ಮೈಸೂರು: ಶಾಸಕ ಅನಿಲ್ ಚಿಕ್ಕಮಾಧುಗೆ ಸಚಿವ ಸ್ಥಾನಕ್ಕೆ ಒತ್ತಾಯಿಸಿ, ಅನಿಲ್ ಚಿಕ್ಕಮಾಧು ಅಭಿಮಾನಿಗಳಿಂದ ಮೈಸೂರಿನ ಮಹಾಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಕೆ ಮಾಡಲಾಯಿತು.
ಮೈಸೂರಿನ ಅಗ್ರಹಾರ ವೃತ್ತದಲ್ಲಿರುವ ದೇವಸ್ಥಾನಕ್ಕೆ ಅನಿಲ್ ಚಿಕ್ಕಮಾಧು ಭಾವಚಿತ್ರ ಹಿಡಿದು ಪೂಜೆ ಸಲ್ಲಿಕೆ ಮಾಡಲಾಯಿತು. 101 ಈಡುಗಾಯಿಯನ್ನು ಅಭಿಮಾನಿಗಳು ಒಡೆದಿದ್ದಾರೆ.
ಮೈಸೂರು ಪ್ರಾಂತ್ಯದಲ್ಲಿರುವ ನಾಯಕ ಸಮುದಾಯದ ಏಕೈಕ ಶಾಸಕ ಅನಿಲ್ ಚಿಕ್ಕಮಾಧು. ಮೈಸೂರು ಪ್ರಾಂತ್ಯದಲ್ಲಿ 5ರಿಂದ 6ಲಕ್ಷ ಜನ ಇದ್ದೇವೆ. ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಇಬ್ಬರಿಗೂ ನಾವು ಒತ್ತಾಯ ಮಾಡುತ್ತೇವೆ.
ಅನಿಲ್ ಚಿಕ್ಕಮಾಧುಗೆ ಸಚಿವ ಸ್ಥಾನ ನೀಡಬೇಕು. ಇಲ್ಲವಾದಲ್ಲಿ ಈ ಸಮುದಾಯಕ್ಕೆ ದ್ರೋಹ ಬಗೆದ ಹಾಗೆ ಆಗುತ್ತೆ ಎಂದು ಮಾಜಿ ನಗರಪಾಲಿಕೆ ಸದಸ್ಯ ಲೋಕೇಶ್ ಪಿಯಾ ಹೇಳಿಕೆ ನೀಡಿದರು.

