ತಿ. ನರಸೀಪುರ: ಬನ್ನೂರು ಸಂತೆಮಾಳ ಪದವಿ ಪೂರ್ವ ಕಾಲೇಜು ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ 147.30. ಲಕ್ಷ ರೂ. ವೆಚ್ಚದ ಕಾಮಗಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗೆ ಸಂಸದ ಸುನಿಲ್ ಬೋಸ್ ಗುದ್ದಲಿ ಪೂಜೆ ನೆರವೇರಿಸಿದರು.
ಮಾತನಾಡಿ ಈ ಕಾಲೇಜು ಮೈಸೂರು ಜಿಲ್ಲೆಗೆ ಒಂದು ಮಾದರಿಯಾಗಿದೆ. ಈ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು ಎಸ್ಸಿ ಎಸ್ಟಿ ಗಳು ಮಧ್ಯಮ ವರ್ಗದ ಮಕ್ಕಳು ಹೆಚ್ಚು ವಿದ್ಯಾ ವಿದ್ಯಾಭ್ಯಾಸ ಮಾಡುತ್ತಿದ್ದು ಈ ಶಾಲೆಯಲ್ಲಿ ಸುಮಾರು ಒಂದು 1300ಕ್ಕೂ ಹೆಚ್ಚು ಮಕ್ಕಳ ವಿದ್ಯಾಭ್ಯಾಸ ಮಾಡುತ್ತಿದ್ದು. ಇಲ್ಲಿ ವಿದ್ಯಾಭ್ಯಾಸ ಮಾಡುವ ಹೆಚ್ಚು ಮಕ್ಕಳು ಉನ್ನತ ಉನ್ನತ ಶ್ರೇಣಿಯಲ್ಲಿ ಉತ್ತೀರಣರಾಗುತಿದ್ದಾರೆ ಎಂದರು.
ಈ ಕಾಲೇಜಿಗೆ ಕೇವಲ ನಮ್ಮ ತಾಲೂಕಿನ ವಿದ್ಯಾರ್ಥಿಗಳ ಅಲ್ಲದೆ ಬೇರೆ ಜಿಲ್ಲೆ ಮಕ್ಕಳು ಸಹ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಆದ್ದರಿಂದ ಈ ಕಾಲೇಜಿಗೆ147 ಲಕ್ಷ ರೂ. ಅನುದಾನದ ಗುದ್ದಲಿ ಪೂಜೆ ನೆರವೇರಿಸಿದ್ದೇನೆ.
ಕಾಲೇಜಿಗೆ ಕಾಂಪೌಂಡ್ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ ಅದು ಸಹ ಕೆಲವು ದಿನಗಳಲ್ಲಿ ಕಾಮಗಾರಿ ನೆರವೇರಲಿದೆ. ಆದರಿಂದ ಮಕ್ಕಳು ಇದರ ಸದುಪಯೋಗ ಪಡೆದುಕೊಂಡು ಇನ್ನು ಮಟ್ಟದಲ್ಲಿ ಉನ್ನತಿ ಶ್ರೇಣಿಯಲ್ಲಿ ಪಾಸ್ ಆಗಬೇಕು ಮತ್ತು ಯಾರೊಬ್ಬರು ಶಿಕ್ಷಣದಿಂದ ವಂಚಿತರಾಗಬಾರದು ಶಿಕ್ಷಣದಿಂದ ಎಲ್ಲವನ್ನೂ ಪಡೆಯಲು ಸಾಧ್ಯ ಎಂದು ಹೇಳಿದರು.

