Categories: ಮೈಸೂರು

ಮೈಸೂರು: ಟಿಬೆಟ್ ಧರ್ಮಗುರು ಪಂಚೆನ್ ಲಾಮಾ ಬಿಡುಗಡೆಗೆ ಒತ್ತಾಯ

ಮೈಸೂರು: ಟಿಬೆಟ್ ಧರ್ಮಗುರು ಹನ್ನೊಂದನೆ ಪಂಚೆನ್ ಲಾಮಾ ಗೆಂಡುನ್ ಚೋಯ್ಕಿ ಅವರನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಮಧ್ಯಮ ಗತಿಯ ಟಿಬೆಟ್ ಯುವ ಸಂಘಟನೆ ಹಾಗೂ ಧಾರ್ಮಿಕ ಟಿಬೆಟ್ ಮಹಿಳಾ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಬಳಿಕ ಜಿಲ್ಲಾಧಿಕಾರಿ ಕಚೇರಿ ಬಳಿ ಸಮಾವೇಶಗೊಂಡ ಪ್ರತಿಭಟನಾಕಾರರು ಚೀನಾ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು. ಚೀನಾ ಸರ್ಕಾರ ಮೇ.17, 1995ರಲ್ಲಿ ಪಂಚೆನ್ ಲಾಮಾ ಅವರನ್ನು ಅಕ್ರಮವಾಗಿ ಬಂಧಿಸಿದ್ದು, ಅವರು ಅನುಮಾನಾಸ್ಪದವಾಗಿ ಅಸುನೀಗಿದ್ದಾರೆ ಎಂದು ಆರೋಪಿಸಿದರು.

ಟಿಬೆಟ್ ಧರ್ಮಗುರು ದಲಾಯಿಲಾಮ ಅವರು ಗೆಂಡ್ಯುನ್ ಚೋಯ್ಕಿಯವರನ್ನು 11ನೇ ಪಂಚೆನ್ ಲಾಮಾರನ್ನಾಗಿ ಗುರುತಿಸಿದ್ದರು. ಅದಾದ 4 ತಿಂಗಳಲ್ಲಿ ಅವರ 6ನೇ ವಯಸ್ಸಿನಲ್ಲಿ ಕುಟುಂಬ ಸಮೇತ ಗೆಂಡ್ಯುನ್ ಚೋಯ್ಕಿಯವರನ್ನು ಚೀನಾ ಸರ್ಕಾರ ಅಪಹರಣ ಮಾಡಿದೆ. ಅಂದಿನಿಂದ ಇಲ್ಲಿಯವರೆಗೆ ಅವರ ಇರುವಿಕೆ ಬಗ್ಗೆ ಯಾವುದೇ ಮಾಹಿತಿಯನ್ನು ಸರ್ಕಾರ ಕೊಡಲು ಒಪ್ಪುತ್ತಿಲ್ಲ ಎಂದು ಕಿಡಿ ಕಾರಿದರು.

ಪಂಚೆನ್ ಲಾಮಾ ಅವರನ್ನು ಅತ್ಯಂತ ಕಿರಿಯ ವಯಸ್ಸಿಗೆ ರಾಜಕೀಯ ಖೈದಿಯನ್ನಾಗಿ ಮಾಡಲಾಗಿದೆ. ಸಂಯುಕ್ತ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಬಗ್ಗೆ ಮಧ್ಯಸ್ಥಿಕೆ ನಡೆದರೂ ಚೀನಾ ಸರ್ಕಾರ ಪಂಚೆನ್ ಲಾಮಾ ಅವರ ಬಗ್ಗೆ ಯಾವುದೇ ಸುಳಿವು ನೀಡುತ್ತಿಲ್ಲ. ಈ ಅವಧಿಯಲ್ಲಿ ಲಾಮಾ ಅವರು ಧಾರ್ಮಿಕ ಹಾಗೂ ಟಿಬೆಟ್ ಬೌದ್ಧ ಧರ್ಮೀಯ ಶಿಕ್ಷಣದಿಂದ ವಂಚಿತರಾಗಿದ್ದಾರೆ. ೨೮ ರ್ಷಗಳಿಂದ ಅವರು ರಾಜಕೀಯ ಖೈದಿಯಾಗಿ  ಉಳಿದಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಚೀನಾ ಸರ್ಕಾರ ಕೂಡಲೇ ಪಂಚೆನ್ ಲಾಮಾ ಅವರ ಇರುವಿಕೆ ಹಾಗೂ ಧಾರ್ಮಿಕ ಶಿಕ್ಷಣದ ಬಗ್ಗೆ ಖಾತ್ರಿ ಪಡಿಸಬೇಕು. ಅವರನ್ನು ಕೂಡಲೇ ಬಿಡುಗಡೆಗೊಳಿಸಿ ಸಹಜ ಜೀವನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ತೆಂಜಿನ್ ಡೋಲ್ಮಾ, ಸಂಘಟನೆಯ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.

