ನಂಜನಗೂಡು : ಸಿಎಂ ತವರಿನಲ್ಲಿ  ಮೈಕ್ರೋ ಫೈನಾನ್ಸ್ ಮತ್ತೆ ಬಾಲ ಬಿಚ್ಚಿದೆ. ಸಾಲದ ಕಂತು ಕಟ್ಟಿಲ್ಲ ಎಂದು ಮನೆ ಜಪ್ತಿ ಮಾಡಿದೆ. ನಂಜನಗೂಡು ತಾಲ್ಲೂಕಿನ ಕಂದೇಗಾಲ‌ ಗ್ರಾಮದಲ್ಲಿ ಘಟನೆ ಬೆಳಕಿಗೆ ಬಂದಿದೆ.

ಕಾಲವಕಾಶ ಕೋರಿದ್ದರೂ ಸ್ಪಂದಿಸದ ಫೈನಾನ್ಸ್ ನ್ಯಾಯಾಲಯದ ಆದೇಶ ತಂದು ಜಪ್ತಿ ಮಾಡಿದ್ದಾರೆ. ಇದೀಗ ಸಾಲ ಪಡೆದ ಕುಟುಂಬ ಬೀದಿಗೆ ಬಂದಿದೆ. ಮನೆ ನಿರ್ಮಾಣ ಸಂಭಂದ ಇಕ್ವೀಟಾಸ್ ಸ್ಮಾಲ್ ಫೈನಾನ್ಸ್ ನಲ್ಲಿ ಚಿನ್ನಸ್ವಾಮಿ 2023 ರಲ್ಲಿ 2,70,000 ರೂ ಸಾಲ‌ಪಡೆದಿದ್ದರು. ಚಿನ್ನಸ್ವಾಮಿ ಈಗಾಗಲೆ 19 ಕಂತುಗಳ 189000 ಸಾಲ‌ ಮರುಪಾವತಿಸಿದ್ದಾರೆ.

ಚಿನ್ನಸ್ವಾಮಿ ಪತ್ನಿ ಸಹ ಇಕ್ವೀಟಾಸ್ ಫೈನಾನ್ಸ್ ನಲ್ಲಿ ಗಂಪು ಸಾಲ ಪಡೆದಿದ್ದರು. ಮನೆ ಸಾಲ‌ಮರುಪಾವತಿ ಕಂತಿನ ಹಣವನ್ನು  ಗುಂಪುಸಾಲಕ್ಕೆ ಜಮೆ ಮಾಡಿಕೊಂಡಿದೆ ಎಂದು ಚಿನ್ನಸ್ವಾಮಿ ಆರೋಪವಾಗಿದೆ. ತಮ್ಮ ಅನುಮತಿ ಪಡೆಯೆದೆ ಸುಮಾರು 60 ಸಾವಿರಕ್ಕೂ ಹೆಚ್ವು ಹಣ ಗುಂಪು ಸಾಲಕ್ಕೆ ಜಮೆ ಮಾಡಿಕೊಂಡಿದ್ದಾರೆ.

ಇದೀಗ ಏಕಾಏಕಿ ಮನೆ ಸಾಲದ ಕಂತು ಕಟ್ಟಿಲ್ಲವೆಂದು ಮನೆ ಜಪ್ತಿ ಮಾಡಿದ್ದಾರೆ. ಸಾಲ ಮರುಪಾವತಿಗಾಗಿ ಚಿನ್ನಸ್ವಾಮಿ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಕಾಲಾವಕಾಶ  ಕೇಳಿದ್ದರು. ಮನೆ ಜಪ್ತಿ ತಡೆಯುವಂತೆ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಗೂ ಮನವಿ ಮಾಡಿದ್ದರು.

ಯಾವುದಕ್ಕು ತಲೆಕೆಡೆಸಿಕೊಳ್ಳದ ಫೈನಾನ್ಸ್ ಸಾಲ ಮರುಪಾವತಿ ಮಾಡುವಂತೆ ತಾಕೀತು ಮಾಡಿತ್ತು. ನೆನ್ನೆ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆ ಜಪ್ತಿ ಮಾಡಿ ನೋಟಿಸ್ ಅಂಟಿಸಿದ್ದಾರೆ. ಇದೀಗ ಮನೆ ಜಪ್ತಿ ಕಾರಣ ಚಿನ್ನಸ್ವಾಮಿ ಮತ್ತು ಕುಟುಂಬ ಬೀದಿಗೆ ಬಿದ್ದಂತಾಗಿದೆ. ಮನೆ ಜಪ್ತಿ ತೆರವು ಗೊಳಿಸುವಂತೆ ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.