ಮೈಸೂರು : ಪ್ರತಿ ವರ್ಷದಂತೆ ಈ ವರ್ಷದಂತೆ ಈ ವರ್ಷವೂ ಚಾಮುಂಡಿ ಬೆಟ್ಟ ಹತ್ತಿ ತಾಯಿಯ ದರ್ಶನ ಪಡೆದು ಬಳಿಕ ಮಾವುತ, ಕಾವಾಡಿಗಳಿಗೆ ಉಪಹಾರ ಕೂಟ ವ್ಯವಸ್ಥೆ ಮಾಡಿದ್ದೇವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದರು.
ಮಾವುತ, ಕಾವಾಡಿಗಳು ನಾಡಿಗೆ ಬರುವ ಕಾಲ. ದಸರಾ ಯಶಸ್ವಿಗೆ ಅವರ ಪಾತ್ರ ದೊಡ್ಡದು. ಹಿಂದೆ ಬಿಎಸ್ವೈ ಸರ್ಕಾರದ ಸಂದರ್ಭದಲ್ಲಿ ಅವರನ್ನ ಸರ್ಕಾರಿ ನೌಕರರಾಗಿ ಪರಿಗಣಿಸಲಾಗಿತ್ತು. ಬಳಿಕ ಅವರ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಕೆಲಸ ಆಗಿತ್ತು. ಇದು ನಮಗೆ ಖುಷಿ ತಂದಿದೆ. ಮೈಸೂರು ದಸರಾ ನಮ್ಮೆಲ್ಲರ ಹಬ್ಬ. ಈ ಹಬ್ಬ ಎಲ್ಲರಿಗೂ ಆರೋಗ್ಯ, ಸಂಸತ ಕೊಡಲಿ. ಮಾವುತರಿಗೆ ವೇತನದಲ್ಲಿ ವ್ಯತ್ಯಾಸ ಇದ್ರೆ ಅದನ್ನ ಸರಿಪಡಿಸುವ ಕೆಲಸ ಸರ್ಕಾರ ಮಾಡಬೇಕು ಎಂದರು.
ಜಿಎಸ್ಟಿ ಕಡಿತದ ಬಗ್ಗೆ ಎಲ್ಲಾ ಕಡೆ ಎಕ್ಸ್ ಪೋ ಮಾಡ್ತಿದ್ದೇವೆ. ಜಿಎಸ್ಟಿ ಕಡಿತದ ಬಳಿಕ ಖರೀದಿ ಪ್ರಮಾಣ ಹೆಚ್ಚಾಗಿದೆ. ಬೆಲೆ ಕಡಿಮೆ ಆದ ಪರಿಣಾಮ ಜನ ಹೆಚ್ಚು ವಸ್ತುಗಳ ಖರೀದಿ ಮಾಡ್ತಿದ್ದಾರೆ. ಅರಮನೆ ಆವರಣದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದರು.

