ತಿ.ನರಸೀಪುರ: ಜಿಲ್ಲಾ ಉಸ್ತುವಾರಿ, ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ  ಮಹದೇವಪ್ಪ ಟಿ ನರಸೀಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪಂಚಾಯತ್ ರಾಜ್  ಇಲಾಖೆಯ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.

ತಿ. ನರಸೀಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ದೊಡ್ಡಪುರ, ಜಯಪುರ, ಹೊಸಕುಕ್ಕೂರು, ವಿಜಾಪುರ,ಬಣವೆ, ಕಲಿಯೂರು, ಸೇರಿದಂತೆ ಹೆಮ್ಮಿಗೆ ಗ್ರಾಮಕ್ಕೆ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ  ನಂತರ ಮಾತನಾಡಿದ ಅವರು ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ 200 ಕೋಟಿ ಮಂಜೂರಾಗಿದೆ. ವಿವಿಧ ಕಾಮಗಾರಿಗಳಲ್ಲಿ ಪ್ರಾರಂಭಿಕವಾಗಿ ಕಲಿಯೂರು, ದೊಡ್ಡಪುರ ಸೇರಿದಂತೆ ಅದಕ್ಕೆ ಪೂರಕವಾದಂತೆ 50 ಕೋಟಿ ರೂಗಳ ವೆಚ್ಚದ ರಸ್ತೆ, ಮತ್ತು ಚರಂಡಿ, ಸಮುದಾಯ ಭವನಗಳ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಇದೇ ರೀತಿ ಇಡೀ ಕ್ಷೇತ್ರದಲ್ಲಿ ಆಗಿದೆ ಎಂದರು.

ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂಡಿ ಬಸವರಾಜ್, ಶೇಷಾದ್ರಿ, ಗ್ರಾ.ಪಂ.ಉಪಾಧ್ಯಕ್ಷ ಹೆಮ್ಮಿಗೆ  ಸೋಮಣ್ಣ, ಕೆಪಿಸಿಸಿ ಸದಸ್ಯ ತಲಕಾಡು ಸುಂದರ್ ನಾಯಕ್, ಅಧಿಕಾರಿಗಳಾದ ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್,ಲೋಕೋ ಪಯೋಗಿ ಇಲಾಖೆ ಎ.ಇಇ ಸತೀಶ್ ಚಂದ್ರ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಶಾಂತ, ಪಂಚಾಯತ್ ರಾಜ್ ಇಲಾಖೆಯ ಎ.ಇಇ ಚರಿತ  ಸೇರಿದಂತೆ ಇತರರು ಇದ್ದರು.