Categories: ಮೈಸೂರು

ಮೈಸೂರು: ಭಾರತ್ ಜೋಡೋದಿಂದ ಹೃದಯ ಬೆಸೆಯುವ ಕಾರ್ಯ ಮಾಡಿದ್ದೇವೆ ಎಂದ ಡಿಕೆಶಿ

ಮೈಸೂರು: ಬದನವಾಳು ಗ್ರಾಮದಲ್ಲಿ ಗಾಂಧಿ ಜಯಂತಿ ಮಾತ್ರ ಆಚರಿಸಿಲ್ಲ. ವೈಮನಸ್ಸು ಉಂಟಾಗಿದ್ದ ಎರಡು ಸಮುದಾಯಗಳ ಹೃದಯ ಬೆಸೆಯುವ ಕಾರ್ಯ ಮಾಡಿದ್ದೇವೆ. ಇದೇ ಭಾರತ್ ಜೋಡೋ ಉದ್ದೇಶವೂ ಆಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1993ರಲ್ಲಿ ನಡೆದ ಘಟನೆಯಿಂದ ಬದನವಾಳು ದಲಿತರು ಮತ್ತು ಸರ್ವಣೀಯರ ಓಡಾಡುವ ಸಂಪರ್ಕ ರಸ್ತೆ ಮುಚ್ಚಲಾಗಿತ್ತು. ಎರಡು ಸಮುದಾಯಗಳ ಮುಖಂಡರ ಮನವೊಲಿಸಿ, ಆ ರಸ್ತೆಯನ್ನು ಅಭಿವೃದ್ಧಿಪಡಿಸಿದ್ದೇವೆ. ಆ ರಸ್ತೆಗೆ ಭಾರತ್ ಜೋಡೋ ಹೆಸರಿಡಲಾಗಿದೆ ಎಂದರು.

ಎರಡು ಸಮುದಾಯಗಳ ಜನರ ಮನಸ್ಸು ತಿಳಿಯಾಗಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಎಲ್ಲರೊಂದಿಗೆ ಸಹಭೋಜನ ಮಾಡಿದ್ದೇವೆ. ಕೆಲವು ಮನೆಗಳು, ಅಂಗನವಾಡಿ ಕೇಂದ್ರಕ್ಕೆ ಸುಣ್ಣಬಣ್ಣ ಬಳಿಯಲಾಗಿದೆ ಎಂದು ತಿಳಿಸಿದರು.

1927 ಮತ್ತು 1938ರಲ್ಲಿ ಮಹಾತ್ಮ ಗಾಂಧಿ ಅವರು ಬದನವಾಳು ಖಾದಿ ಕೇಂದ್ರಕ್ಕೆ ಭೇಟಿ ನೀಡಿದ್ದರು. ಇಲ್ಲಿ ಅರ್ಧದಿನ ಪಾದಯಾತ್ರೆ ಮೊಟುಕು ಮಾಡಿದ ರಾಹುಲ್ ಗಾಂಧಿ ಅವರು ಅರ್ಥಪೂರ್ಣವಾಗಿ ಗಾಂಧಿ ಜಯಂತಿ ಆಚರಿಸಿದ್ದಾರೆ. ಸಹಪಂಕ್ತಿ ಭೋಜನ, ಭಜನೆ, ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು ಎಂದು ವಿವರಿಸಿದರು.

ಭಾರತ್ ಜೋಡೋ ಯಾತ್ರೆ ಮೈಸೂರಿನಲ್ಲಿ ಸಂಚರಿಸುವಾಗ ಕಪ್ಪು ಬಾವುಟ ಪ್ರದರ್ಶಿಸಿದರೆ ಅದರ ಫಲವನ್ನು ಎದುರಿಸಬೇಕಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಚ್ಚರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು ಕಪ್ಪು ಬಾವುಟ ಹಂಚಿರುವುದು ತಿಳಿದು ಬಂದಿದೆ. ಈ ವಿಚಾರವಾಗಿ ನಗರ ಪೊಲೀಸ್ ಆಯುಕ್ತರೊಂದಿಗೆ ಮಾತನಾಡುತ್ತೇನೆ. ಕಪ್ಪು ಬಾವುಟ ಪ್ರದರ್ಶಿಸಿಸುವುದು, ಕಾರಿಗೆ ಮೊಟ್ಟೆ ಎಸೆಯುವುದು ಬಿಜೆಪಿಯವರ ಸಂಸ್ಕೃತಿ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಬಲಿದಾನ ಕೊಟ್ಟವರು ಕಾಂಗ್ರೆಸ್ ನಾಯಕರು. ಕಪ್ಪು ಬಾವುಟ ಪ್ರದರ್ಶಿಸಿದರೆ ಅದರ ಪ್ರತಿಫಲವನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು.

