿಧಾನಪರಿಷತ್ ಚುನಾವಣೆ : ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಿಜೆಪಿ

ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. 6 ಕ್ಷೇತ್ರಗಳ…

5 hours ago

ಹಾಡಹಗಲೇ ಚಾಕುವಿನಿಂದ ಇರಿದು ಯುವಕನ ಭೀಕರ ಹತ್ಯೆ

ಚಾಕುವಿನಿಂದ ಇರಿದು ಹಾಡಹಗಲೇ ಯುವಕನ ಭೀಕರ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ‌ಮಣ್ಣೂರು ಗ್ರಾಮದಲ್ಲಿ ನಡೆದಿದೆ. ಪ್ರೀತಿ…

5 hours ago

ಮೊಬೈಲ್‌ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಬಿತ್ತು ಧರ್ಮದೇಟು

ಮೊಬೈಲ್‌ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಸಾರ್ವಜನಿಕರೇ ಧರ್ಮದೇಟು ನೀಡಿದ ಘಟನೆ ಉಡುಪಿ ಸಿಟಿ ಬಸ್‌ ನಿಲ್ದಾಣದಲ್ಲಿ ಇಂದು ಸಂಭವಿಸಿದೆ

6 hours ago