ಮೈಸೂರು : ನಾಪತ್ತೆಯಾಗಿದ್ದ ಹುಣಸೂರು ಖ್ಯಾತ ವಕೀಲ ಶವವಾಗಿ ಪತ್ತೆಯಾಗಿದ್ದಾರೆ.
ಹುಣಸೂರಿನ ಗೋಕುಲ ಬಡಾವಣೆ ನಿವಾಸಿ ವಕೀಲ ಕೆ.ರಾಜು (52) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ನಿನ್ನೆ ಆಫೀಸ್‌ಗೆ ಹೋಗುತ್ತೇನೆಂದು ಹೇಳಿ ಮನೆಯಿಂದ ತೆರಳಿದ್ದ ವಕೀಲ.
ರಾತ್ರಿಯಾದರೂ ವಾಪಸ್ ಬಾರದ ಹಿನ್ನಲೆ ಕುಟುಂಬಸ್ಥರು ಹುಡುಕಾಟ ನಡೆಸಿದರು. ಹುಣಸೂರು ತಾಲ್ಲೂಕಿನ ಹೊಸರಾಮನಹಳ್ಳಿಯ ಲಕ್ಷ್ಮಣ ತೀರ್ಥ ನದಿ ಸೇತುವೆ ಬಳಿ ವಕೀಲನ ಕಾರು ಪತ್ತೆಯಾಗಿತ್ತು.
ನದಿ ಬಳಿ ಕಾರು ಪತ್ತೆಯಾದ ಹಿನ್ನಲೆ ಆತ್ಮಹತ್ಯೆ ಶಂಕೆ ವ್ಯಕ್ತವಾಗಿತ್ತು. ಬೆಳಗಿನಿಂದ ಹೊಸರಾಮನಹಳ್ಳಿಯ ಲಕ್ಷ್ಮಣ ತೀರ್ಥ ನದಿಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದರು. ಇದೀಗ ನದಿಯಲ್ಲಿ ವಕೀಲ ಕೆ.ರಾಜು ಶವವಾಗಿ ಪತ್ತೆಯಾಗಿದೆ.
ನಾಪತ್ತೆಯಾದ ಕೆ.ರಾಜು ಪತ್ನಿ ವಸಂತಲಕ್ಷ್ಮೀಯಿಂದ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಸಂಬಂಧ ದೂರು ದಾಖಲಿಸಿದ್ದರು. ಇದೀಗ ಕೆ.ರಾಜು ಶವವಾಗಿ ಪತ್ತೆಯಾಗಿದೆ. ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

