ಮೈಸೂರು: ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಬೈಕ್ ಹಾಗೂ ರಾಗಿ ಒಕ್ಕಣೆ ಯಂತ್ರ ಮುಖಾಮುಖಿ ಡಿಕ್ಕಿಯಾಗಿದೆ.

ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹುಣಸೂರು ತಾಲ್ಲೂಕು ಹನಗೋಡು–ಪಂಚವಳ್ಳಿ ರಸ್ತೆ ಕಡೆಮನುಗನಹಳ್ಳಿ ಬಳಿ ಸಂಭವಿಸಿದೆ.

ಗಿರೀಶ್ 25 ಅಯ್ಯನಕೆರೆ ಗಿರಿಜನ ಹಾಡಿ ನಿವಾಸಿ ಸಾವನ್ನಪ್ಪಿದ್ದಾರೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.