ಮೈಸೂರು: ಮೃಗಾಲಯದಲ್ಲಿ ನೌಕರರ ಖಾಯಂಮಾತಿಗಾಗಿ ಶಾಸಕ ಟಿ ಎಸ್ ಶ್ರೀವತ್ಸ ಅಧಿವೇಶನದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ್ದಾರೆ.

ಮೈಸೂರು ಚಾಮರಾಜೇಂದ್ರ  ಮೃಗಾಲಯದಲ್ಲಿ 356 ಮಂದಿ ನೌಕರರಿದ್ದು ಅದರಲ್ಲಿ 9ಮಂದಿ ಮಾತ್ರ ಖಾಯಂ ನೌಕರರು ಅಧಿಕಾರಿಗಳಿದ್ದಾರೆ, ಮೃಗಾಲಯದಲ್ಲಿ ಜೀವವನ್ನೇ ಪಣಕಿಟ್ಟು ದುಡಿಯುವ ನೌಕರರು ಕಳೆದ 11ವರ್ಷಗಳಿಂದ ಶ್ರಮಿಸುತ್ತಿದ್ದಾರೆ.

18 ಮಂದಿ ಅನುಕಂಪ ಆಧಾರದ ಮೇರೆಗೆ ದುಡಿಯುತ್ತಿದ್ದು ಒಳಗುತ್ತಿಗೆಯವರಿಗೆ ಮಾಸಿಕ 24 ಸಾವಿರ ಸಂಬಳ ಮತ್ತು ಹೊರಗುತ್ತಿಗೆ ಆಧಾರದಲ್ಲಿ ಕೆಲಸಗಾರರಿಗೆ ಮಾಸಿಕ 14ಸಾವಿರ  ನಿಗದಿಪಡಿಸಿದ್ದು, ಮೃಗಾಲಯದ ಕಾರ್ಮಿಕ ಜೀವನೋಪಾಯದ ಆರ್ಥಿಕ ಭದ್ರತೆಗಾಗಿ ಕೆಲಸ‌ಮಾಡುತ್ತಿರುವ ಎಲ್ಲರನ್ನು ಖಾಯಂಗೊಳಿಸಬೇಕೆಂದು ಮತ್ತು ಸಿಸಿಎಫ್ ಅಧಿಕಾರಿಯನ್ನಾಗಿ ಗುಲ್ಬರ್ಗಾ ವಲಯಕ್ಕೆ ಸಂಬಂಧ ಪಟ್ಟವರಿದ್ದು ಸ್ಥಳೀಯ ಮೈಸೂರು ವಿಭಾಗದವರನ್ನೇ ನೇಮಕ ಮಾಡಲು  ಕ್ರಮವನ್ನ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ರವರು ಮೈಸೂರು ಚಾಮರಾಜೇಂದ್ರ ಮೃಗಾಲಯದಲ್ಲಿ  139 ಮಂದಿಯನ್ನ ಕೆಲಸಗಳಿಗೆ ಭರ್ತಿ ಮಾಡಲೂ ಮಂಜೂರಾತಿಯಿದ್ದು ಆರ್ಥಿಕ ಇಲಾಖೆಗೆ ಪ್ರಸ್ತಾವನೆಯನ್ನ ಸಲ್ಲಿಸಲಾಗಿದೆ.

ನ್ಯಾಯಾಲಯದಲ್ಲಿ ಕೆಲವು ಪ್ರಕರಣಗಳ ದಾವೆಗಳು ಮತ್ತು ಆಂತರಿಕ  ಒಳಮೀಸಲಾತಿ ವಿಷಯವಾಗಿ ವಿಳಂಬವಾಗಿರುವ ಕಾರಣ  ನೇಮಕಾತಿಯಾಗಿಲ್ಲ, ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ನೇರನೇಮಕಾತಿಗೆ ಕ್ರಮತೆಗೆದುಕೊಳ್ಳಲಾಗುವುದು ಎಂದು ಉತ್ತರಿಸಿದರು.