Categories: ಮಂಡ್ಯ

ಸಕಾಲಸೇವೆಯಡಿ  ಕಾಲ ಮಿತಿಯೊಳಗೆ ಸೇವೆ ಒದಗಿಸದಿದ್ದರೆ  ದಂಡ

ಮಂಡ್ಯ: ಜಿಲ್ಲೆಯಲ್ಲಿ  ಸಕಾಲದ ಅನುಷ್ಠಾನ ಬಹಳ  ವ್ಯವಸ್ಥಿತವಾಗಿ ನಡೆಯುತ್ತಿದ್ದು, ಎಲ್ಲ ಅಧಿಕಾರಿಗಳು  ಸಕಾಲ ಕಾಯ್ದೆ  ನಿಗಧಿ ಪಡಿಸಿರುವ  ಕಾಲಮಿತಿಯೊಳಗೆ  ಸೇವೆಯನ್ನು  ನೀಡದಿದ್ದರೆ  ದಂಡ ವಿಧಿಸಲಾಗುವುದು   ಎಂದು  ಅಪರ ಜಿಲ್ಲಾಧಿಕಾರಿ ವಿ.ಆರ್ ಶೈಲಜ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಿಂದ ಆಯೋಜಿಸಲಾಗಿದ್ದ, ಸಕಾಲ ಜಾಥಾಗೆ  ಚಾಲನೆ ನೀಡಿ ಅವರು ಮಾತನಾಡಿ, ಸಕಾಲ ಯೋಜನೆ ದಶಮಾನೋತ್ಸವ  ಆಚರಿಸುವ ಸಂಭ್ರಮದ ಅಂಗವಾಗಿ  ಸಕಾಲದ  ಸೇವೆಯ ಬಗ್ಗೆ  ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು   ಜಾಥಾ ಆಯೋಜಿಸಿದ್ದು, ನಾಗರಿಕರು ಸಕಾಲ ಯೋಜನೆಯ  ಬಗ್ಗೆ ತಿಳಿದುಕೊಂಡು ಸದುಪಯೋಗ

ಕಂದಾಯ ಇಲಾಖೆಯಲ್ಲಿ ಆಟಲ್ ಜನಸ್ನೇಹಿ  ಕೇಂದ್ರದ  48 ಸೇವೆಗಳು, ಭೂಮಿ ಮತ್ತು ಇತರೆ ಕಂದಾಯ ಇಲಾಖೆಯ ಒಟ್ಟು 52 ಸೇವೆಗಳು ಸೇರಿದಂತೆ ಎಲ್ಲಾ ಇಲಾಖೆಗಳ ಒಟ್ಟು 1115 ಸೇವೆಗಳನ್ನು ಸಕಾಲದಡಿಯಲ್ಲಿ  ನೀಡಲಾಗುತ್ತಿದೆ. ಕರ್ನಾಟಕ ರಾಜ್ಯ ಸರ್ಕಾರವು ಸಕಾಲ ಕಾಯ್ದೆಯನ್ನು ಜಾರಿಗೆ ತಂದು  ಕಾಲಮಿತಿಯೊಳಗೆ  ಸಾರ್ವಜನಿಕರಿಗೆ ಸೇವೆಯನ್ನು  ಒದಗಿಸುತ್ತಿದೆ.  ಜಿಲ್ಲೆಯಲ್ಲಿ ಸಕಾಲ ಕಾಯ್ದೆಯನ್ನು ಪರಿಣಾಮಕಾರಿಯಾಗಿ  ಅನುಷ್ಠಾನ  ಮಾಡಲಾಗುತ್ತಿದೆ.  ಸಕಾಲದಲ್ಲಿ  ಕಳೆದ ಎರಡು ವರ್ಷಗಳಲ್ಲಿ  ಮಂಡ್ಯ  ಜಿಲ್ಲೆ  ಇಡೀ ರಾಜ್ಯದಲ್ಲಿ  ಏಳು  ಬಾರಿ  ಮೊದಲ  ಸ್ಥಾನ ಪಡೆದುಕೊಂಡಿದೆ. ಕಳೆದ ತಿಂಗಳು 8ನೇ  ಸ್ಥಾನದಲ್ಲಿದ್ದು   ಮೊದಲ ಸ್ಥಾನ ಪಡೆದುಕೊಳ್ಳಲು  ಪ್ರಯತ್ನಿಸಲಾಗುತ್ತಿದೆ ಎಂದರು.

ಕಂದಾಯ ಇಲಾಖೆ, ಪಂಚಾಯತ್  ರಾಜ್, ಹಿಂದುಳಿದ  ವರ್ಗಗಳು, ಕೆ.ಎಸ್.ಆರ್.ಟಿ. ಸಿ, ಪ್ರಾದೇಶಿಕ ಸಾರಿಗೆ, ಲೋಕೋಪಯೋಗಿ,  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ   ಎಲ್ಲಾ  ನಿಗಮ ಮಂಡಳಿಗಳು ನೀಡುವ ಸೇವೆಯನ್ನು  ಸಕಾಲದಡಿ ತರಲಾಗಿದೆ. ಎಲ್ಲಾ  ಸರ್ಕಾರಿ ಕಚೇರಿಯ ಸಿಬ್ಬಂದಿ  ಮತ್ತು  ಅಧಿಕಾರಿಗಳು  ಸಹ ಜಾಗೃತರಾಗಿ ಸಕಾಲ ಸೇವೆಯನ್ನು  ಕೊಡುವಲ್ಲಿ   ಗುಣಾತ್ಮಕ  ಕೆಲಸವನ್ನು  ಮಾಡಬೇಕು ಎಂದರು.

