ಮೈಸೂರು: ಸ್ವಚ್ಛ ಸರ್ವೇಕ್ಷಣ ಅಭಿಯಾನದ ಹಿನ್ನೆಲೆ ಮತ್ತೊಮ್ಮೆ ಸ್ವಚ್ಛ ನಗರಿ ಬಿರುದು ಪಡೆದುಕೊಳ್ಳಲು ಮೈಸೂರಿಗರು ಕೈ ಜೋಡಿಸಿ ಎಂದು ಅಂತಾರಾಷ್ಟ್ರೀಯ ಖೋ ಖೋ ಆಟಗಾರ್ತಿ ಬಿ.ಚೈತ್ರ ಮನವಿ ಮಾಡಿಕೊಂಡಿದ್ದಾರೆ.
ಈ ಬಾರಿಯ ಸ್ವಚ್ಛ ಸರ್ವೇಕ್ಷಣ ಅಭಿಯಾನದ ರಾಯಭಾರಿಯಾಗಿರುವ ಬಿ ಚೈತ್ರ. 2016ರಲ್ಲಿ ಸ್ವಚ್ಛ ನಗರಿ ಬಿರುದು ಪಡೆದುಕೊಂಡಿದ್ದೆವು, ಕಳೆದ ವರ್ಷ 27ನೇ ಸ್ಥಾನಕ್ಕೆ ಬಂದಿದ್ದೆವು. ಮೈಸೂರು ಸ್ವಚ್ಛ ನಗರಿಯಾಗಲು ಒಬ್ಬರಿಂದ ಸಾಧ್ಯವಿಲ್ಲ. ಎಲ್ಲರ ಸಹಕಾರದಿಂದ ನಾವು ಮತ್ತೊಮ್ಮೆ ಸ್ವಚ್ಛ ನಗರಿ ಸ್ಥಾನ ಪಡೆಯಬಹುದು ಎಂದರು.
ಇದೀಗ ಮತ್ತೆ ಸ್ವಚ್ಛ ಸರ್ವೇಕ್ಷಣೆ ಪ್ರಾರಂಭವಾಗಿದೆ. ಸ್ವಚ್ಛತೆ ಕಾಪಾಡುವುದರೊಂದಿಗೆ ಹಸಿ, ಒಣ ವಿಂಗಡಿಸಿ ಕಸದ ವಾಹನದಲ್ಲೇ ಕಸ ಹಾಕಿ. ಮೈಸೂರು ಸ್ವಚ್ಛತೆಗೆ ಉತ್ತಮ ಪ್ರತಿಕ್ರಿಯೆ ನೀಡಿ. ಮೈಸೂರು ಜನತೆ ಕೈ ಜೋಡಿಸಿ ಎಂದು ಬಿ ಚೈತ್ರ ಮನವಿ ಮಾಡಿಕೊಂಡಿದ್ದಾರೆ.

