ಮಂಡ್ಯ

ಸರ್ಕಾರಿ ಇಲಾಖೆಗಳೆಲ್ಲವೂ ರಫ್ತು ಉತ್ತೇಜನಕ್ಕೆ ಸಹಕರಿಸಬೇಕು

ಮಂಡ್ಯ: ಜಿಲ್ಲೆಯು ಕೃಷಿ, ತೋಟಗಾರಿಕೆ, ರೇಷ್ಮೆ, ಶಿಕ್ಷಣ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದ್ದರೂ ಕೈಗಾರಿಕಾಭಿವೃದ್ಧಿಯಲ್ಲಿ ಕೊಂಚ ಹಿಂದುಳಿದಿದೆ ಹಾಗಾಗಿ ಜಿಲ್ಲೆಯಲ್ಲಿ ರಫ್ತುನ್ನು ಉತ್ತೇಜಿಸುವ ಮೂಲಕ ಕೈಗಾರಿಕಾಭಿವೃದ್ಧಿಗಾಗಿ ಎಲ್ಲ ಇಲಾಖೆಗಳು ಕೈಜೋಡಿಸಿ ಎಂದು ಜಿಪಂ ಸಿಇಓ ಜಿ.ಆರ್.ಜೆ ದಿವ್ಯಪ್ರಭು ಹೇಳಿದರು.

ನಗರದ ಹಿಂದಿ ಭವನದಲ್ಲಿ ಅಜಾದ್ ಕಿ ಅಮೃತ್ ಮಹೋತ್ಸವ ಅಂಗವಾಗಿ ಜಿಲ್ಲಾ ವಾಣಿಜ್ಯ ಹಾಗೂ ಕೈಗಾರಿಕಾ ಇಲಾಖೆ ವತಿಯಿಂದ ರಫ್ತು ಉತ್ತೇಜನಕ್ಕಾಗಿ ಆಯೋಜಿಸಲಾಗಿದ್ದ ವಾಣಿಜ್ಯ ಸಪ್ತಾಹ- ರಫ್ತುದಾರರ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಫ್ತನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇಂತಹ ಸಮಾವೇಶಗಳು ಅತ್ಯಗತ್ಯವಾಗಿದೆ. ಹೊರದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯರಿಗೂ ಕೂಡ ಇಲ್ಲಿನ ಉತ್ಪನ್ನಗಳು ಅಗತ್ಯವಾಗಿರುವುದರಿಂದ ರಫ್ತು ಉತ್ತಮ ಮಾರ್ಗವಾಗಿದೆ. ಆನ್‌ಲೈನ್ ಸೌಲಭ್ಯದಿಂದ ಪ್ರಪಂಚದ ಯಾವುದೇ ದೇಶಗಳಿಂದ ಬೇಕಾದಂತಹ ಉತ್ಪನ್ನಗಳನ್ನು ಪಡೆಯಬಹುದಾಗಿದ್ದು ರಫ್ತು ಅದರ ಒಂದು ಭಾಗವಾಗಿದೆ ಆದರೆ ಇಂತಹ ಸೌಲಭ್ಯಗಳನ್ನು ನಮ್ಮ ಜಿಲ್ಲೆಯಲ್ಲಿಯೂ ಬಳಕೆಗೆ ತರುವುದು ಅಗತ್ಯವಾಗಿದೆ. ಎಳನೀರಿನ ಗಂಜಿಯಲ್ಲಿ ಆಹಾರೋತ್ಪನ್ನಗಳನ್ನು ತಯಾರಿಸುವಂತಹ ವಿಭಿನ್ನ ಪ್ರಯತ್ನಗಳು ನಮ್ಮ ಜಿಲ್ಲೆಯಲ್ಲಿ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಇರುವ ವ್ಯವಸ್ಥೆ ಹಾಗೂ ಕಚ್ಛಾವಸ್ತುಗಳನ್ನು ಉಪಯೋಗಿಸಿಕೊಂಡು ಉದ್ದಿಮೆ ಆರಂಭಿಸಿ ರಫ್ತು ಮಾಡುವಲ್ಲಿ ಚಿಂತಿಸಬೇಕು ಎಂದು ಹೇಳಿದರು.

