ನಂಜನಗೂಡು: ಹಸುವಿನ ಹಾಲಿಗೆ ನೀರಿನ ಜೊತೆಗೆ ಪೌಡರ್ ಬೆರೆಸಿ ಮಿಶ್ರಣ ಮಾಡುತ್ತಿರುವ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಾಲು ಉತ್ಪಾದಕರ ಸಂಘದ ಸದಸ್ಯೆ ಮನೆಯಲ್ಲೇ ಇಂತಹ ಘಟನೆ ಬೆಳಕಿಗೆ ಬಂದಿರುವುದು ಅಚ್ಚರಿಯಾಗಿದೆ.

ನಂಜನಗೂಡು ತಾಲ್ಲೂಕು ತರಗನಹಳ್ಳಿ ಹಾಲು ಉತ್ಪಾದಕರ ಸಂಘದ ಸದಸ್ಯೆ ಸಾವಿತ್ರಮ್ಮ ಎಂಬುವರ ಮನೆಯಲ್ಲೇ ಇಂತಹ ಅಕ್ರಮ ಬೆಳಕಿಗೆ ಬಂದಿದೆ. ಹಾಲಿಗೆ ಪೌಡರ್ ಹಾಲು ಮಿಶ್ರಣ ಮಾಡುವ ದೃಶ್ಯವನ್ನ ಸ್ಥಳೀಯರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.

ಇದೇ ಮಿಶ್ರಣವಾದ ಹಾಲು ಉತ್ಪಾದಕರ ಸಂಘಕ್ಕೆ ತಲುಪುತ್ತದೆ ಎಂದು ಹೇಳಲಾಗಿದೆ. ಉತ್ಪಾದಕರ ಸಂಘದಿಂದ ನಂದಿನಿ ಘಟಕಕ್ಕೆ ತಲಪುತ್ತದೆ. ನಂದಿನಿ ಹಾಲಿನ ಬಗ್ಗೆ ದೇಶದಲ್ಲೇ ಉತ್ತಮ ಪ್ರತಿಕ್ರಿಯೆ ಇದೆ. ಆದ್ರೆ ಕೆಲವು ವ್ಯಕ್ತಿಗಳು ಮಾಡುವ ಇಂತಹ ನೀಚ ಕೆಲಸಗಳಿಂದ ನಂದಿನ ಹಾಲಿನ ಗುಣಮಟ್ಟದ ಮೇಲೆ ಸಂಶಯ ಮೂಡುವಂತಹ ವಾತಾವರಣ ಸೃಷ್ಟಿಯಾಗಿತ್ತದೆ. ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಮುಂದಾಗುವ ಅನಾಹುತಕ್ಕೆ ಕಡಿವಾಣ ಹಾಕಬೇಕಿದೆ.