News Karnataka Kannada
Wednesday, May 01 2024
ಮಂಡ್ಯ

ಶಾಸನಕನಾದ ಬಳಿಕ ಪದೇ ಪದೇ ಅಮೆರಿಕಕ್ಕೆ ಹಾರುತ್ತಿರುವ ದರ್ಶನ್ ಪುಟ್ಟಣ್ಣಯ್ಯ

New Project 2024 01 04t134155.356
Photo Credit : News Kannada

ಮಂಡ್ಯ: ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಶಾಸಕರಾಗಿ ಆಯ್ಕೆಯಾದ ಏಳೇ ತಿಂಗಳಲ್ಲಿ ನಾಲ್ಕನೇ ಬಾರಿ ಅಮೆರಿಕಕ್ಕೆ ಹಾರಿದ್ದಾರೆ. ಕ್ಷೇತ್ರದ ಜನರ ಸಮಸ್ಯೆ ಬಗ್ಗೆ ಕೇಳಿಬೇಕಿದ್ದ, ಕಾರ್ಯಕರ್ತರ ಜೊತೆ ನಿಲ್ಲಬೇಕಿದ್ದ ಶಾಸಕ ಅಮೆರಿಕಾಗೆ ಹೋಗುತ್ತಿರುವ ಬಗ್ಗೆ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ.

ಡಿಸೆಂಬರ್ 23ರಂದು ವಿದೇಶಕ್ಕೆ ತೆರಳಿರೊ ಶಾಸಕ ದರ್ಶನ್ ಪುಟ್ಟಣ್ಣಯ್ಯ ಜನವರಿ 10ರಂದು ವಾಪಸ್ಸು ಬರಲಿದ್ದಾರೆ ಎನ್ನಲಾಗಿದೆ.

ವಿಧಾನಸಭೆ ಚುನಾವಣೆಗೂ ಮೊದಲು ಅಮೆರಿಕಾದಲ್ಲಿನ ತನ್ನ ಕಂಪನಿ ಮಾರಾಟ ಮಾಡಿ ಹುಟ್ಟೂರಲ್ಲೇ ಇರುವುದಾಗಿ ದರ್ಶನ್ ಪುಟ್ಟಣಯ್ಯ ಹೇಳದ್ದರು. ಈ ಹಿಂದೆ ಅಮೆರಿಕಾಗೆ ಹೋಗಿ ವಾಪಾಸ್ ಬಂದ ಬಳಿಕ ಕ್ಷೇತ್ರದ ಜನರ ಬಳಿ ಕ್ಷಮೆ ಕೇಳಿದ್ದಾರೆ. ಮತ್ತೆ ವಿದೇಶಕ್ಕೆ ಹೋಗಲ್ಲ‌ ಎಂದಿದ್ದ ಅವರು ಮತ್ತೆ ಅಮೆರಿಕಾಗೆ ಹೋಗಿರುವುದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದರ್ಶನ್ ಪುಟ್ಟಣಯ್ಯ ಮತ್ತೆ ಅಮೆರಿಕಾ ಹೋಗುತ್ತಿರುವುದು ಬಿಸಿನೆಸ್ ಮಾಡುವುದಕ್ಕಾಗಿ ಎಂದು ಮತದಾರರು ಹೇಳಿದ್ದಾರೆ. ಅಮೆರಿಕಾದಲ್ಲಿ ಬಿಸಿನೆಸ್ ಮಾಡೊ‌ ಬದಲು ಆ ಕಂಪನಿಯನ್ನ ಇಲ್ಲೆ ಸ್ಥಾಪಿಸಿದರೆ ಇಲ್ಲಿಯವರಿಗೂ ಕೆಲಸ ಸಿಗುತ್ತದೆ. ಶಾಸಕರು ಇಲ್ಲೇ ಇದ್ದಂಗೆ ಆಗುತ್ತೆ. ಜನರ ಸಮಸ್ಯೆ ಕೇಳಬೇಕಾದವರು ಪದೇ ಪದೇ ಅಮೆರಿಕಾಗೆ ಹೋದ್ರೆ ನಮ್ಮ ಸಮಸ್ಯೆ ಯಾರ ಹತ್ರ ಹೇಳ್ಕೊಬೇಕು ಎಂದು ಮೇಲುಕೋಟೆ ಕ್ಷೇತ್ರದ ಮತದಾರರು ಅಸಮಾಧಾನ ಹೊರ ಹಾಕಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು