Categories: ಮಂಡ್ಯ

ಭಾರತೀನಗರ:  ಕೆ.ಎಂ.ದೊಡ್ಡಿಯಲ್ಲಿ ಬಸವನಿಗೆ ಭಕ್ತರಿಂದ ಪೂಜೆ

ಭಾರತೀನಗರ: ಇಲ್ಲಿಗೆ ಸಮೀಪದ ಕಾರ್ಕಹಳ್ಳಿ ಶ್ರೀಬಸವೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಧವಸ ಧಾನ್ಯ ಸಂಗ್ರಹ ಮಾಡಲು ಕೆ.ಎಂ.ದೊಡ್ಡಿಗೆ ಆಗಮಿಸಿದ್ದ ಶ್ರೀಬಸವೇಶ್ವರಸ್ವಾಮಿ ಬಸವಪ್ಪನಿಗೆ ಭಕ್ತಾಧಿಗಳು ಪೂಜೆಸಲ್ಲಿಸಿದರು.

ಭಾರತೀನಗರದ ಮದ್ದೂರು ಮಳವಳ್ಳಿ ಮುಖ್ಯರಸ್ತೆಯ ಮೂಲಕ ಕೆ.ಎಂ.ದೊಡ್ಡಿ ಮಾರಿಗುಡಿ ರಸ್ತೆಗೆ ಬಸವಪ್ಪ ಕಾಲ್ನಡಿಗೆಯಲ್ಲಿ ಆಗಮಿಸಿ ಭಕ್ತಾಧಿಗಳು ನೀಡುವ ದವಸಧಾನ್ಯ ಸಂಗ್ರಹಿಸಿತು. ಕೆ.ಎಂ.ದೊಡ್ಡಿಯ ಭಕ್ತಾಧಿಗಳು ಕಾರ್ಕಹಳ್ಳಿ ಶ್ರೀಬಸವೇಶ್ವರಸ್ವಾಮಿ ಜಾತ್ರಾಮಹೋತ್ಸವಕ್ಕೆ ಪುರಾತನ ಕಾಲದಿಂದಲೂ ಧವಸ-ಧಾನ್ಯಗಳನ್ನು ನೀಡುವ ಪದ್ಧತಿ ಇದ್ದು, ಅದರಂತೆ ಭಕ್ತಾಧಿಗಳಿಂದ ಕಾಣಿಕೆಯನ್ನು ಪಡೆಯಲು ಆಗಮಿಸಿತು. ಈ ವೇಳೆ ಶ್ರೀಬಸವೇಶ್ವರಸ್ವಾಮಿ ಬಸವಪ್ಪನನ್ನು ಮಹಿಳೆಯರು ಆರತಿ ಮಾಡುವ ಮೂಲಕ ಬರಮಾಡಿಕೊಂಡು ಪೂಜೆಸಲ್ಲಿಸಿದರು.

ಈ ಸಂದರ್ಭದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ  ವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ಅರ್ಧಕ್ಕೆ ನಿಂತಿರುವ ಕೌಂಪೌಂಡ್ ಬಳಿ ಕಾರ್ಕಹಳ್ಳಿ ನೂತನ ಶ್ರೀಬಸವಪ್ಪ ತೆರಳಿತು. ಅಚ್ಚರಿ ಎಂದರೆ ಇತ್ತೀಚಿಗೆ ನಿಧನಗೊಂಡ ಕಾರ್ಕಹಳ್ಳಿ ಶ್ರೀಬಸವೇಶ್ವರಸ್ವಾಮಿ ಬಸವಪ್ಪನು ಸಹ ಅರ್ಧಕ್ಕೆ ನಿಂತಿದ್ದ ಕಾಂಪೌಂಡ್ ಸ್ಥಳಕ್ಕೆ ತೆರಳಿ ಅಡ್ಡಿಪಡಿಸಿದ್ದ ವ್ಯಕ್ತಿಯ ಮನೆಗೆ ನುಗ್ಗಿ ಎಚ್ಚರಿಕೆ ನೀಡಿತ್ತು. ಆದರೂ ಕಾಂಪೌಂಡ್ ಪೂರ್ಣಗೊಂಡಿರಲಿಲ್ಲ.

