ಮೈಸೂರು : ಜಮ್ಮು ಕಾಶ್ಮೀರ ಉಗ್ರರ ದಾಳಿಗೆ ಖಂಡನೆ ವ್ಯಕ್ತವಾಗಿದ್ದು, ಕೃಷ್ಣರಾಜ ಯುವ ಬಳಗದಿಂದ ಕಪ್ಪು ಪಟ್ಟಿ ಧರಿಸಿ ಮೇಣದಬತ್ತಿ ಬೆಳಗಿಸಿ ಪ್ರತಿಭಟನೆ ನಡೆಸಲಾಯಿತು.
ಮೃತರ ಆತ್ಮಕ್ಕೆ ಶಾಂತಿ ಕೋರಿ ಮೇಣದ ಬತ್ತಿ ಬೆಳಗಿ ಮೌನಾಚರಣೆ ಮಾಡಲಾಯಿತು. ಮೈಸೂರಿನ ಚಾಮುಂಡಿಪುರಂ ವೃತ್ತದಲ್ಲಿ ಶೋಕಾಚಾರಣೆ ಮಾಡಲಾಯಿತು. ಪ್ರತಿಭಟನೆಯಲ್ಲಿ ಮೈಸೂರಿನ ನಾಗರೀಕರು ಭಾಗಿಯಾಗಿದ್ದರು.

