ಮೈಸೂರು: ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ ಹೆಸರು ರದ್ದಾಗಿದೆ. ಇನ್ಮುಂದೆ ಎಂ.ಡಿ.ಎ.ಆಗಿ ಕರೆಯಲ್ಪಡುತ್ತದೆ. ಸರ್ಕಾರದಿಂದ ಮಹತ್ತರದ ಆದೇಶವಾಗಿದ್ದು ಇಂದಿನಿಂದಲೇ ಆದೇಶ ಜಾರಿಯಾಗಿದೆ.
ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ ಇನ್ಮುಂದೆ ಮೈಸೂರು ಅಭಿವೃದ್ದಿ ಪ್ರಾಧಿಕಾರವಾಗಿ ಹೆಸರು ಬಳಕೆಯಾಗಲಿದೆ. ಸರ್ಕಾರದ ಅಧೀನ ಕಾರ್ಯದರ್ಶಿ ಅಭಿವೃದ್ದಿ ಪ್ರಾಧಿಕಾರ ಮತ್ತು ನಗರ ಯೋಜನಾ ಸೇವೆ, ನಗರಾಭಿವೃದ್ದಿ ಇಲಾಖೆ ಕೆ.ಲತಾ ರವರು ಆದೇಶ ಹೊರಡಿಸಿದ್ದಾರೆ.

