ಮಂಡ್ಯ

ಪೂರ್ಣಗೊಳ್ಳದ ಪಾಠ ವಿರೋಧಿಸಿ ಮಕ್ಕಳ ಪ್ರತಿಭಟನೆ

ಮಂಡ್ಯ: ತಾಲ್ಲೂಕಿನ ಕೀಲಾರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪಾಠ ಪೂರ್ಣವಾಗಿ ಮುಗಿಸದೇ ಪರೀಕ್ಷೆ ಬರೆಸುತ್ತಿದ್ದಾರೆ ಎಂದು ಆರೋಪಿಸಿದ ವಿದ್ಯಾರ್ಥಿಗಳು ಸೋಮವಾರ ಶಾಲೆಯಿಂದ ಹೊರಗುಳಿದ ಘಟನೆ ನಡೆದಿದೆ.

ಶಾಲೆಯ ಆವರಣದ ರಂಗಮಂದಿರದಲ್ಲಿ ಜಮಾಯಿಸಿದ ವಿದ್ಯಾರ್ಥಿಗಳು ಮತ್ತು ಪೋಷಕರು, ಮೊದಲು ಪರಿಪೂರ್ಣವಾಗಿ ಪಾಠ ಮುಗಿಸಿ ಆನಂತರ ಪರೀಕ್ಷೆ ಬರೆಸಿ ಎಂದು ಹೇಳುವ ಮೂಲಕ ಪೋಷಕರು ಸಹ ಮಕ್ಕಳ ಪರವಾಗಿ ಮಾತನಾಡಿ, ಶಾಲೆಯ ಶಿಕ್ಷಕರ ವಿರುದ್ಧ ಹರಿಹಾಯ್ದರು.

ಎಸ್‌ಡಿಎಂಸಿ ಅಧ್ಯಕ್ಷ ರಮೇಶ್ ಮಾತನಾಡಿ, ಶಾಲೆ ಉಳಿವಿಗೆ ಏನೆಲ್ಲಾ ಬೇಕೋ ಆ ವ್ಯವಸ್ಥೆಯನ್ನು ಮಾಡಿದ್ದೇವೆ, ಇಲ್ಲಿತನಕ ಸುಮಾರು 20 ಲಕ್ಷ ರೂಪಾಯಿಗಿಂತಲೂ ಹೆಚ್ಚು ಸೌಲಭ್ಯಗಳನ್ನು ನೀಡಿದ್ದೇವೆ, ಏಕೆಂದರೆ ನಿತ್ಯ ಸಚಿವರ ತವರೂರು ಎಂಬ ಕಾರಣಕ್ಕಾಗಿ ನಮ್ಮೂರಿನ ಹೆಸರು ಉಳಿವಿಗೆ ಸಹಕರಿಸಿದ್ದೇವೆ, ಮುಂದೆ ಅಂತಿಮ ಪರೀಕ್ಷೆ ಇದೆ, 1 ರಿಂದ 8 ರವರೆಗೆ ಕಲಿಕಾ ಬಲವರ್ಧನೆ, ಗಣಿತ, ಕನ್ನಡ ಪುಸ್ತಕಗಳ ಪಾಠ ನಡೆದಿಲ್ಲ, ಇದನ್ನು ಬಿಇಒ ಬಳಿ ಕೇಳಿದರೆ ಹಾರಿಕೆಯ ಉತ್ತರ ನೀಡುತ್ತಾರೆ ಎಂದು ಆರೋಪಿಸಿದರು.

ಈ ಶಾಲೆಯಲ್ಲಿ ಏಳು ಜನ ಶಿಕ್ಷಕರು ಹಾಗೂ ನಿಯೋಜನೆ ಶಿಕ್ಷಕರು ಒಬ್ಬರಿದ್ದಾರೆ ಇವರಿಂದ ಒಟ್ಟು ಎಂಟು ಜನ ಶಿಕ್ಷಕರಿದ್ದಾರೆ, ಅಕಾಡೆಮಿ ಮುಗಿಯುವವರೆಗೂ ಯಾವುದೇ ತರಬೇತಿ ಬೇಡ ಎಂದು ಹೇಳಿದ್ದೇವೆ, ಈಗ ಮಕ್ಕಳು ಹೊರಗಡೆ ಕುಳಿತು ಮೊದಲು ಪಾಠ ಮಾಡಿಕೊಡಿ ಎಂದು ಕೇಳುತ್ತಿದ್ದಾರೆ, ಇಲ್ಲಿವರೆಗೆ ಯಾವ ಅಧಿಕಾರಿಗಳು ಸಹ ಈ ಶಾಲೆಯ ಬಳಿ ಬಂದಿಲ್ಲ, ಹೀಗಾದರೇ ಎಲ್ಲಿ ಸರ್ಕಾರಿ ಶಾಲೆ ಉಳಿಯುತ್ತದೆ ಎಂದು ಪ್ರಶ್ನಿಸಿದರು.

