ಮೈಸೂರು : ಮೈಸೂರು ನಾಡ ಹಬ್ಬ ದಸರಾ ಮಹೋತ್ಸವ 2025 ರ ದಸರಾ ಗಜಪಡೆಗೆ ತೂಕ ಪರಿಶೀಲನೆ ನಡೆಸಲಾಯಿತು. ಅರಣ್ಯ ಭವನದಿಂದ ಅರಮನೆಯಂಗಳಕ್ಕೆ ಪ್ರವೇಶ ಮಾಡಿದ್ದ ಆನೆಗಳು ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಒಂಬತ್ತು ಆನೆಗಳಿಗೆ ವೇಯ್ಟ್ ಚಕ್ ಮಾಡಲಾಯಿತು.

ನಗರದ ಧನ್ವಂತ್ರಿ ರಸ್ತೆಯಲ್ಲಿರುವ ಸಾಯಿರಾಮ್ ತೂಕ ಮಾಪನ ಕೇಂದ್ರದಲ್ಲಿ ಆನೆಗಳ ತೂಕ ಪರಿಶೀಲನೆ ನಡೆಸಲಾಯಿತು. ತೂಕ ಪರಿಶೀಲನೆ ನಂತರ ಆನೆಗಳಿಗೆ ಪ್ರತಿನಿತ್ಯ ಪೌಷ್ಟಿಕ ಆಹಾರ ಜಂಬೂ ಸವಾರಿ ಮೆರವಣಿಗೆಗಾಗಿ ತಾಲೀಮು ನಡೆಸಲಾಯಿತು.

ಬೆಳಗ್ಗೆ ಸಂಜೆ ಎರಡು ಸಮಯ ಅರಮನೆಯಿಂದ ಬನ್ನಿಮಂಟಪದವರೆಗೆ ತಾಲೀಮು ನಡೆಯಲಿದೆ. ನಗರದ ಸದ್ದುಗದ್ದಲಕ್ಕೆ ವಿಚಲಿತವಾಗದಂತೆ ಆನೆಗಳಿಗೆ ತರಬೇತಿ ನೀಡಲಾಗುತ್ತದೆ.  ಆನೆಗಳ ತೂಕದ ವಿವರ ಅಭಿಮನ್ಯು – 5,360, ಧನಂಜಯ – 5,310, ಕಾವೇರಿ – 3,010, ಲಕ್ಷ್ಮೀ – 3,730, ಭೀಮ – 5,465, ಏಕಲವ್ಯ – 5,305, ಮಹೇಂದ್ರ – 5,120, ಕಂಜನ್ – 4,880,  ಪ್ರಶಾಂತ – 5,110.