ಮಂಡ್ಯ

ನಾಗಮಂಗಲ: ಶಿಕ್ಷಣ ಜೀವನದ ಸಾಧನೆಗೆ ಮೈಲಿಗಲ್ಲಾಗ ಬೇಕು- ಚೆಲುವರಾಯಸ್ವಾಮಿ

ನಾಗಮಂಗಲ: ಶಿಕ್ಷಣ ಎಂಬುದು ಕೇವಲ ಕಲಿಕೆಯಾಗದೆ ಜೀವನದ ಒಂದು ಮೈಲಿಗಲ್ಲಾಗಿ ಸಾಧನೆಯ ಪ್ರತೀಕವಾಗಬೇಕು ಎಂದು ಮಾಜಿ ಸಚಿವ ಚೆಲುವರಾಯಸ್ವಾಮಿ ಹೇಳಿದರು.

ತಾಲೂಕಿನ ಬೆಳ್ಳೂರಿನ ಅಬ್ಬಾಸ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಏರ್ಪಡಿಸಿದ್ದ ಅಭ್ಯಾಸ ಕಲಾಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಶ್ವದ ಮುಂದುವರೆದ ದೇಶಗಳನ್ನು ಗಮನಿಸಿದಾಗ ವಿದ್ಯಾವಂತರನ್ನು ಹೊಂದಿರುವ ಆ ದೇಶ ಪ್ರಗತಿಯ ಮುಂಚೂಣಿಯಲ್ಲಿ ಸಾಗುತ್ತಿದೆ. ಆ ನಿಟ್ಟಿನಲ್ಲಿ ನಾವುಗಳು ನಮ್ಮ ಗ್ರಾಮಾಂತರ ಪ್ರದೇಶದ ಮಕ್ಕಳ ಪೂರಕ ಶಿಕ್ಷಣ ನೀಡುವ ಮುಖಾಂತರ ಮುಂದುವರಿದ ದೇಶಗಳ ಸಮಾನಂತರವಾಗಿ ನಿಲ್ಲಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಇಂದಿನ ಶೈಕ್ಷಣಿಕ ಶಿಕ್ಷಣ ಪ್ರಗತಿಯ ದಾಪುಗಾಲಲ್ಲಿ ಶಿಕ್ಷಣ ಡಿಜಿಟಲ್ ಮಾದರಿಯತ ಸಾಗುತ್ತಿದ್ದು ನಾವುಗಳು ಇರುವಲ್ಲಿ ತಂತ್ರಜ್ಞಾನದ ಯುಗದತ್ತ ಸಾಗುತ್ತಿದ್ದು ಇಂತಹ ಪೈಪೋಟಿಯ ಬೆಳವಣಿಗೆಯಲ್ಲಿ ನಾವುಗಳು ಸಾಗಬೇಕಾಗಿರುವುದು ಅನಿವಾರ್ಯವಾಗಿದೆ. ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆಯಲ್ಲಿ ಗ್ರಾಮಾಂತರ ಪ್ರದೇಶದ ಇಂತಹ ಶಿಕ್ಷಣ ಸಂಸ್ಥೆಗಳಲ್ಲಿ ಆಯೋಜನೆ ಮಾಡಿರುವ ಕಾರ್ಯಕ್ರಮ ನಿಜಕ್ಕೂ ಗ್ರಾಮೀಣ ಮಕ್ಕಳ ಶಿಕ್ಷಣದ ಕಲಿಕೆಗೆ ಪೂರಕ ವ್ಯವಸ್ಥೆಯಾಗಿದೆ ಎಂದರು.

