ಮೈಸೂರು: ಆಗಸ್ಟ್ 1 ರಂದು ಮೈಸೂರಿಗೆ ಮೋದಿ ಆಗಮನ ಹಿನ್ನಲೆ ರಾಮಕೃಷ್ಣ ಆಶ್ರಮದ ಶಾಲೆಯಲ್ಲಿ ಸಿದ್ಧತೆ ಬರದಿಂದ ಸಾಗುತ್ತಿದೆ. ವಿವೇಕ ಸ್ಮಾರಕ ಉದ್ಘಾಟನೆಗೆ ನರೇಂದ್ರ ಮೋದಿ ಬರುತ್ತಿದ್ದಾರೆ.

ನಾರಾಯಣಶಾಸ್ತ್ರಿ ತಲೆ ಎತ್ತಿರುವ ನೂತನ ವಿವೇಕ ಸ್ಮಾರಕವಾಗಿದೆ. ಪ್ರಧಾನಿ ಮೋದಿ ಸ್ವಾಗತಕ್ಕೆ ಆಶ್ರಮದ ಸಿಬ್ಬಂಧಿಗಳು ಸಿದ್ಧತೆ ನಡೆಸುತ್ತಿದ್ದಾರೆ. 6 ಸಾವಿರ ಜನರು ಕುಳಿತುಕೊಳ್ಳುವಂತ ವೇದಿಕೆ ನಿರ್ಮಾಣವಾಗಿದೆ.

ಜರ್ಮನ್ ಟೆಂಟ್ ಬಳಸಿ ವೇದಿಕೆ ನಿರ್ಮಾಣ ಮಾಡಲಾಗಿದೆ. 30 ನಿಮಿಷಗಳ ಕಾಲ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ. ಮೋದಿ ಸಂಚರಿಸುವ ಮಾರ್ಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಅಂತಿಮ ಹಂತದ ಸಿದ್ಧತೆಯಲ್ಲಿ ರಾಮಕೃಷ್ಣ ಆಶ್ರಮದ ಸಿಬ್ಬಂಧಿಗಳು ತೊಡಗಿದ್ದಾರೆ.