ಮೈಸೂರು : = ದಸರಾಗೆ ಎರಡು ಹಂತದ ಬಂದೋಬಸ್ತ್ ಮಾಡಲು ತೀರ್ಮಾನ ಮಾಡಿದ್ದೇವೆ ಮೊದಲು 22ನೇ ತಾರೀಕಿನಿಂದ 29ನೇ ತಾರೀಖನ ತನಕ ಮೊದಲ ಹಂತದ ಬಂದೋಬಸ್ತ್ ಇರಲಿದೆ.
30ರಿಂದ ಆ.2 ರ ತನಕ ಎರಡನೇ ಹಂತದ ಬಂದೋಬಸ್ತ್ ಇರಲಿದ್ದು, ದಸರಾದಲ್ಲಿ 5 ಎಸ್ಪಿ, 35 ಡಿವೈಎಸ್ಪಿ ಪೊಲೀಸರು ಕೆಲಸ ಮಾಡುತ್ತಾರೆ. 35 ಕೆ.ಎಸ್.ಆರ್. ಪಿ ತುಕಡಿಗಳು, ಕಾರ್ ಡಾರ್ 15 ಸಿಬ್ಬಂದಿಯ ತಂಡ ಇರಲಿದೆ.
ಎ.ಎಸ್.ಸಿ ತಂಡ 29, 1 ಗರುಡ ಫೋರ್ಸ್, 1200 ಹೋಮ್ ಗಾರ್ಡ್, ಸೇರಿ ಒಟ್ಟು 6384 ಮಂದಿ ಪೊಲೀಸರು ಬಿಗಿ ಬಂದೋಬಸ್ತ್ ನಲ್ಲಿ ಕಾರ್ಯ ನಿರ್ವಹಿಸುತ್ತಾರೆ. 26 ಆಂಬುಲೆನ್ಸ್, 32 ಅಗ್ನಿಶಾಮಕ ದಳವನ್ನು ನಿಯೋಜನೆ ಮಾಡಿದ್ದೇವೆ. ನಗರದ ಪ್ರಮುಖ ಜಂಕ್ಷನ್ ಗಳಲ್ಲಿ ಪಬ್ಲಿಕ್ ಅಡ್ರೆಸ್ ಮಾಡಲು 43 ಮಂದಿ ಪೊಲೀಸ್ ಸಿಬ್ಬಂಧಿಗಳು ಕಾರ್ಯ ನಿರ್ವಹಣೆ ಮಾಡ್ತಾರೆ.
ನಗರದ ಸುತ್ತಲೂ ಸಿಸಿ ಟಿವಿ, ಡ್ರೋನ್ ಕಣ್ಗಾವಲು ಇಡಲಾಗಿದೆ. ರೈಲ್ವೆ ನಿಲ್ದಾಣ ಬಸ್ ನಿಲ್ದಾಣದ ಬಳಿ ಕಟ್ಟೆಚ್ಚರ ವಹಿಸಲಾಗಿದೆ. ಸುಳ್ಳು ಸುದ್ದಿ ಹರಡಿಸುವವರ ಮೇಲು ಸೈಬರ್ ತಂಡ ನಿಗಾವಹಿಸಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಹೇಳಿಕೆ ನೀಡಿದರು.