ಮಂಡ್ಯ ಜಿಲ್ಲೆಯ ರಾಜ್ಯದ ಪ್ರಮುಖ ನಗರಗಳಾದ ಮೈಸೂರು-ಬೆಂಗಳೂರು ಅಕ್ಕಪಕ್ಕದಲ್ಲಿಯೇ ಇರುವುದರಿಂದ ಉತ್ಪನ್ನಗಳಿಗೆ ಸುಲಭವಾಗಿ  ಮಾರುಕಟ್ಟೆಯನ್ನು ಒದಗಿಸಬಹುದಾಗಿದೆ ಹಾಗೂ ಬಹುಪಾಲು ಉದ್ದಿಮೆಗಳಿಗೆ ಕಚ್ಛಾವಸ್ತುಗಳನ್ನು ರೈತರೇ ಪೂರೈಸುವುದರಿಂದ ರೈತರು ಹಾಗೂ ಉದ್ದಿಮೆದಾರರಿಗೂ ಅನುಕೂಲವಾಗುತ್ತದೆ ಹಾಗಾಗಿ ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಸರ್ಕಾರದ ಯೋಜನೆಗಳ ಹಿಂದೆ ಹಲವಾರು ತಾಂತ್ರಿಕ ತಜ್ಞರ ವಿಚಾರವಂತಿಕೆ ಹೆಚ್ಚಿರುತ್ತದೆ ಆದರೆ ಅವುಗಳ ಅನುಷ್ಟಾನದ ಹಂತದಲ್ಲಿ ಯಾರಿಗೆ ಯಾವ ಯೋಜನೆ ಯಾವಾಗ ಬೇಕು ಎಂಬುದು ಬಹಳ ಮುಖ್ಯವಾಗುತ್ತದೆ. ಕೈಗಾರಿಕಾಭಿವೃದ್ಧಿಗೆ ಬೇಕಾದಂತಹ ಎಲ್ಲಾ ವ್ಯವಸ್ಥೆಗಳು ನಮ್ಮ ಜಿಲ್ಲೆಯಲ್ಲಿದೆ ಆದರೂ ನಾವು ಕೈಗಾರಿಕಾಭಿವೃದ್ಧಿಯಲ್ಲಿ ಹಾಗೂ ರಫ್ತು ಅಭಿವೃದ್ಧಿಯಲ್ಲಿ ಹಿಂದುಳಿದಿದ್ದೇವೆ, ಹಾಗಾಗಿ ರೈತರು, ಉದ್ದಿಮೆದಾರರು ರಫ್ತು ಬಗೆಗಿನ ಯೋಜನೆಗಳು, ಅನುಕೂಲಗಳು ನೀತಿನಿಯಮಗಳ ಬಗ್ಗೆ ಅರಿವು ಪಡೆಯುವುದು ಅಗತ್ಯ ಎಂದರು

ಕಾರ್ಯಗಾರದಲ್ಲಿ ರಫ್ತು ಬಗೆಗಿನ ಸರ್ಕಾರದ ಸೌಲಭ್ಯಗಳು ಹಾಗೂ ರಫ್ತು ಆರಂಭಿಸುವ ಮುಂಚಿತವಾಗಿ ಅನುಸರಿಸಬೇಕಾದ ಮೂಲಭೂತ ನಿಯಮಗಳು, ರಫ್ತು ಅವಕಾಶಗಳು ಹಾಗೂ ಇನ್ನಿತರ ವಿಷಯಗಳ ಕುರಿತು ಮಾಹಿತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಕೆ.ಶಿವಲಿಂಗಯ್ಯ, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕರಾದ ಎಂ.ಶೈಲಜಾ, ಜಿಲ್ಲಾ ಕೈಗಾರಿಕಾ ಕೇಂದ್ರದ ಅಧೀಕ್ಷಕರಾದ ಎನ್. ಶಿವಲಿಂಗಯ್ಯ, ಬೆಂಗಳೂರು ವಿಷನ್ ಬಿಸನೆಸ್ ಸಲ್ಯೂಶನ್ ಸಂಸ್ಥೆಯ ಆಮದು ಹಾಗೂ ರಫ್ತು ಸಂಯೋಜಕರಾದ ವೀಣಾ ವೆಂಕಟೇಶ್, ಇತರೆ ಕೈಗಾರಿಕಾ ಸಂಘಗಳ ಅಧ್ಯಕ್ಷರು, ಉದ್ದಿಮೆದಾರರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Raksha Deshpande