ನಾಗಮಂಗಲ ತಾಲೂಕು ವೃತ್ತ ನಿರೀಕ್ಷಕ ನಿರಂಜನ್ ಮಾತನಾಡಿ, ಮಕ್ಕಳ ಶಿಕ್ಷಣದ ಬೆಳವಣಿಗೆಯಲ್ಲಿ ಹಾಗೂ ಅಭ್ಯಾಸದ ನಿರಂತರ ಕಲಿಕೆಯಲ್ಲಿ ಪೋಷಕರ ಪಾತ್ರ ಮಹತ್ತರವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗಣ್ಯರು ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

Gayathri SG

Recent Posts

ಬ್ಯಾಂಕ್ ಗಳು ಒತ್ತಾಯಪೂರ್ವಕವಾಗಿ ಸಾಲ ವಸೂಲಿ ಮಾಡಬೇಡಿ: ಡಿಸಿ

ತೀವ್ರ ಬರಗಾಲದಿಂದ ರೈತರು ಸಂಕಷ್ಟದಲ್ಲಿದ್ದು, ಬ್ಯಾಂಕುಗಳು ಒತ್ತಾಯ ಪೂರ್ವಕವಾಗಿ ರೈತರಿಂದ ಸಾಲ ವಸೂಲಿ ಮಾಡಬಾರದು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅಧಿಕಾರಿಗಳಿಗೆ…

3 hours ago

ಕೇರಳದ 9 ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ

ಇಂದಿನಿಂದ ಮುಂದಿನ ಮಂಗಳವಾರದವರೆಗೆ ಕೇರಳದ  ಬಹುತೇಕ ಭಾಗಗಳಲ್ಲಿ  ಗುಡುಗು ಸಹಿತ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ  ಮುನ್ಸೂಚನೆ ನೀಡಿದೆ.

3 hours ago

ಕೇರಳದಲ್ಲಿ ವೆಸ್ಟ್ ನೈಲ್ ಜ್ವರ: ಬಾವಲಿ ಚೆಕ್ ಪೋಸ್ಟ್ ನಲ್ಲಿ ಕಟ್ಟೆಚ್ಚರ

ಕೇರಳದಲ್ಲಿ ವೆಸ್ಟ್ ನೈಲ್ ಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ಮೈಸೂರು ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ಕಟ್ಟೆಚ್ಚರ ವಹಿಸಲಾಗಿದ್ದು, ಕೇರಳದಿಂದ ಆಗಮಿಸುವವರತ್ತ ನಿಗಾವಹಿಸಲಾಗುತ್ತಿದೆ.

3 hours ago

ಬಿರುಗಾಳಿಯೊಂದಿಗೆ ಸುರಿದ ಮಳೆ: ಮಾವು, ಪಪ್ಪಾಯಿ ಬೆಳೆಗೆ ಹಾನಿ

ತಾಲ್ಲೂಕಿನ ವಿವಿಧೆಡೆ ಮಂಗಳವಾರ ಬಿರುಗಾಳಿಯೊಂದಿಗೆ ಸುರಿದ ಮಳೆಗೆ ಮಾವು ಹಾಗೂ ಪಪ್ಪಾಯಿ ಬೆಳೆಗೆ ಹಾನಿ ಉಂಟಾಗಿದೆ.

4 hours ago

ಚಾಮರಾಜನಗರ: ಕುಸಿದು ಬಿದ್ದು ಕೂಲಿ ಕಾರ್ಮಿಕ ಸಾವು

ಕೆಲಸ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ಕೂಲಿ ಕಾರ್ಮಿಕ ಸಾವನ್ನಪ್ಪಿದ ಘಟನೆ   ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಮುಳ್ಳೂರು ಗ್ರಾಮದಲ್ಲಿ ನಡೆದಿದೆ.

4 hours ago

ಸಾಮಾನ್ಯ ಪ್ರಯಾಣಿಕರಂತೆ ಟಿಕೆಟ್‌ ಪಡೆದು ಬಸ್‌ನಲ್ಲಿ ಸಂಚರಿಸಿದ ನ್ಯಾಯಾಧೀಶ

ನಗರದಿಂದ ಸಿದ್ಧೇಶ್ವರ ಮಾರ್ಗವಾಗಿ ಭಾಲ್ಕಿಗೆ ಬಸ್ ಓಡಿಸಬೇಕೆಂಬ ಗ್ರಾಮಸ್ಥರ ಬಹುದಿನಗಳ ಬೇಡಿಕೆ ಈಡೇರಿದೆ.

4 hours ago