Sushma K

Recent Posts

ಬಾಕ್ಸ್​ ಆಫೀಸ್​ನಲ್ಲಿ ಇತಿಹಾಸ ಸೃಷ್ಟಿಸಿದ್ದ ‘ಬಾಹುಬಲಿ 1’ ಮತ್ತು ‘ಬಾಹುಬಲಿ 2’ ಸಿನಿಮಾಗಳ ಆ್ಯನಿಮೇಟೆಡ್​ ಸೀರಿಸ್​ ಬರುತ್ತಿದೆ. ಇದಕ್ಕೆ ‘ಬಾಹುಬಲಿ:…

2 mins ago

ಚುನಾವಣೆಯ ಪ್ರಚಾರಕ್ಕಾಗಿ ಅರವಿಂದ್ ಕೇಜ್ರಿವಾಲ್ ಗೆ ಮಧ್ಯಂತರ ಜಾಮೀನು ಸಾಧ್ಯತೆ

ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್  ಅವರಿಗೆ ಲೋಕಸಭಾ ಚುನಾವಣೆಯ  ಪ್ರಚಾರಕ್ಕಾಗಿ ಮಧ್ಯಂತರ ಜಾಮೀನು ನೀಡುವ ಸಾಧ್ಯತೆಯನ್ನು ಪರಿಶೀಲಿಸುವುದಾಗಿ ಸುಪ್ರೀಂ…

33 mins ago

ಹಜ್ ಯಾತ್ರಾರ್ಥಿಗಳಿಗೆ ಉಚಿತ ಲಸಿಕಾ ಕಾರ್ಯಕ್ರಮ

ಪ್ರಸಕ್ತ ಸಾಲಿನಲ್ಲಿ ಹಜ್ ಯಾತ್ರೆಗೆ ತೆರಳುವ ಯಾತ್ರಾರ್ಥಿಗಳಿಗೆ ಜಿಲ್ಲಾ ವಕ್ಫ್ ಮಂಡಳಿ, ಜಿಲ್ಲಾಸ್ಪತ್ರೆ ಹಾಗೂ ತಾಜಿರಾನ್ ಮಸೀದಿ ಸಹಯೋಗದಲ್ಲಿ ನಗರದ…

40 mins ago

ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೆಂದು ಮಹಿಳೆಯರಿಂದ ವಿಶೇಷ ಪೂಜೆ, ಪ್ರಾರ್ಥನೆ

ದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದು ಹೆಮ್ಮೆಯ ನಾಯಕ ನರೇಂದ್ರ ಮೋದಿಯವರು ಮತ್ತೊಮ್ಮೆ ದೇಶದ ಪ್ರಧಾನಿಯಾಗಲಿ ಎಂದು ಪ್ರಾರ್ಥಿಸಿ ವಿಜಯಪುರ…

52 mins ago

ಅವರಿಗೆ ನೀವು ಆತ್ಮನಿರ್ಭರರಾಗಿರುವುದು ಇಷ್ಟವಿಲ್ಲ: ಪ್ರಿಯಾಂಕಾ ಗಾಂಧಿ

ಬಿಜೆಪಿ ನಿಮ್ಮನ್ನು ೫ಕೆಜಿ ರೇಷನ್ನಿನ ಮೇಲೆ ಅವಲಂಬಿತರನ್ನಾಗಿಸಲು ನೋಡುತ್ತಿದೆ. ನೀವು ಆತ್ಮನಿರ್ಭರರಾಗುವುದನ್ನು ಅವರು ಸಹಿಸುವುದಿಲ್ಲ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ…

53 mins ago

ಚಾಮರಾಜನಗರ: ಸಿಡಿಲು ಬಡಿದು ಮೂರು ಜಾನುವಾರುಗಳು ಸಾವು

ಸಿಡಿಲು ಬಡಿದು ಮೂರು ಜಾನುವಾರುಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹನೂರು ತಾಲ್ಲೂಕಿನ ಚೆನ್ನೂರು ಗ್ರಾಮದಲ್ಲಿ ನಡೆದಿದೆ.

1 hour ago