ಮೈಸೂರು : ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಮುಡಾ) ಅಕ್ರಮ ನಿವೇಶನ ಹಂಚಿಕೆ ಹಗರಣದಲ್ಲಿ ಇಡಿ ಕಾರ್ಯಾಚರಣೆ ಮುಂದುವರಿದಿದೆ. ೧೬೦ ನಿವೇಶನ ಇಡಿ ವಶಕ್ಕೆ ಪಡೆಯಲಾಗಿದೆ.
ಮೈಸೂರಿನ ಆಂದೋಲನ ಸರ್ಕಲ್, ದಟ್ಟಗಹಳ್ಳಿ, ಆರ್.ಟಿ ನಗರ, ಕುವೆಂಪುನಗರ, ವಿಜಯನಗರ, ದೇವನೂರು ಬಡಾವಣೆಯಲ್ಲಿ ನೀಡಿರುವ ಸೈಟ್ಗಳು. ಬೇನಾಮಿ ಸೈಟ್‌ಗಳನ್ನ ಇಡಿ ವಶಕ್ಕೆ ಪಡೆದಿದೆ.
ಒಬ್ಬ ವ್ಯಕ್ತಿಗೆ ೪೧ ಬೇನಾಮಿ ಸೈಟ್, ಹಲವರಿಗೆ ೧೦ ರಿಂದ ೨೦ ಸೈಟ್ ಬೇನಾಮಿ ಸೈಟ್, ಒಟ್ಟು ೧೬೦ ಸೈಟ್‌ಗಳನ್ನ ಇಡಿ ಮುಟ್ಟುಗೋಲು ಹಾಕಿದೆ. ಕೋಟ್ಯಾಂತರ ರೂ ಬೆಲೆ ಬಾಳುವ ಸೈಟ್ ನೀಡಿ ಅಧಿಕಾರಿಗಳು ಅಕ್ರಮ ಎಸಗಿದ್ದಾರೆ. ಇಡಿ ಕಾರ್ಯಾಚರಣೆಯಲ್ಲಿ ಮುಡಾದ ಮತ್ತಷ್ಟು ಅಕ್ರಮ ಬಯಲಾಗಿದೆ.

