ಮೈಸೂರು: ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲ್ಲೂಕು ಸಮಿತಿ ವತಿಯಿಂದ ಹುಲ್ಲಹಳ್ಳಿ ಗ್ರಾಮದಲ್ಲಿ ಹೋಬಳಿ ಮಟ್ಟದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಕುಂದುಕೊರತೆ ಸಭೆಯನ್ನು ಶಾಸಕ ದರ್ಶನ್ ಧ್ರುವನಾರಾಯಣ್ ನಡೆಸಿದರು.
ಕಾರ್ಯಕ್ರಮವನ್ನಕ ಉದ್ಘಾಟಿಸಿ ಮಾತನಾಡಿದ ಶಾಸಕರು, ಐದು ಗ್ಯಾರಂಟಿಗಳು ರಾಜ್ಯದ ಜನತೆಗೆ ನೇರವಾಗಿ ಲಾಭನೀಡುವ ಮೂಲಕ ಸಾಮಾಜಿಕ ಸಮಾನತೆ ಮತ್ತು ಆರ್ಥಿಕ ಅಭಿವೃದ್ಧಿ ಮತ್ತು ಮಹಿಳಾ ಸಬಲೀಕರಣವನ್ನು ಉತ್ತೇಜಿಸಲು ಉದ್ದೇಶಿತವಾಗಿದ್ದು ಈ ಯೋಜನೆಯು ರಾಜ್ಯದ್ಯಂತ ಯಶಸ್ವಿ ಯಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಗ್ಯಾರಂಟಿ ಸಮಿತಿಯ ತಾಲ್ಲೂಕು ಅದ್ಯಕ್ಷ ಕೆ.ಮಾರುತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಕಂಠನಾಯಕ , ಗ್ರಾ.ಪಂ ಉಪಾದ್ಯಕ್ಷ ಲೋಕೇಶ್, ಗ್ರಾ ಪಂ ಸದಸ್ಯ ಅನ್ಸರ್ ಆಹಮದ, ತಾಪಂ ಜೆರಾಲ್ಡ್ ರಾಜೇಶ್, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಭವ್ಯಾ ಶ್ರೀ, ಮಂಜುಳಾ ಹಾಜರಿದ್ದರು.

