ತಿ.ನರಸೀಪುರ: ಸೋಸಲೆ, ಕೈಯಂಬಳ್ಳಿ, ಹಲವಾರ, ಕೊಳತೂರು, ದೊಡ್ಡ ಬಾಗಿಲು, ಮುರಾರ್ಜಿ ವಸತಿ ಶಾಲೆಯ ಒಳ ಕ್ರೀಡಾಂಗಣ ಸೇರಿದಂತೆ 12 ಕೋಟಿ ರೂಗಳ ವೆಚ್ಚದ ಎಸ್. ಸಿ.ಪಿ ರಸ್ತೆ ಮತ್ತು ಚರಂಡಿ ಹಾಗೂ ಜಲಜೀವನ್ ಮೆಷೀನ್ ಕುಡಿಯುವ ನೀರಿನ ಯೋಜನೆಯ ಅಭಿವೃದ್ಧಿ ಕಾಮಗಾರಿಗೆ ಸಂಸದ ಸುನಿಲ್ ಬೋಸ್ ಶಂಕುಸ್ಥಾಪನೆ ಮಾಡಿದರು.

ಅಭಿವೃದ್ಧಿ ಕಾಮಗಾರಿ ಕುರಿತು ಮಾತನಾಡಿದ ಅವರು ಟಿ ನರಸೀಪುರ ಕ್ಷೇತ್ರದ ಜನತೆಯ ಆಶೀರ್ವಾದದಿಂದ ನಮ್ಮ ತಂದೆ ಸಚಿವ ಮಹದೇವಪ್ಪನವರು ಮೂರನೇ ಬಾರಿಗೆ ಮಂತ್ರಿಯಾಗಿದ್ದಾರೆ ಕ್ಷೇತ್ರದ ಜನತೆಯ ಪ್ರೀತಿ ವಿಶ್ವಾಸಕ್ಕೆ ನಾವು ಸದಾ ಚಿರಋಣಿ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಂಚ ಗ್ಯಾರಂಟಿಯ ಯೋಜನೆ ಜೊತೆಗೆ ಅಭಿವೃದ್ಧಿ ಕಾಮಗಾರಿಗೋ ಅನುದಾನ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಅನುದಾನ ಬರಲಿದ್ದು ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ ಎಂದು ಸಂಸದ ಸುನಿಲ್ ಬೋಸ್ ಹೇಳಿದರು.

ಹಲವಾರ ಗ್ರಾಮದಲ್ಲಿ ತಾಲೂಕು ವೀರಶೈವ ಮಹಾಸಭಾ ಕಾರ್ಯದರ್ಶಿ ಹಲವಾರ ಪರಮೇಶ್ ಪಟೇಲ್ ಸುನಿಲ್ ಬೋಸರನ್ನು ಸನ್ಮಾನಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಶಿವಮಲ್ಲಪ್ಪ, ಲಕ್ಷ್ಮಿ ನಾರಾಯಣ್, ಎ.ಇ.ಇ ರತೇಶ್ ಇದ್ದರು.