Recent Posts

ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ: ಆರೋಪಿ ಬಿಭವ್‌ ಕುಮಾರ್‌ ವಶಕ್ಕೆ

ಆಮ್‌ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ನಡೆಸಿದ ಆರೋಪಿ, ಅರವಿಂದ್‌ ಕೇಜ್ರಿವಾಲ್‌ ಆಪ್ತ ಕಾರ್ಯದರ್ಶಿ…

10 mins ago

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹುಸಿ ಬಾಂಬ್ ಬೆದರಿಕೆ: ಪ್ರಯಾಣಿಕನ ಮೇಲೆ ಪ್ರಕರಣ ದಾಖಲು

ಬೆಂಗಳೂರಿನಿಂದ ಪುಣೆಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಚೆಕ್-ಇನ್ ಬ್ಯಾಗ್‌ನಲ್ಲಿ ಬಾಂಬ್ ಅಡಗಿಸಿಟ್ಟಿರುವುದಾಗಿ ಸುಳ್ಳು ಬೆದರಿಕೆ ಹಾಕಿ ಭೀತಿ…

19 mins ago

ಸಂವಿಧಾನವನ್ನು ಯಾವುದೇ ಸರ್ಕಾರ ಬದಲಾಯಿಸಲು ಸಾಧ್ಯವಿಲ್ಲ : ನಿತಿನ್‌ ಗಡ್ಕರಿ

ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸಲಿದೆ ಎನ್ನುವ ಕಾಂಗ್ರೆಸ್‌ ಆರೋಪಕ್ಕೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಖಾತೆ ಸಚಿವ…

31 mins ago

ತೀರ್ಥಯಾತ್ರೆಗೆ ಬಂದ ನಾಲ್ವರು ನದಿಯಲ್ಲಿ ಮುಳುಗಿ ದಾರುಣ ಸಾವು

ತೀರ್ಥಯಾತ್ರೆಗೆಂದು ಅತಿಥಿ ಗೃಹಕ್ಕೆ ಬಂದಿದ್ದವರು ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿ ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೊಲ್ಲಾಪುರದ ಕಾಗಲ್ ತಾಲೂಕಿನ…

49 mins ago

ಪ್ರಾಚೀನರ ಕಲಾ ಕೊಡುಗೆಗಳ ಸಂರಕ್ಷಣೆ ಅಗತ್ಯ: ನೇಮಿರಾಜ ಶೆಟ್ಟಿ

ಇತಿಹಾಸವನ್ನು ಚಿತ್ರಗಳ ಮೂಲಕ ಜೋಪಾಸನೆ ಮಾಡುವ ಕಾಯಕವೂ ಅತ್ಯಂತ ಶ್ರೇಷ್ಠ. ಮುಂದಿನ ಪೀಳಿಗೆಗೆ ಪ್ರಾಚೀನರ ಕಲಾ ಕೊಡುಗೆಯನ್ನು ಸಂರಕ್ಷಣೆ ಮಾಡುವುದು…

54 mins ago

ಮತ್ತೆ ವಿವಾದಕ್ಕೆ ಸಿಲುಕಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ

ಒಂದು ವರ್ಷದ ಸಾಧನೆಯ ರಿಪೋರ್ಟ್ ಕಾರ್ಡ್ ಹಿಡಿದು ಹಿರಿಯ ಬಿಜೆಪಿ ಮುಖಂಡರ ಬಳಿ ಶಾಸಕ ಅಶೋಕ್ ಕುಮಾರ್ ರೈ ತೆರಳಿದ್ದು, ಶಾಸಕ…

1 hour ago