ಮೈಸೂರು : ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2025ರ ಗಜಪಡೆ, ಅಶ್ವಾರೋಹಿ ದಳಕ್ಕೆ ಇಂದು ಎರಡನೇ ಹಂತದ ಕುಶಾಲತೋಪು ಸಿಡಿಸುವ ತಾಲೀಮು ನಡೆಯಿತು.
ದಸರಾ ವಸ್ತು ಪ್ರದರ್ಶನ ಮೈದಾನದ ವಾಹನಗಳ ನಿಲುಗಡೆ ಸ್ಥಳದಲ್ಲಿ ತಾಲೀಮು ನಡೆದಿದ್ದು, ಸಿಡಿಮದ್ದು ತಾಲೀಮಿನಲ್ಲಿ ಎಲ್ಲಾ 14 ಆನೆಗಳು, ಆಶ್ವರೋಹಿದಳ ಭಾಗಿಯಾಗಿತ್ತು. ಸಿಡಿಮದ್ದು ತಾಲೀಮು ಫೈರಿಂಗ್ ಕಾರ್ಯದಲ್ಲಿ ಸುಮಾರು 30 ಕ್ಕೂ ಹೆಚ್ಚು ಸಿಎಆರ್ ಪೊಲೀಸರು ಭಾಗಿಯಾಗಿದ್ದರು.
ಸಿಡಿಮದ್ದಿನ ಸದ್ದಿಗೆ ಗಜಪಡೆ ಹಾಗೂ ಅಶ್ವಾರೋಹಿದಳ ಬೆದರಲಿಲ್ಲ. ಮೊದಲ ಹಂತದ ತಾಲೀಮಿನಲ್ಲಿ ವಿಚಲಿತಗೊಂಡಿದ್ದ ಶ್ರೀಕಂಠ ಹೇಮಾವತಿ ಆನೆಗಳು. ಈ ಬಾರಿ ಸಿಡಿಮದ್ದಿಗೆ ಹೆದರದೆ ನಿಂತ ಶ್ರೀಕಂಠ, ಹೇಮಾವತಿ ಆನೆ. ಸಿಡಿಮದ್ದು ತಾಲೀಮಿನಲ್ಲಿ ಕಾರ್ಯಕ್ರಮದಲ್ಲಿ ಡಿಸಿಎಫ್ ಪ್ರಭಗೌಡ ಸೇರಿದಂತೆ ಪೊಲೀಸ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಭಾಗಿಯಾಗಿದ್ದರು.