Ashika S

Recent Posts

ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಸಂಸ್ಕಾರ ಕಲಿಸಿ : ರವಿ ಶಾಸ್ತ್ರಿ

ಮಕ್ಕಳಿಗೆ ಆಸ್ತಿ ಮಾಡಿ ಇರಿಸುವುದರ ಬದಲು ಮಕ್ಕಳನ್ನು ವಿದ್ಯಾವಂತರನ್ನಾಗಿ ಸಂಸ್ಕಾರವಂತರನ್ನಾಗಿ ಮಾಡಿದರೆ ಅದುವೇ ದೊಡ್ಡ ಆಸ್ತಿ ಎಂದು ಶ್ರೀ ಕೃಷ್ಣ…

13 mins ago

ರೊನಿ ಅರುಣ್ ಬರೆದ ಲೇಖನಗಳ ಸಂಗ್ರಹ ʻರಿಕ್ಷಾ ಡೈರಿʼ ಲೋಕಾರ್ಪಣೆ

ಮಾಂಡ್ ಸೊಭಾಣ್ ಪ್ರಕಾಶನದ 22 ನೇ ಪುಸ್ತಕ ರೊನಿ ಅರುಣ್ ಬರೆದ ಲೇಖನಗಳ ಸಂಗ್ರಹ ʻರಿಕ್ಷಾ ಡೈರಿʼ ಉಲ್ಲಾಳ ಸೋಮೇಶ್ವರದಲ್ಲಿರುವ…

17 mins ago

ʼಮೋದಿ ಸರ್ಕಾರವನ್ನು ಸೋಲಿಸದಿದ್ದರೆ ಕರಾಳ ದಿನಗಳನ್ನ ಎದುರಿಸಬೇಕಾಗುತ್ತದೆʼ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೋದಿ ಸರ್ಕಾರವನ್ನು ಸೋಲಿಸದಿದ್ದರೆ ಮುಂದಿನ ದಿನಗಳಲ್ಲಿ ದೇಶವು ಕರಾಳ ದಿನಗಳನ್ನು ನೋಡಬೇಕಾಗಬಹುದು ಎಂದು ಶಿವಸೇನಾ…

24 mins ago

ವಕೀಲ ಬಾಬಶೆಟ್ಟಿ ಹತ್ಯೆಗೆ 5 ಲಕ್ಷ ಸುಪಾರಿ: ಪ್ರಮುಖ ಆರೋಪಿ ಬಂಧನ

ಐದು ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟು, ವಕೀಲನ ಹತ್ಯೆಗೆ ಸಂಚು ರೂಪಿಸಿದ್ದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಬೀದರ್‌ ಜಿಲ್ಲಾ ಪೊಲೀಸರು…

35 mins ago

ದೇಶಾದ್ಯಂತ 24 ಗಂಟೆ ವಿದ್ಯುತ್‌ ಪೂರೈಕೆ ಸೇರಿ 10 ಗ್ಯಾರಂಟಿ ಘೋಷಿಸಿದ ಕೇಜ್ರಿವಾಲ್

2024ರ ಲೋಕಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಗೆದ್ದರೆ ಹತ್ತು ಗ್ಯಾರಂಟಿಗಳನ್ನು ಜಾರಿಗೊಳಿಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌…

42 mins ago

ಬೀದರ್‌: ಬಿಸಿ ದೋಸೆಯಂತೆ ಮಾರಾಟವಾಗುತ್ತಿದೆ ಎಸಿ, ಕೂಲರ್‌

ಬಿಸಿಲು ಹಾಗೂ ಅದರ ಝಳದಿಂದ ಜನ ಒಂದೆಡೆ ತೀವ್ರ ಅನಾರೋಗ್ಯದ ಸಮಸ್ಯೆ ಎದುರಿಸುತ್ತಿದ್ದರೆ, ಏರ್‌ ಕಂಡಿಷನರ್‌ (ಎಸಿ), ಏರ್‌ ಕೂಲರ್‌ಗಳ…

56 mins ago