ಇದೇ ವೇಳೆ ಜಾಥಾ ಜಿಲ್ಲಾಧಿಕಾರಿಗಳ ಕಚೇರಿಯಿಂದ  ಹೊರಟು ಎಂ.ಸಿ ರಸ್ತೆಯ  ಮೂಲಕ  ತಹಶೀಲ್ದಾರ್  ಕಚೇರಿಗೆ ತಲುಪಿತು.  ಕಾರ್ಯಕ್ರಮದಲ್ಲಿ ಮಂಡ್ಯ ಉಪವಿಭಾಗಾಧಿಕಾರಿ ಐಶ್ವರ್ಯ, ತಹಶೀಲ್ದಾರ್ ಸೌಮ್ಯ  ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Sneha Gowda

Recent Posts

ಆರ್​ಸಿಬಿ ಪ್ಲೇ ಆಫ್​ಗೆ ಎಂಟ್ರಿ : ಅದೃಷ್ಟ ತಂದ ಅಶ್ವಿನಿ ಪುನೀತ್ ರಾಜ್​ಕುಮಾರ್ ಎಂಬ ಪೋಸ್ಟ್ ವೈರಲ್‌

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಸೋಲು ಕಂಡಾಗ ಸ್ಯಾಂಡಲ್​ವುಡ್​ ನಟ ದಿವಂಗತ ಪುನೀತ್ ರಾಜ್​ಕುಮಾರ್​ ಅವರ ಪತ್ನಿ ಅಶ್ವಿನಿಯವರನ್ನು…

3 mins ago

ಮೋದಿ ಪಾತ್ರದಲ್ಲಿ ‘ಬಾಹುಬಲಿ’ ಖ್ಯಾತಿಯ ನಟ ಸತ್ಯರಾಜ್

ಸಿನಿ, ರಾಜಕೀಯ, ಕ್ರೀಡಾ ಕ್ಷೇತ್ರದ ದಿಗ್ಗಜರ ಬದುಕಿನ ಮೇಲೆ ಸಿನಿಮಾ ಮಾಡುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಆದರೆ ಇತ್ತೀಚೆಗೆ…

10 mins ago

ಭಾರತೀಯ ಸಿಮ್ ಬಳಸಿ ವಿದೇಶದಲ್ಲಿ ಸೈಬರ್ ವಂಚನೆ: ಓರ್ವ ವಶಕ್ಕೆ

ಭಾರತೀಯ ಸಿಮ್ ಬಳಸಿ ವಿದೇಶದಲ್ಲಿ ಕೂತು ಸೈಬರ್ ವಂಚನೆ ಮಾಡುತ್ತಿದ್ದ ಜಾಲವನ್ನು ಬೆಂಗಳೂರು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರ…

22 mins ago

ಯಾರನ್ನು ಬಂಧಿಸಬೇಕೋ ಅವರನೆಲ್ಲಾ ಬಂಧಿಸಿ ಜೈಲಿಗೆ ತಳ್ಳಿ ಎಂದು ಮೋದಿಗೆ ಚಾಲೆಂಜ್‌ ಹಾಕಿದ ಕೇಜ್ರಿವಾಲ್

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಬಂಧನವಾಗಿ ಜಾಮೀನಿನ ಮೇಲೆ ಹೊರ ಬಂದಿರುವ ಆಮ್ ಆದ್ಮಿ ಪಕ್ಷದ ನಾಯಕ, ದೆಹಲಿ ಮುಖ್ಯಮಂತ್ರಿ…

32 mins ago

ಜುಲೈ 1ರಿಂದ ಮೂರು ಹೊಸ ಕ್ರಿಮಿನಲ್ ಕಾನೂನು ಜಾರಿ

ಮೂರು ಹೊಸ ಕ್ರಿಮಿನಲ್ ಕಾನೂನುಗಳು ಸರ್ಕಾರದ ಅಧಿಸೂಚನೆಯ ಪ್ರಕಾರ ಜುಲೈ 1ರಿಂದ ಜಾರಿಗೆ ಬರಲಿವೆ. ಇದರಲ್ಲಿ ಭಾರತೀಯ ನ್ಯಾಯ ಸಂಹಿತಾ,…

53 mins ago

ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ಪ್ರಕರಣ: ಆರೋಪಿ ಬಿಭವ್‌ ಕುಮಾರ್‌ 5 ದಿನ ಕಸ್ಟಡಿಗೆ

ಆಮ್‌ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್‌ ಆಗಿರುವ ದಿಲ್ಲಿ ಮುಖ್ಯಮಂತ್ರಿ…

1 hour ago