ಮೈಸೂರು : ಸಚಿವ ಪ್ರಿಯಾಂಕ ಖರ್ಗೆ‌ಗೆ ಆರ್ಎಸ್ಎಸ್‌ನಿಂದ ಬೆದರಿಕೆ ಕರೆ ಹಿನ್ನಲೆ ಮಾಜಿ ಸಂಸದ ಪ್ರತಾಪ್ ಸಿಂಹ, ವಿಪಕ್ಷ ನಾಯಕ ಆರ್ ಅಶೋಕ್ ಶಾಸಕ ಯತ್ನಾಳ್ ಭಾವಚಿತ್ರಕ್ಕೆ ಚಪ್ಪಲಿ ಏಟು ಕೊಟ್ಟು ಪ್ರತಿಭಟನೆ ನಡೆಸಿದರು.

ಮೈಸೂರಿನಲ್ಲಿ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.ಬಿಜೆಪಿ ನಾಯಕರ ವಿರುದ್ದ ಮೈಸೂರು ನಗರ ಕಾಂಗ್ರೆಸ್ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.

ಮೈಸೂರಿನ ಗಾಂಧಿ ವೃತ್ತದಲ್ಲಿ ಕೈ ಕಾರ್ಯಕರ್ತರು ಪ್ರತಿಭಟಿಸಿದರು. 420 ಪ್ರತಾಪ್ ಸಿಂಹ ಎಂದು ಘೋಷಣೆ ಕೂಗಿ, ಚಪ್ಪಲಿ ಸೇವೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಆರ್ಎಸ್ಎಸ್ ಬ್ಯಾನ್ ಮಾಡಿ ಅಂತಾ ಪ್ರಿಯಾಂಕ ಖರ್ಗೆ ಹೇಳಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಆರ್ಎಸ್ಎಸ್ ಬೈಟಿಕ್, ಸಂಘ ಸಭೆಗಳನ್ನ ಮಾಡಲು ಅವಕಾಶ ನೀಡಬಾರದೆಂದು ಪತ್ರ ಬರೆದಿದ್ದಾರೆ.

ಇದನ್ನ ತಿರುಚಿ ಬಿಜೆಪಿ ನಾಯಕರ ಬೆದರಿಕೆ ಹಾಕುತ್ತಿದ್ದಾರೆ. ಕೂಡಲೇ ಬೆದರಿಕೆ ಕರೆ ಮಾಡುತ್ತಿರುವವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸಿದರು.