ಮೈಸೂರು : ದಸರಾ ಮಹೋತ್ಸವ-2026 ಕ್ಕೆ ಆನೆಗಳ ಮೊದಲ ತಂಡ ಮೈಸೂರಿಗೆ ಎಂಟ್ರಿ ಕೊಟ್ಟಿದೆ. ಗಜಪಯಣದ ಮೂಲಕ ಗಜಪಡೆ ಕಾಡಿನಿಂದ ನಾಡಿಗೆ ಬಂದಿದೆ.
ಲಾರಿಗಳ ಮೂಲಕ ಮೈಸೂರಿನ ಅರಣ್ಯ ಭವನದ ಆವರಣದಲ್ಲಿ ಆನೆಗಳು ಬಂದಿಳಿದಿದೆ. ನಿನ್ನೆ ಮೊದಲ ತಂಡದಲ್ಲಿ ಒಟ್ಟು 9 ಆನೆಗಳು ಮೈಸೂರಿಗೆ ಆಗಮಿಸಿದೆ. ಧನಂಜಯ, ಮಹೇಂದ್ರ, ಏಕಲವ್ಯ, ಪ್ರಶಾಂತ, ಗೋಪಿ, ಶ್ರೀರಾಮ, ಶ್ರೀಕಂಠ, ಲಕ್ಷ್ಮಿ, ಕಾವೇರಿ ಆನೆಗಳು ಮೊದಲ ತಂಡದಲ್ಲಿ ಮೈಸೂರಿಗೆ ಆಗಮಿಸಿದೆ.
ಪೊಲೀಸರ ಭದ್ರತೆಯೊಂದಿಗೆ ಆನೆಗಳು ಆಗಮಿಸಿದೆ. ವೀರನಹೊಸಹಳ್ಳಿಯಲ್ಲಿ ನಡೆದ ಗಜಪಯಣ ಸಮಾರಂಭದ ಬಳಿಕ ಮೈಸೂರಿಗೆ ಗಜಪಡೆ ಪ್ರಯಾಣ ಬೆಳೆಸಿದೆ.

