ಮೈಸೂರು: ಕೇಂದ್ರ ಸರ್ಕಾರದ ಜನೌಷಧಿ ದಿನಾಚರಣೆಗ ಹಿನ್ನಲೆ ಮೈಸೂರು ನಗರದ ಕೆಆರ್ಎಸ್ ರಸ್ತೆಯಲ್ಲಿರುವ ಜಿಲ್ಲಾಸ್ಪತ್ರೆಗೆ ಸಂಸದ ಯದುವೀರ್ ಭೇಟಿ ನೀಡಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಜನೌಷಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಯದುವೀರ್ ಭಾಗಿಯಾಗಿದ್ದಾರೆ. ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದಾರೆ.
ದೇಶದ ಯಶಸ್ವಿ ಯೋಜನೆಗಳಲ್ಲಿ ಒಂದಾದ ಜನೌಷದಿ ಕೇಂದ್ರಗಳ ಮೂಲಕ ರೋಗಿಗಳಿಗೆ ಕಡಿಮೆ ದರದಲ್ಲಿ ಔಷಧಿಗಳ ಒದಗಿಸಲು 2014 ರಲ್ಲಿ ಜಾರಿಗೆ ತಂದ ಮಹತ್ತರ ಯೋಜನೆ. ಜನೌಷಧಿ ಕೇಂದ್ರಗಳಲ್ಲಿ ಬಡವರಿಗೆ ಶೇ 50 ರಿಂದ 80 ರಷ್ಟು ರಿಯಾಯಿತಿ ದರದಲ್ಲಿ ಔಷಧಿಗಳ ಪೂರೈಕೆ ಎಂದರು.
ಈ ಯೋಜನೆಯಿಂದ ದೇಶಾದ್ಯಂತ ಸುಮಾರು 30 ಸಾವಿರ ಕೋಟಿ ಉಳಿತಾಯವಾಗಿದೆ ಇದೊಂದು ಮಹತ್ತರವಾದ ಯೋಜನೆ ಎಂದು ಕೇಂದ್ರದ ಸರ್ಕಾರದ ಯೋಜನೆ ಪ್ರಶಂಸೆಯನ್ನು ಯದುವೀರ್ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಲ್ ನಾಗೇಂದ್ರ, ಡಿಎಚ್ಒ ಕುಮಾರಸ್ವಾಮಿ ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ಭಾಗಿಯಾಗಿದ್ದಾರೆ.

