ನಂಜನಗೂಡು: ನಂಜನಗೂಡು ನಗರದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಇಂದು ಮಂಗಳವಾರ ಸಂಜೆ 6 ಗಂಟೆಯ ಸಮಯದಲ್ಲಿ ಮೀನುಗಾರಿಕೆ ಇಲಾಖೆ ವತಿಯಿಂದ 2024 – 25 ನೇ ಸಾಲಿನ ಮೀನುಗಾರರಿಗೆ ಸಲಕರಣೆ ಕಿಟ್ ಗಳನ್ನು ಶಾಸಕ ದರ್ಶನ್ ಧ್ರುವನಾರಾಯಣ್ ವಿತರಿಸಿದರು.

ಬಳಿಕ ಮಾತನಾಡಿದ ಅವರು, ರಾಜ್ಯ ವಲಯ ಯೋಜನೆಯಡಿ 16 ಮಂದಿ ಮೀನುಗಾರರಿಗೆ ತಲಾ 10 ಸಾವಿರರೂಗಳ ಸಹಾಯ ಧನದಡಿ ನೀಡುವ ಬಲೆ ಪರಿಕರ ಗಳಿದ್ದ ಕಿಟ್ ವಿತರಿಸಿದರು. ನದಿ ಮತ್ತು ಕೆರೆಗಳಲ್ಲಿ ಮೀನು ಹಿಡಿಯಲು ಸಹಾಯ ಧನದ ಫೈಬರ್ ಗ್ಲಾಸ್ ಹರಿಗೋಲು ಹಾಗೂ ಆರು ಮೀನು ಹಿಡುವಳಿ ಮತ್ತು ಮಾರಾಟದ ಸಲಕರಣೆ ಕ್ರೇಟ್ ಹಾಗೂ ಕಿಟ್ ಗಳನ್ನು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜೆರಾಲ್ಡ್ ರಾಜೇಶ್, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ವೇತಾ ಸೇರಿದಂತೆ ಹಲವರು ಭಾಗವಹಿಸಿದ್ದರು.