ನೂತನ ಬಸವಪ್ಪನು ಸಹ ಕೆ.ಎಂ.ದೊಡ್ಡಿ ಗ್ರಾಮಕ್ಕೆ ದವಸ- ಧಾನ್ಯಗಳನ್ನು ಸಂಗ್ರಹ ಮಾಡಲು ಬಂದ ವೇಳೆ  ಅಪೂರ್ಣಗೊಂಡಿರುವ ಕಾಂಪೌಂಡ್ ತೆರಳಿತು. ಇದಕ್ಕೂ ಮೊದಲು ಕಾಂಪೌಡ್ ನಿರ್ಮಾಣಕ್ಕೆ ಅಡ್ಡಿಪಡಿಸಲು ಮುಂದಾದ ವ್ಯಕ್ತಿಯ ಮನೆಗೆ ಒಳಗೆ ಪ್ರವೇಶ ಮಾಡಿ ಅಚ್ಚರಿ ಮೂಡಿಸಿತು. ಮನೆಯವರು ಬಸವಪ್ಪನಿಗೆ ಪೂಜೆಸಲ್ಲಿಸಿದರು. ನಂತರ ಬಸವಪ್ಪ ಮನೆಯಿಂದ ಹಿಂತಿರುಗಿತು. ಮುಂದಿನ ದಿನಗಳಲ್ಲಿ ಕಾಂಪೌಂಡ್ ನಿರ್ಮಾಣಗೊಳ್ಳುವುದೇ ಎಂಬುವುದು ಭಕ್ತಾಧಿಗಳಲ್ಲಿ ಯಕ್ಷ ಪ್ರಶ್ನೆಯಾಗಿದೆ.

Ashika S

Recent Posts

ನಿತ್ಯಾನಂದ ಒಳಕಾಡು ನೇತೃತ್ವದಲ್ಲಿ 3 ವಾರಸುದಾರರಿಲ್ಲದ ಶವಗಳ ಅಂತ್ಯಸಂಸ್ಕಾರ

ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಡಲಾಗಿದ್ದ ಮೂರು ಅಪರಿಚಿತ ವ್ಯಕ್ತಿಗಳ ಶವದ ಅಂತ್ಯಸಂಸ್ಕಾರವನ್ನು ಬೀಡಿನಗುಡ್ಡೆಯ ಹಿಂದು ರುದ್ರಭೂಮಿಯಲ್ಲಿ ಗೌರಯುತವಾಗಿ ನಡೆಸಲಾಯಿತು.

11 mins ago

ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಮಹಾಲಕ್ಷ್ಮಿ ಯೋಜನೆಯಡಿ 1 ಲಕ್ಷ ರೂ. ಜಮಾ

ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಇಬ್ಬರು ಹೆಂತಿಯರು ಇರುವವರಿಗೆ 2 ಲಕ್ಷ ರೂ. ಆರ್ಥಿಕ ನೆರವು…

26 mins ago

ಕಿಂಗ್ಸ್‌-ರಾಯಲ್ಸ್‌ ಕದನದಲ್ಲಿ ಕಲಾಶ್‌ನಿಕಾವೋ: ಕೊಹ್ಲಿ ಕೆಣಕಿ ಉಳಿದವರುಂಟೇ

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಆರ್‌ ಸಿ ಬಿ ತಂಡ ಪಂಜಾಬ್ ಕಿಂಗ್ಸ್ ಅನ್ನು 60 ರನ್‌ಗಳಿಂದ…

41 mins ago

ಭಾರೀ ಗಾಳಿ ಮಳೆಗೆ ಮನೆಯ ಗೇಟ್ ಬಿದ್ದು ಬಾಲಕಿ ಮೃತ್ಯು

ಮಳೆ ಜತೆಗೆ ರಭಸವಾಗಿ ಬೀಸಿದ ಬಿರುಗಾಳಿಗೆ ಮನೆಯ ಗೇಟ್ ಕಿತ್ತು ಬಂದಿದ್ದು, ಇದೇ ವೇಳೆ ಮನೆಯ ಮುಂದೆ ಆಟವಾಡುತ್ತಿದ್ದ 7…

45 mins ago

ʼಮೇ 18-19 ಹಳ್ಳಿಗಟ್ಟು ಬೋಡ್ ನಮ್ಮೆ: ಮೇ 11 ರಂದು ದೇವ ಕಟ್ಟ್ ಬೀಳುವುದುʼ

ಕೆಸರಿನ ಓಕುಳಿಯ ಹಬ್ಬವೆಂದು ಖ್ಯಾತಿ ಪಡೆದಿರುವ ಹಳ್ಳಿಗಟ್ಟು ಶ್ರೀ ಭದ್ರಕಾಳಿ ಹಾಗೂ ಶ್ರೀ ಗುಂಡಿಯತ್ ಅಯ್ಯಪ್ಪ ದೇವರ ವಾರ್ಷಿಕ ಬೋಡ್…

1 hour ago

ಪೂಜೆಗೆ ಅರಳಿ ಹೂವು ಬಳಕೆ ನಿಲ್ಲಿಸಲು ಟಿಡಿಬಿ ತೀರ್ಮಾನ

ಕೇರಳದ ತಿರುವಾಂಕೂರು ದೇವಸ್ಥಾನ ಆಡಳಿತ ಮಂಡಳಿಯು (ಟಿಡಿಬಿ) ತನ್ನ ಸುಪರ್ದಿಯಲ್ಲಿರುವ ದೇವಾಲಯಗಳಲ್ಲಿ ಪೂಜೆಗೆ ಅರಳಿ ಹೂವು (ಒಲಿಯಾಂಡರ್‌-ಕಣಗಿಲು ಜಾತಿಗೆ ಸೇರಿದ…

1 hour ago