ನಂಜನಗೂಡು: ಸರ್ಕಾರದಿಂದ ತಾಲ್ಲೂಕಿಗೆ ಬಿಡುಗಡೆಯಾಗಿರುವ ಅನುದಾನದಲ್ಲಿ ಶೇಕಡ 50ರಷ್ಟು ಅನುದಾನವನ್ನು ಪಟ್ಟಣದ ಅಭಿವೃದ್ಧಿಗೆ ಮೀಸಲಿಡಲಾಗುವುದು ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.
ನಂಜನಗೂಡು ನಗರದ ವಿವಿಧ ವಾರ್ಡ ಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಹಾಗೂ ಫುಡ್ ಜೋನ್ ರಸ್ತೆ ಬಳಿ ಇಂಟರ್ಲಾಕ್, ಹಾಗೂ ನಗರಸಭಾ ವ್ಯಾಪ್ತಿಯ ಕಂಬಗಳಿಗೆ ಎಲ್ ಎಲ್ಇಡಿ ಬೀದಿ ದೀಪಗಳನ್ನು ಅಳವಡಿಸುವ ಸುಮಾರು 3 ಕೋಟಿ 83 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.
ಕಳೆದ ಬಾರಿ ಮುಖ್ಯಮಂತ್ರಿ ಅವರು ಕ್ಷೇತ್ರಕ್ಕೆ 25 ಕೋಟಿ ಅನುದಾನ ನೀಡಿದ್ದರು. ಇದಕ್ಕೆ ಸಂಬಂಧಿಸಿದ ಭೂಮಿ ಪೂಜೆಗಳು ನಡೆಯುತ್ತಲೇ ಇವೆ. ಈ ಬಾರಿಯೂ, ಇನ್ನು ಹೆಚ್ಚಿನ ಅನುದಾನವನ್ನು ಕ್ಷೇತ್ರಕ್ಕೆ ನೀಡಲಿದ್ದಾರೆ. ನಾನು ಕೂಡ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದರು.
ಈ ವೇಳೆ ವಿಧಾನ ಪರಿಷತ್ ಸದಸ್ಯರಾದ ತಿಮ್ಮಯ್ಯ, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ನಗರಸಭಾ ಅಧ್ಯಕ್ಷ ಶ್ರೀಕಂಠ ಸ್ವಾಮಿ, ಉಪಾಧ್ಯಕ್ಷ ರಿಯಾನಾ ಬಾನು, ನಗರಸಭಾ ಸದಸ್ಯರಾದ ವಿಜಯ ಲಕ್ಶ್ಮೀ, ಗಾಯತ್ರಿ ಮುರುಗೇಶ್, ಸೌಭಾಗ್ಯ,ಮೀನಾಕ್ಷಿ, ಗಾಯತ್ರಿ, ಪ್ರದೀಪ್, ಸಿದ್ದಿಕ್, ನಗರಸಭಾ ಪೌರಯುಕ್ತರಾದ ವಿಜಯ್, ನಗರಸಭಾ ನಾಮ ನಿರ್ದೇಶನ ಸದಸ್ಯ ಬಸವರಾಜ್, ಪ್ರಕಾಶ್, ರವಿ, ಮುಖಂಡರರಾದ ಸ್ವಾಮಿ, ಪುಟ್ಟರಾಜು , ಪ್ರಸನ್ನ , ಅರುರಪ್ಲ, ಕುಮಾರ್ , ದೇವರಾಜ್, ರಾಜೇಶ್, ಚಂದ್ರು , ಕೃಷ್ಣಪ್ಪ, ಫಾರ್ವಿಜ್ ಸೇರಿದಂತೆ ಹಲವು ಮುಖಂಡರುಗಳು, ಸ್ಥಳೀಯರು ಉಪಸ್ಥಿತರಿದ್ದರು.

