ಮೈಸೂರು: ನರಹಂತಕ ಹುಲಿ ಜೊತೆಗೆ ಎರಡು ಮರಿಗಳು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಮುಳ್ಳೂರು ಬಳಿಯ ಬೆಣ್ಣೆಗೆರೆ ಬಳಿ ಸೆರೆ ಹಿಡಿಯಲಾಗಿದೆ. ಇನ್ನೊಂದು ಮರಿ ಹುಲಿ ಸೆರೆಗಾಗಿ  ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಈ ಹಿಂದೆ ರಾಜಶೇಖರ್ ಎಂಬಾತನನ್ನು ಹುಲಿ ಬಲಿ ಪಡೆದಿತ್ತು. ನಿನ್ನೆ ತಡರಾತ್ರಿ ಕಾರ್ಯಾಚರಣೆ ಮಾಡಿ ಹುಲಿ ಸೆರೆ ಹಿಡಿಯಲಾಗಿದೆ. ಹುಲಿ ಸೆರೆಯಿಂದ  ಮುಳ್ಳೂರು ಭಾಗದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.