ಮೈಸೂರು : ಹಣಕ್ಕಾಗಿ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಕಿಡ್ನಾಪ್ ಮಾಡಲಾಗಿದ್ದು, ಸಿನಿಮೀಯಾ ಶೈಲಿಯಲ್ಲಿ ಮೈಸೂರು ಪೊಲೀಸರು ಪ್ರಕರಣ ಭೇದಿಸಿದರು.

ಕಿಡ್ನಾಪ್ ಮಾಡಿ ಎಸ್ಕೇಪ್ ಆದ ದೃಶ್ಯಾವಳಿ ಲಭ್ಯವಾಗಿದೆ. ಕಿಡ್ನಾಪ್ ಆದ ಕೆಲವೇ ಗಂಟೆಗಲ್ಲಿ ಅರೋಪಿಗಳನ್ನ  ಪೊಲೀಸರು ಎಡೆಮುರಿಕಟ್ಟಿದರು.ತಡರಾತ್ರಿ ವಿಜಯನಗರದ ಹೆರಿಟೇಜ್ ಕ್ಲಬ್ ಬಳಿ ಲೋಕೇಶ್ ಕಿಡ್ನಾಪ್ ಮಾಡಲಾಗಿತ್ತು.

ವಿಜಯನಗರ ಮೂರನೇ ಹಂತದ ನಿವಾಸಿ ಲೋಕೇಶ್.  ಟಾಟಾ ಸುಮೋದಲ್ಲಿ ಬಂದು ಲೋಕೇಶ್‌ನನ್ನ  5 ಮಂದಿ ಕಿಡ್ನಾಪ್ ಮಾಡಿದರು. ಬಳಿಕ ಲೋಕೇಶ್ ಮೊಬೈಲ್ ನಿಂದ ಪತ್ನಿಗೆ ಕಾಲ್ ಮಾಡಿದರು.  30 ಲಕ್ಷ ಹಣಕ್ಕೆ  ಆರೋಪಿಗಳು ಡಿಮ್ಯಾಂಡ್ ಇಟ್ಟರು.

ಗಾಬರಿಗೊಂಡ ಲೋಕೇಶ್ ಪತ್ನಿಯಿಂದ ವಿಜಯನಗರ ಪೊಲೀಸರಿಗೆ ಮಾಹಿತಿ ನೀಡಿದರು. ತಕ್ಷಣವೇ ಅಲಾರ್ಟ್ ಆದ ಪೊಲೀಸರಿಂದ ಸಿನಿಮೀಯ ಶೈಲಿಯಲ್ಲಿ ಕಾರ್ಯಚರಣೆ ನಡೆಸಲಾಯಿತು. ಮೈಸೂರಿನಿಂದ 50 ಕಿ.ಮೀ. ದೂರದಲ್ಲಿ ಆರೋಪಿಗಳನ್ನ ಬಂಧಿಸಿ, ಅಪಹರಣವಾದ ಲೋಕೇಶ್ ನನ್ನು ವಶಕ್ಕೆ ಪಡೆಯಲಾಗಿದೆ.

ಕಳೆದ ಹದಿನೈದು ದಿನಗಳಿಂದ ಲೋಕೇಶ್ ಚಲನವಲನವನ್ನು  ಆರೋಪಿಗಳು ಫಾಲೋ ಮಾಡ್ತಾ ಇದ್ದರು. ಹೆರಿಟೇಜ್ ಕ್ಲಬ್ ಹೋಗಿ ವಾಪಸ್ ಬರೋ ವೇಳೆ ಕಿಡ್ನಾಪ್ ಮಾಡಲಾಗಿದೆ. ಎಸಿಪಿ ರವಿಪ್ರಸಾದ್, ವಿಜಯನಗರ ಇನ್ಸ್‌ಪೆಕ್ಟರ್ ಸುರೇಶ್ ಕುಮಾರ್, ಸಬ್ ಇನ್ಸ್‌ಪೆಕ್ಟರ್ ಗಳಾದ ಆನಂದ್,‌ ಜಯಕೀರ್ತಿ, ಮೇಟಗಳ್ಳಿ ಠಾಣೆ ಸಬ್ ಇನ್ಸ್‌ಪೆಕ್ಟರ್ ಗೌತಮ್ ಸಿಬ್ಬಂದಿ ಕಾರ್ಯಚರಣೆಯಲ್ಲಿ ಭಾಗಿಯಾದರು. ಅಪಹರಣವಾದ ಕೇವಲ  4 ಗಂಟೆಗಳಲ್ಲಿ ಕಾರ್ಯಚರಣೆ ನಡೆಸಲಾಯಿತು.