ಮೈಸೂರು : ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಮಾರುತಿ ಓಮಿನಿ ಕಾರ್ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಇಬ್ಬರ ಸಾವನ್ನಪ್ಪಿದ ಘಟನೆ ಸಾಲಿಗ್ರಾಮ ತಾಲೂಕಿನ ಬೈಲಾಪುರ ಗ್ರಾಮದಲ್ಲಿ ನಡೆದಿದೆ.
ಹಾಸನದ ಲಕ್ಷ್ಮಿಪುರಂ ಬಡಾವಣೆಯ ಖಲಿಂ ರೆಹಮಾನ್ (65), ಶೇಖ್ ಅಬ್ದುಲ್ ಖಾದರ್ (45) ಸ್ಥಳದಲ್ಲಿಯೇ ಸಾವನ್ನಪ್ಪಿದ ವ್ಯಕ್ತಿಗಳು. ಕಾರಿನಲ್ಲಿದ್ದ ಶೇಖ್ ಮುನಿರ್ ಅಹ್ಮದ್‌ಗೆ ಗಾಯವಾಗಿದ್ದು, ಆಸ್ವತ್ರೆಗೆ ದಾಖಲು ಮಾಡಲಾಗಿದೆ.
ಬೈಲಾಪುರ ಗ್ರಾಮದ ಬಳಿ ಪೈಪ್ ಹಾಕಲು ಹಳ್ಳ ತೆಗೆಯಲಾಗಿತ್ತು. ಹಳ್ಳ ಮುಚ್ಚದ್ದರಿಂದ ಓಮಿನಿ ಕಾರ್ ನಿಯಂತ್ರಣ ತಪ್ಪಿದೆ. ಹಾಸನದಿಂದ ಚುಂಚನಕಟ್ಟೆ ಕಡೆ ಹೋಗುವಾಗ ಘಟನೆ ನಡೆದಿದ್ದು, ಸಾಲಿಗ್ರಾಮ ಪೊಲೀಸರು ಭೇಟಿ ನೀಡಿದ್ದಾರೆ.