ಪೋಷಕರಾದ ಭವ್ಯ ಮಾತನಾಡಿ, ಸರ್ಕಾರಿ ಶಾಲೆಯ ಶಿಕ್ಷಕರಿಗೆ ಅವರ ಮಕ್ಕಳ ಕ್ಷೇಮವೇ ಮುಖ್ಯ ಏಕೆಂದರೆ ಅವರ ಮಕ್ಕಳು ಖಾಸಗಿ ಶಾಲೆಗೆ ಹೋಗುತ್ತಿದ್ದಾರೆ ಹಾಗಾಗಿ ನಮ್ಮ ಸರ್ಕಾರ ಶಾಲೆಯ ಮಕ್ಕಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ, ಶಾಲೆಯಲ್ಲಿ ಮೊಟ್ಟೆ, ಊಟ ಕೊಟ್ಟರೆ ಸಾಕೇ ಪಾಠಗಳು ಸಹ ಪರಿಪೂರ್ಣವಾಗಿಯಾದರೂ ಮಾಡಬೇಕಲ್ಲವೇ, ಬಿಇಒ ಅವರಿಗೆ ಹಲವು ಬಾರಿ ದೂರು ನೀಡಿದರೂ ಸಹ ಪ್ರಯೋಜನಕ್ಕೆ ಬಂದಿಲ್ಲ, ಮೊದಲು ಸಮಸ್ಯೆ ಬಗೆಹರಿಸಿ ನಂತರ ಮಕ್ಕಳಿಗೆ ಪರೀಕ್ಷೆ ಕೊಡಲಿ ಎಂದು ಆಗ್ರಹಿಸಿದರು.

 

Gayathri SG

Recent Posts

ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ: ಆರೋಪಿ ಬಿಭವ್‌ ಕುಮಾರ್‌ ವಶಕ್ಕೆ

ಆಮ್‌ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ನಡೆಸಿದ ಆರೋಪಿ, ಅರವಿಂದ್‌ ಕೇಜ್ರಿವಾಲ್‌ ಆಪ್ತ ಕಾರ್ಯದರ್ಶಿ…

9 mins ago

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹುಸಿ ಬಾಂಬ್ ಬೆದರಿಕೆ: ಪ್ರಯಾಣಿಕನ ಮೇಲೆ ಪ್ರಕರಣ ದಾಖಲು

ಬೆಂಗಳೂರಿನಿಂದ ಪುಣೆಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಚೆಕ್-ಇನ್ ಬ್ಯಾಗ್‌ನಲ್ಲಿ ಬಾಂಬ್ ಅಡಗಿಸಿಟ್ಟಿರುವುದಾಗಿ ಸುಳ್ಳು ಬೆದರಿಕೆ ಹಾಕಿ ಭೀತಿ…

18 mins ago

ಸಂವಿಧಾನವನ್ನು ಯಾವುದೇ ಸರ್ಕಾರ ಬದಲಾಯಿಸಲು ಸಾಧ್ಯವಿಲ್ಲ : ನಿತಿನ್‌ ಗಡ್ಕರಿ

ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸಲಿದೆ ಎನ್ನುವ ಕಾಂಗ್ರೆಸ್‌ ಆರೋಪಕ್ಕೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಖಾತೆ ಸಚಿವ…

30 mins ago

ತೀರ್ಥಯಾತ್ರೆಗೆ ಬಂದ ನಾಲ್ವರು ನದಿಯಲ್ಲಿ ಮುಳುಗಿ ದಾರುಣ ಸಾವು

ತೀರ್ಥಯಾತ್ರೆಗೆಂದು ಅತಿಥಿ ಗೃಹಕ್ಕೆ ಬಂದಿದ್ದವರು ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿ ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೊಲ್ಲಾಪುರದ ಕಾಗಲ್ ತಾಲೂಕಿನ…

48 mins ago

ಪ್ರಾಚೀನರ ಕಲಾ ಕೊಡುಗೆಗಳ ಸಂರಕ್ಷಣೆ ಅಗತ್ಯ: ನೇಮಿರಾಜ ಶೆಟ್ಟಿ

ಇತಿಹಾಸವನ್ನು ಚಿತ್ರಗಳ ಮೂಲಕ ಜೋಪಾಸನೆ ಮಾಡುವ ಕಾಯಕವೂ ಅತ್ಯಂತ ಶ್ರೇಷ್ಠ. ಮುಂದಿನ ಪೀಳಿಗೆಗೆ ಪ್ರಾಚೀನರ ಕಲಾ ಕೊಡುಗೆಯನ್ನು ಸಂರಕ್ಷಣೆ ಮಾಡುವುದು…

53 mins ago

ಮತ್ತೆ ವಿವಾದಕ್ಕೆ ಸಿಲುಕಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ

ಒಂದು ವರ್ಷದ ಸಾಧನೆಯ ರಿಪೋರ್ಟ್ ಕಾರ್ಡ್ ಹಿಡಿದು ಹಿರಿಯ ಬಿಜೆಪಿ ಮುಖಂಡರ ಬಳಿ ಶಾಸಕ ಅಶೋಕ್ ಕುಮಾರ್ ರೈ ತೆರಳಿದ್ದು, ಶಾಸಕ…

1 hour ago