Categories: ಮೈಸೂರು

ಮೈಸೂರು: ಎಂಐಟಿಯಲ್ಲಿ ದಾಖಲೆಯ ಮೋದಿ ಕಲಾಕೃತಿ

ಮೈಸೂರು: ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ  ಮೈಸೂರಿನ ಎಂಐಟಿ ಕಾಲೇಜು ನೂತನ  ದಾಖಲೆ ನಿರ್ಮಿಸಲು   ಮುಂದಾಗಿದೆ. ಪ್ರಧಾನಮಂತ್ರಿ  ನರೇಂದ್ರ   ಮೋದಿಯವರ ಸ್ಟೆನ್ಸಿಲ್ ಕಲಾಕೃತಿ ರಚಿಸಿ ಗಮನ ಸೆಳೆದಿದೆ.

ಸ್ವಾತಂತ್ರ್ಯ ಬಂದು 75 ವರ್ಷಗಳು ಸಂದ ಹಿನ್ನಲೆಯಲ್ಲಿ  ದಾಖಲೆ ನಿರ್ಮಿಸಲು ಮುಂದಾದ ಕಾಲೇಜು ವಿದ್ಯಾರ್ಥಿಗಳು ಹಾಗೂ ಆಡಳಿತ ಮಂಡಳಿ ಪ್ರಧಾನಮಂತ್ರಿ  ನರೇಂದ್ರ  ಮೋದಿಯವರ ಸ್ಟೆನ್ಸಿಲ್ ಕಲಾಕೃತಿ ರಚಿಸಿ ವಿಶ್ವ ದಾಖಲೆ ಮಾಡಲು ನಾಂದಿ ಹಾಡಿದ್ದಾರೆ.

50X50 ಅಡಿ ಸುತ್ತಳತೆಯ ಬೃಹತ್ ಸ್ಟೆನ್ಸಿಲ್ ಪೋಟ್ರೆಟ್‌ನ್ನು  ಪೇಪರ್ ಕಟ್ಟಿಂಗ್ ಮೂಲಕ ರಚಿಸಲಾಗಿದೆ. ಕಾಲೇಜಿನ ೭೫ ವಿದ್ಯಾರ್ಥಿಗಳ ನಿರಂತರ ಪರಿಶ್ರಮದ ಫಲವಾಗಿ     ಪೋಟ್ರೆಟ್ ನಿರ್ಮಾಣಗೊಂಡಿದ್ದು, ದಾಖಲೆಗೆ ಪ್ರಯತ್ನಿಸಲಾಗಿದೆ. ಸ್ಟೆನ್ಸಿಲ್ ಪೋಟ್ರೆಟ್ ಮೂಲಕ ಮೋದಿ ಪೇಪರ್ ಕಟ್ಟಿಂಗ್ ರಚಿಸಲಾಗಿದ್ದು, 50 ಅಡಿ ಸುತ್ತಳತೆ ಬೃಹತ್ ಪೇಪರ್ ಕಟ್ಟಿಂಗ್ ಪೋಟ್ರೆಟ್ ನಗರದ ಜಿಎಸ್‌ಎಸ್ ಹಾಗೂ ಎಂಐಟಿ ಕಾಲೇಜಿನ ವಿದ್ಯಾರ್ಥಿಗಳ ಸಹಯೋಗದಲ್ಲಿ  ದಾಖಲೆಯ ಪ್ರಯತ್ನವಾಗಿದೆ.

ಅಜಾದಿ ಕಾ ಅಮೃತ್ ಮಹೋತ್ಸವದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಗೆ ಗೌರವ ಸಮರ್ಪಣೆ ಮಾಡುವ ಉದ್ದೇಶದೊಂದಿಗೆ ಇದನ್ನು ನಿರ್ಮಿಸಲಾಗಿದೆ ಎಂದು ಕಾಲೇಜಿ ಆಡಳಿತ ಮಂಡಳಿ ತಿಳಿಸಿದ್ದು, ಇದು ದಾಖಲೆಯಾಗಲಿದೆ ಎಂದಿದ್ದಾರೆ.

Ashika S

Recent Posts

ದೊಡ್ಡಬಳ್ಳಾಪುರ: ಹಳೇ ದ್ವೇಷಕ್ಕೆ ಯುವಕನ ಕತ್ತು ಕುಯ್ದು ಕೊಲೆ

ಹಳೇ ದ್ವೇಷಕ್ಕೆ ನಡುರಸ್ತೆಯಲ್ಲಿ ಯುವಕನ ಕತ್ತು ಕುಯ್ದು ಕೊಲೆ ಮಾಡಿದ ಘಟನೆ ದೊಡ್ಡಬಳ್ಳಾಪುರ ಹೊರವಲಯ ನವೋದಯ ಶಾಲೆಯ ಮುಂಭಾಗದಲ್ಲಿ ನಡೆದಿದೆ.

6 mins ago

ಕೇಂದ್ರ ಸೂಚನೆ ನೀಡಿದ ಕೂಡಲೇ ರಾಜ್ಯದಲ್ಲಿ ಸಿಎಎ ಅನುಷ್ಠಾನ: ಮೋಹನ್‌ ಯಾದವ್‌

ದೇಶಾದ್ಯಂತ ಚುನಾವಣೆಗ ಅಂತ್ಯಗೊಳುವುದಕ್ಕೂ ಮುನ್ನ ವಿವಿಧ ರಾಜ್ಯಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪ್ರಕ್ರಿಯೆ ಆರಂಭಿಸಬೇಕೆಂದು ಕೇಂದ್ರ ನಿರ್ಧರಿಸಿದೆ.

23 mins ago

ತಾಯಿ, ಹೆಂಡತಿ ಮತ್ತು ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿದ ಮಾನಸಿಕ ಅಸ್ವಸ್ಥ

ವ್ಯಕ್ತಿಯೊಬ್ಬ ತನ್ನ ತಾಯಿ, ಹೆಂಡತಿ ಮತ್ತು ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ  ಸೀತಾಪುರದಲ್ಲಿ ನಡೆದಿದೆ.

42 mins ago

ಕಲಬುರಗಿ: ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿ ಆತ್ಮಹತ್ಯೆ

ಮದುವೆಗೆ ನಿರಾಕರಿಸಿದ್ದಕ್ಕೆ  ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ನಗರ ಹೊರವಲಯದ ಯಲ್ಲಾಲಿಂಗ್ ಕಾಲೋನಿಯಲ್ಲಿ ನಡೆದಿದೆ.

1 hour ago

ಮುಂದಿನ 6 ದಿನಗಳ ಕಾಲ ರಾಜ್ಯದ ಹಲವೆಡೆ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಮುಂದಿನ 6 ದಿನಗಳ ಕಾಲ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗುವ ಮುನ್ಸೂಚನೆಯನ್ನು ರಾಜ್ಯ ಹವಾಮಾನ ಇಲಾಖೆ  ನೀಡಿದೆ.

1 hour ago

ಜೈಲಿನಿಂದ ಹೊರಬಂದ ಕೇಜ್ರಿವಾಲ್​ಗೆ ಆರತಿ ಬೆಳಗಿ ಸ್ವಾಗತಿಸಿದ ಕುಟುಂಬಸ್ಥರು

ಅಕ್ರಮ ಮದ್ಯ ನೀತಿ ಪ್ರಕರಣದ ಆರೋಪದಲ್ಲಿ ಜೈಲು ಸೇರಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​​ ಅವರಿಗೆ ನಿನ್ನೆ ಸುಪ್ರೀಂ ಕೋರ್ಟ್…

2 hours ago